ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯವಿರಲಿಲ್ಲ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

‘ಭಾರತೀಯ ಸಂಸ್ಕೃತಿಯಲ್ಲಿ ಸತಿಪದ್ಧತಿ ಇಲ್ಲ. ಮುಸ್ಲಿಂ ಆಕ್ರಮಣಕಾರರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಹಿಳೆಯರು ಜೀವ ತೆಗೆದುಕೊಂಡಿರಬಹುದು’ ಎಂಬ ಎಸ್.ಎಲ್.ಭೈರಪ್ಪನವರ ಅಭಿಪ್ರಾಯವನ್ನು (ಪ್ರ.ಜಾ., ಜ. 20) ಓದುತ್ತಿದ್ದಂತೆಯೇ, ಮಹಾಭಾರತದ ಮಾದ್ರಿ ನೆನಪಾದಳು.

ಪಾಂಡುರಾಜನ ಮಡದಿ ಮಾದ್ರಿಯು ಗಂಡನ ಚಿತೆಯನ್ನೇರಿದ ಕಾಲಘಟ್ಟದಲ್ಲಿ ಭರತಖಂಡದಲ್ಲಿ ಮುಸ್ಲಿಂ ದೊರೆಗಳ ರಾಜ್ಯಭಾರವಾಗಲಿ, ಆಕ್ರಮಣದ ಭೀತಿಯಾಗಲಿ ಇರಲಿಲ್ಲ. ಭಾರತೀಯ ಸಂಸ್ಕೃತಿಯಲ್ಲಿನ ಸಾಮಾಜಿಕ, ಧಾರ್ಮಿಕ, ಆರ್ಥಿಕ ವ್ಯವಸ್ಥೆಯ ಜೊತೆಜೊತೆಗೆ ಲಿಂಗ ತಾರತಮ್ಯವೂ ಒಳಗೊಂಡು ರೂಪುಗೊಂಡಿದ್ದ ಸತಿ ಪದ್ಧತಿಯು ಹೆಣ್ಣನ್ನು ಉರಿಯುವ ಚಿತೆಯತ್ತ ತಳ್ಳುತ್ತಿದ್ದ ಸಾವಿರಾರು ಘಟನೆಗಳು ಇತಿಹಾಸದ ಉದ್ದಕ್ಕೂ ದಾಖಲಾಗಿವೆ.
-ಸಿ.ಪಿ.ನಾಗರಾಜ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT