ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿವಾರ್ಯವಲ್ಲ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

‘ಸಿನಿಮಾ ರಂಗದಲ್ಲಿ ನನ್ನ ಅಸ್ತಿತ್ವ ಉಳಿಯಲು ದ್ವಂದ್ವಾರ್ಥದ ಸಂಭಾಷಣೆ ಅನಿವಾರ್ಯ’ ಎಂಬ ಚಿತ್ರ ನಿರ್ದೇಶಕ ಗಾಲಿ ಲಕ್ಕಿ ಅವರ ಹೇಳಿಕೆ (ಪ್ರ.ವಾ., ಚಂದನವನ– ಜ. 20) ಬೇಜವಾಬ್ದಾರಿತನದ್ದಷ್ಟೇ ಅಲ್ಲ ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿದೆ.

ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ತುಮಕೂರಿನಲ್ಲಿ ಪೊಲೀಸ್‌ ಅಧಿಕಾರಿಯಿಂದಲೇ ಮಾನಸಿಕ ಅಸ್ವಸ್ಥೆ ಮೇಲೆ ಇತ್ತೀಚೆಗೆ ಇಂಥ ನೀಚ ಕೃತ್ಯ ನಡೆದಿದೆ. ಪರಿಸ್ಥಿತಿ ಹೀಗಿರುವಾಗ  ಕೇವಲ ತಮ್ಮ ಅಸ್ತಿತ್ವ ಉಳಿಯಬೇಕು ಹಾಗೂ ಗಲ್ಲಾಪೆಟ್ಟಿಗೆ ತುಂಬಿದರೆ ಸಾಕು ಎಂಬ ಮನೋಭಾವ ಪ್ರಶ್ನಾರ್ಹ.

ಜನಸಾಮಾನ್ಯರು, ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರು ದ್ವಂದ್ವಾರ್ಥವುಳ್ಳ ಸಿನಿಮಾಗಳನ್ನು ಒಪ್ಪುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಬೇಕಾಗಿದೆ.
-ನರಸಿಂಹರಾಜು ಹೆಗ್ಗೆರೆ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT