ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ ಬಜಾರ್‌ ವಿಶೇಷ ಕೊಡುಗೆ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಿಟೇಲ್‌ ಸರಣಿ ಮಳಿಗೆ  ಫ್ಯೂಚರ್‌ ಗ್ರೂಪ್‌ನ ಬಿಗ್‌ ಬಜಾರ್‌, ಇದೇ 21 ರಿಂದ 26ರವರೆಗೆ ‘ಅತ್ಯಂತ ಅಗ್ಗದ 6 ದಿನಗಳ’ (ಸಬ್ಸೆ ಸಸ್ತೆ 6 ದಿನ್‌) ವಿಶೇಷ ಮಾರಾಟ ಹಮ್ಮಿಕೊಂಡಿದೆ.

ಈ 6 ದಿನಗಳ ಕಾಲ ಎಲ್ಲ ಬಗೆಯ ವೈವಿಧ್ಯಮಯ ಸರಕಗಳ ಮೇಲೆ  ಅಗ್ಗದ ಬೆಲೆ  ಸೇರಿದಂತೆ ಹಲವಾರು ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಲಾಗಿದೆ. ₹ 2 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸರಕು ಖರೀದಿಸುವ ಗ್ರಾಹಕರಿಗೆ   ಫ್ಯೂಚರ್  ಪೇ ವಾಲೆಟ್‌ನಲ್ಲಿ ₹ 400 ಮರಳಿಸಲಾಗುತ್ತಿದೆ.  ಪೇಟಿಎಂ ಬಳಕೆದಾರರಿಗೆ ಸುಲಭ ತಿಂಗಳ ಕಂತು ಮತ್ತು ರಿಯಾಯ್ತಿ ಸೌಲಭ್ಯ ಒದಗಿಸಲಾಗುವುದು.

‘ಪ್ರತಿ ವರ್ಷದ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆಯುವ ಈ ಅಗ್ಗದ ಬೆಲೆಯ ವಿಶೇಷ ಮಾರಾಟವು ಈಗ 12ನೆ ವರ್ಷಕ್ಕೆ ಕಾಲಿರಿಸಿದೆ. ಈ ಬಾರಿ ಗ್ರಾಹಕರಿಗೆ ಹೆಚ್ಚು ರಿಯಾಯ್ತಿ ಒದಗಿಸಲು ‘ ಈಗ ಇನ್ನಷ್ಟು ಅಗ್ಗ’ (ಅಬ್‌ ಔರ್ ಭೀ ಸಸ್ತಾ) ಕೊಡುಗೆ ನೀಡಲಾಗುತ್ತಿದೆ’ ಎಂದು ಸಂಸ್ಥೆಯ ಸಿಇಒ ಸದಾಶಿವ ನಾಯಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT