ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರಿಗೆ ತಟ್ಟದ ನೋಟು ರದ್ದತಿ ಬಿಸಿ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ನೋಟು ರದ್ದು ಕ್ರಮವು ದೇಶಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರು ಮತ್ತು ವಿದೇಶಿ ವಿನಿಮಯ ವರಮಾನದ ಮೇಲೆ ಯಾವುದೇ ದುಷ್ಪರಿಣಾಮ ಬೀರಿಲ್ಲ.
2014ರ ನವೆಂಬರ್‌ನಲ್ಲಿ 7.65 ಲಕ್ಷದಷ್ಟಿದ್ದ  ವಿದೇಶಿ ಪ್ರವಾಸಿಗರ ಸಂಖ್ಯೆ ಈ ನವೆಂಬರ್‌ನಲ್ಲಿ  8.91 ಲಕ್ಷ ತಲುಪಿದೆ. ನೋಟು ರದ್ದು ಮತ್ತು ನಗದು ಅಭಾವದ  ಹೊರತಾಗಿಯೂ ವಿದೇಶಿ ಪ್ರವಾಸಿಗರ ಸಂಖ್ಯೆ ಶೇ 9.3ರಷ್ಟು ಹೆಚ್ಚಾಗಿದೆ.

ಕಳೆದ ನವೆಂಬರ್‌ನಲ್ಲಿ  ₹12,649 ಕೋಟಿಯಷ್ಟಿದ್ದ ವಿದೇಶಿ ವಿನಿಮಯ ವರಮಾನ ಈ ಬಾರಿ ₹14,474 ಕೋಟಿಗೆ ತಲುಪುವ ಮೂಲಕ ಶೇ 14.4 ರಷ್ಟು ಏರಿಕೆ ಕಂಡಿದೆ.

ನವೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ  ಎಂದು ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿದ ಅಂಕಿ  ಸಂಖ್ಯೆ ತಿಳಿಸಿವೆ. ಬ್ರಿಟನ್‌, ಬಾಂಗ್ಲಾದೇಶ ಕೆನಡಾ, ರಷ್ಯಾ, ಆಸ್ಟ್ರೇಲಿಯಾ, ಮಲೇಷ್ಯಾ, ಜರ್ಮನ್‌, ಚೀನಾ ಫ್ರಾನ್ಸ್‌, ಶ್ರೀಲಂಕಾ, ಜಪಾನ್‌, ಸಿಂಗಪುರ, ನೇಪಾಳ ಮತ್ತು  ಥಾಯ್ಲೆಂಡ್‌ ನಂತರದ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT