ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ಯಾಲಕ್ಸಿ ನೋಟ್‌ 7’ ಸ್ಫೋಟ : 23ರಂದು ಮಾಹಿತಿ ನೀಡಲಿರುವ ಸ್ಯಾಮ್ಸಂಗ್‌

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ಸೋಲ್‌ : ತನ್ನ ‘ಗ್ಯಾಲಕ್ಸಿ ನೋಟ್‌ 7’ ಸ್ಮಾರ್ಟ್‌ ಫೋನ್‌ಗಳು ಬಳಕೆಯ ಸಂದರ್ಭದಲ್ಲಿ ಬಿಸಿಯಾಗುತ್ತಿದ್ದುದಕ್ಕೆ ಮತ್ತು ಬೆಂಕಿ ಹತ್ತಿಕೊಳ್ಳಲು ಕಾರಣವೇನು ಎಂಬುದನ್ನು ಜ.23ರಂದು ಬಹಿರಂಗಪಡಿಸುವುದಾಗಿ ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌ ಸಂಸ್ಥೆ ಹೇಳಿದೆ.

ತನ್ನ ಜಾಲತಾಣದಲ್ಲಿ ಈ ಬಗ್ಗೆ ಚೀನಾ, ಇಂಗ್ಲಿಷ್‌ ಹಾಗು  ಕೊರಿಯನ್‌ ಭಾಷೆಗಳಲ್ಲಿ ಮಾಹಿತಿ ಪ್ರಸಾರ ಮಾಡಲಾಗುವುದು.  ಈ ಬಗ್ಗೆ ಸಂಸ್ಥೆ  ನಡೆಸಿದ ಅಧ್ಯಯನದ ವಿವರಗಳು ಇಲ್ಲಿ ಲಭ್ಯವಾಗಲಿವೆ ಎಂದು ಸಂಸ್ಥೆ ಹೇಳಿದೆ.

ಸ್ಯಾಮ್ಸಂಗ್‌ ಬಿಡುಗಡೆ ಮಾಡಿದ್ದ ‘ಗ್ಯಾಲಕ್ಸಿ ನೋಟ್‌ 7’ ಫೋನ್‌ಗಳಿಗೆ ಬೆಂಕಿ ಹತ್ತಿಕೊಂಡ ಹಲವು ಪ್ರಕರಣಗಳು ವರದಿಯಾದ ನಂತರ ಸಂಸ್ಥೆ ಆ ಫೋನ್‌ಗಳನ್ನು ಹಿಂಪಡೆದುಕೊಂಡಿತ್ತು.

ಸಮಸ್ಯೆ ಬಗ್ಗೆ ಆಧ್ಯಯನ ನಡೆಸಿದ ಸ್ಯಾಮ್ಸಂಗ್‌, ‘ಬ್ಯಾಟರಿಯಲ್ಲಿ ಸಮಸ್ಯೆ ಇತ್ತು, ಅದನ್ನು ಬದಲಿಸಲಾಗಿದೆ’ ಎಂಬ ಹೇಳಿಕೆ ನೀಡಿತ್ತು. ಇದಾದ ನಂತರವೂ ಬಳಕೆ ಸಂದರ್ಭದಲ್ಲಿ ಅವು ಬಿಸಿಯಾಗಿ ಸ್ಪೋಟಗೊಂಡ ಪ್ರಕರಣಗಳು ನಡೆದಿದ್ದವು. ಬಳಿಕ ಈ ಫೋನ್‌ಗಳ ಉತ್ಪಾದನೆಯನ್ನೇ ಸ್ಥಗಿತಗೊಳಿಸಲಾಗಿತ್ತು.

ಬ್ಯಾಟರಿ ಗಾತ್ರ ಕಾರಣ ?: ‘ಗ್ಯಾಲಕ್ಸಿ ನೋಟ್‌ 7’ ಮೊಬೈಲ್‌ಗಳು ಬಿಸಿಯಾಗುವುದಕ್ಕೆ ಬ್ಯಾಟರಿಗಳ ಗಾತ್ರ ಸಮನಾಗಿ ಇಲ್ಲದಿದ್ದುದೇ ಕಾರಣ ಎಂದು ಸಂಸ್ಥೆ ನಡೆಸಿದ್ದ ಅಧ್ಯಯನದಿಂದ ತಿಳಿದು ಬಂದಿದೆ ಎಂದು ಪತ್ರಿಕೆಯೊಂದು ವರದಿಮಾಡಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT