ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ತೂಕ: 57 ಸಿಬ್ಬಂದಿ ವಿರುದ್ಧ ಏರ್‌ ಇಂಡಿಯಾ ಕ್ರಮ

Last Updated 20 ಜನವರಿ 2017, 19:41 IST
ಅಕ್ಷರ ಗಾತ್ರ

ನವದೆಹಲಿ: ಹೆಚ್ಚು ತೂಕ ಹೊಂದಿರುವ ವಿಮಾನ ಚಾಲಕರು, ಸಹಾಯಕರು ಮತ್ತು ಗಗನಸಖಿಯರು ಸೇರಿ ಒಟ್ಟು 57 ಸಿಬ್ಬಂದಿಯನ್ನು ವಿಮಾನ ಹಾರಾಟದ ಕೆಲಸದಿಂದ  ಏರ್‌ ಇಂಡಿಯಾ ತೆಗೆದುಹಾಕಿದೆ. ತಾತ್ಕಾಲಿಕವಾಗಿ ಅವರನ್ನು ಕಚೇರಿಯೊಳಗಿನ ಕೆಲಸಗಳಿಗೆ  ನಿಯೋಜಿಸಿದೆ.

ಇವರೆಲ್ಲರೂ ನಿರ್ದಿಷ್ಟ ಕಾಲಮಿತಿಯೊಳಗೆ ತೂಕವನ್ನು ಇಳಿಸಬೇಕು. ಇಲ್ಲದಿದ್ದಲ್ಲಿ ವಿಮಾನಯಾನ ಕರ್ತವ್ಯದಿಂದ ಶಾಶ್ವತವಾಗಿ ಬಿಡುಗಡೆಗೊಳಿಸಿ, ಇತರೆ ಕರ್ತವ್ಯಗಳಲ್ಲಿಯೇ ಉಳಿಸಲಾಗುವುದು ಎಂದು ಎಚ್ಚರಿಸಿದೆ.

ಏರ್‌ ಇಂಡಿಯಾದಲ್ಲಿ 3,800ಕ್ಕೂ ಹೆಚ್ಚು ವಿಮಾನಯಾನ ಸಿಬ್ಬಂದಿ ಇದ್ದಾರೆ. ಈ ಪೈಕಿ 2,500 ಮಹಿಳಾ ಸಿಬ್ಬಂದಿ.  ವೈದ್ಯರು ವಿಮಾನ ಸಿಬ್ಬಂದಿಯ ನಿಯಮಿತ ತಪಾಸಣೆ ನಡೆಸಿ ‘ಅರ್ಹ’, ‘ತಾತ್ಕಾಲಿಕವಾಗಿ ಅನರ್ಹ’ ಮತ್ತು ‘ಶಾಶ್ವತವಾಗಿ ಅನರ್ಹ’ ಎಂದು ವರದಿ ನೀಡುವುದು ನಿಯಮ.

ಈ ಪ್ರಕಾರ ಸಿಬ್ಬಂದಿ ತಪಾಸಣೆ ನಡೆಸಿದಾಗ 57 ಮಂದಿ ಹೆಚ್ಚು ತೂಕ ಹೊಂದಿರುವುದು ತಿಳಿದುಬಂದಿದೆ. ಆದಕಾರಣ ಅವರನ್ನು ತಾತ್ಕಾಲಿಕವಾಗಿ ಇತರೆ ಕರ್ತವ್ಯಗಳಿಗೆ ನಿಯೋಜಿಸಲಾಗಿದೆ. ನಿರ್ದಿಷ್ಟ ಅವಧಿಯಲ್ಲಿ ತೂಕ ಇಳಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದೂವರೆ ವರ್ಷದಲ್ಲಿ  ಈ ರೀತಿಯ ಕ್ರಮ ಕೈಗೊಂಡಿರುವುದು ಇದು ಎರಡನೇ ಸಲ. 2015ರಲ್ಲಿ 125 ಸಿಬ್ಬಂದಿಯನ್ನು ವಿಮಾನಯಾನ ಕರ್ತವ್ಯದಿಂದ ತೆಗೆದು ಬೇರೆ ಕೆಲಸಗಳಿಗೆ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT