ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ಗೆ ಚಿರಾಗ್‌ ಶತಕದ ಆಸರೆ

ಮೊದಲ ದಿನ 300 ರನ್ ದಾಖಲು
Last Updated 20 ಜನವರಿ 2017, 19:49 IST
ಅಕ್ಷರ ಗಾತ್ರ

ಮುಂಬೈ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಚಿರಾಗ್ ಗಾಂಧಿ ಅವರ ಚೊಚ್ಚಲ ಶತಕದ ಬಲದಿಂದಾಗಿ ಗುಜರಾತ್ ತಂಡ ಇರಾನಿ ಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಇತರೆ ತಂಡದ ಎದುರು ಉತ್ತಮ ಮೊತ್ತ ಕಲೆ ಹಾಕಿದೆ.

ಇಲ್ಲಿನ ಬ್ರಬೋರ್ನ್‌ ಕ್ರೀಡಾಂಗಣ ದಲ್ಲಿ ಶುಕ್ರವಾರ ಆರಂಭವಾದ ಐದು ದಿನಗಳ ಪಂದ್ಯದಲ್ಲಿ  ಟಾಸ್ ಗೆದ್ದ ಪಾರ್ಥಿವ್‌ ಪಟೇಲ್‌ ನಾಯಕತ್ವದ ರಣಜಿ ಚಾಂಪಿಯನ್‌ ಗುಜರಾತ್‌ 88 ಓವರ್‌ ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 300 ರನ್ ಗಳಿಸಿತು. ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಕಾಡಿದರೂ ಚಿರಾಗ್ ಆಸರೆಯಾದರು.

ಚೊಚ್ಚಲ ರಣಜಿ ಟ್ರೋಫಿ ಗೆದ್ದಿರುವ ಗುಜರಾತ್‌ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ಪ್ರಿಯಾಂಕ್‌ ಪಾಂಚಾಲ್‌ ಟೂರ್ನಿಯಲ್ಲಿ ಒಟ್ಟು ಹೆಚ್ಚು ರನ್ ಹೊಡೆ ದವರ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿ ದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ ಸಮಿತ್‌ ಗೊಹೆಲ್‌ ಕೂಡ 800ಕ್ಕಿಂತಲೂ ಹೆಚ್ಚು ರನ್ ಕಲೆ ಹಾಕಿದ್ದಾರೆ. ಇವರಿಬ್ಬರೂ ಇಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.

102 ನಿಮಿಷ ಕ್ರೀಸ್‌ನಲ್ಲಿದ್ದ ಪಾಂಚಾಲ್‌ ರನ್‌ ಗಳಿಸಲು ಪರದಾಡಿ ದರು. ಗೊಹೆಲ್ ರನ್‌ ಖಾತೆ ಆರಂಭಿ ಸುವ ಮೊದಲೇ ವಿಕೆಟ್‌ ಒಪ್ಪಿಸಿದರು. ರಣಜಿ ಫೈನಲ್‌ನಲ್ಲಿ ಶತಕ ಬಾರಿಸಿದ್ದ ಪಾರ್ಥಿವ್‌ 11 ರನ್ ಗಳಿಸಿದ್ದಾಗ ಔಟಾ ದರು. ಆದ್ದರಿಂದ ಗುಜರಾತ್ ತಂಡ ನೂರು ರನ್ ಗಳಿಸುವ ಮೊದಲೇ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದು ಕೊಂಡು ಸಾಧಾರಣ ಮೊತ್ತಕ್ಕೆ ಕುಸಿ ಯುವ ಭೀತಿಗೆ ಸಿಲುಕಿತ್ತು. ಭೋಜನ ವಿರಾಮದ ವೇಳೆಗೆ ಮೂರು ವಿಕೆಟ್‌ಗಳು ಪತನವಾಗಿದ್ದವು.

ಐದನೇ ವಿಕೆಟ್‌ಗೆ ಮನಪ್ರೀತ್ ಜುನೇಜಾ ಮತ್ತು ಚಿರಾಗ್‌ 27.5 ಓವರ್‌ ಗಳಲ್ಲಿ 109 ರನ್ ಕಲೆ ಹಾಕಿ ತಂಡವನ್ನು  ಸಂಕಷ್ಟದಿಂದ ಪಾರು ಮಾಡಿದರು. ಈ ಜೋಡಿ ಉತ್ತಮವಾಗಿ ರನ್‌ ಗಳಿಸುತ್ತಿ ತ್ತು. ಆದರೆ ಸಾಂದರ್ಭಿಕ ಸ್ಪಿನ್ನರ್‌ ಅಖಿಲ್‌ ಹೆರ್ವಾಡ್ಕರ್‌ ಅವರು ಜುನೇಜಾಗೆ ಪೆವಿಲಿಯನ್‌ ಹಾದಿ ತೋರಿಸಿದರು.
ಆರನೇ ವಿಕೆಟ್‌ಗೆ ಚಿರಾಗ್‌ ಅವರು ಕರಣ್‌ ಪಟೇಲ್‌ ಜೊತೆಗಿನ ಪಾಲುದಾರಿಕೆಯ ಆಟದಲ್ಲಿ 40 ರನ್ ಗಳಿಸಿದರು. ಕರಣ್‌ 31 ನಿಮಿಷ ಕ್ರೀಸ್‌ನಲ್ಲಿದ್ದು 28 ಎಸೆತಗಳನ್ನು ಎದುರಿಸಿದರು. ಗಳಿಸಿದ್ದು 13 ರನ್ ಮಾತ್ರ. ಕೊನೆಯಲ್ಲಿ ಬಾಲಂಗೋಚಿಗಳು ಬೇಗನೆ ವಿಕೆಟ್‌ ಒಪ್ಪಿಸಿದ ಕಾರಣ ಚಿರಾಗ್‌ ರನ್ ಗಳಿಸಲು ಸಾಕಷ್ಟು ಪರದಾಡಿದರು.

ಮೊದಲು ಮಿಂಚು, ನಂತರ ಪರದಾಟ: ಆರಂಭದಲ್ಲಿ ಬೇಗನೆ ವಿಕೆಟ್‌ಗಳನ್ನು ಉರುಳಿಸಿದ ಭಾರತ ಇತರೆ ತಂಡದ ವೇಗಿಗಳು ನಂತರ ವಿಕೆಟ್‌ ಕಬಳಿಸಲು ಪರದಾಡಿದರು. ವೇಗಿಗಳಾದ ಪಂಕಜ್‌ ಸಿಂಗ್ ಮತ್ತು ಸಿದ್ದಾರ್ಥ್‌ ಕೌಲ್‌ ಕ್ರಮವಾಗಿ ಮೂರು ಹಾಗೂ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಈ ಬಾರಿಯ ಇರಾನಿ ಕಪ್‌ ಮಹತ್ವ ಪಡೆದುಕೊಂಡಿದೆ.
*
ಗುಜರಾತ್‌  ಮೊದಲ ಇನಿಂಗ್ಸ್‌ 8 ಕ್ಕೆ 300
(88 ಓವರ್‌ಗಳಲ್ಲಿ)

ಸಮಿತ್‌ ಗೊಹೆಲ್‌ ಎಲ್‌ಬಿಡಬ್ಲ್ಯು ಬಿ ಪಂಕಜ್‌ ಸಿಂಗ್‌  00
ಪ್ರಿಯಾಂಕ್‌ ಪಾಂಚಾಲ್‌ ಸಿ ಕರುಣ್‌ ನಾಯರ್ ಬಿ ಪಂಕಜ್‌ ಸಿಂಗ್‌  30
ಧ್ರುವ ರಾವಲ್‌ ಸಿ ವೃದ್ಧಿಮಾನ್ ಸಹಾ ಬಿ ಸಿದ್ದಾರ್ಥ್‌ ಕೌಲ್‌  39
ಪಾರ್ಥಿವ್‌ ಪಟೇಲ್‌ ಬಿ ಸಿದ್ದಾರ್ಥ್‌ ಕೌಲ್‌  11
ಮನಪ್ರೀತ್‌ ಜುನೇಜಾ ಸಿ ಚೇತೇಶ್ವರ ಪೂಜಾರ ಬಿ ಅಖಿಲ್‌ ಹೆರ್ವಾಡ್ಕರ್‌  47

ಚಿರಾಗ್‌ ಗಾಂಧಿ ಬ್ಯಾಟಿಂಗ್‌  136
ಕರಣ್‌ ಪಟೇಲ್‌ ಸಿ ವೃದ್ಧಿಮಾನ್‌ ಸಹಾ ಬಿ ಸಿದ್ದಾರ್ಥ್‌ ಕೌಲ್‌  13
ಟಿ. ಮೋಹಿತ್‌ ಸಿ ಮನೋಜ್‌ ತಿವಾರಿ ಬಿ ಸಿದ್ದಾರ್ಥ್‌ ಕೌಲ್‌  04
ಚಿಂತನ್‌ ಗಜಾ ಎಲ್‌ಬಿಡಬ್ಲ್ಯು ಬಿ ಪಂಕಜ್‌ ಸಿಂಗ್‌  08
ಹಾರ್ದಿಕ್‌ ಪಟೇಲ್‌ ಬ್ಯಾಟಿಂಗ್‌  09
ಇತರೆ: (ಲೆಗ್‌ ಬೈ–1, ವೈಡ್‌–2) 03

ವಿಕೆಟ್‌ ಪತನ: 1–0 (ಗೊಹೆಲ್‌; 0.6), 2–55 (ಪಾಂಚಾಲ್‌; 20.3), 3–81 (ಪಾರ್ಥಿವ್‌; 30.3), 4–82 (ಧ್ರುವ; 32.3), 5–191 (ಮನಪ್ರೀತ್‌; 60.2), 6–231 (ಕರಣ್‌; 68.5), 7–237 (ಮೋಹಿತ್‌; 72.4), 8–261 (ಗಜಾ; 80.4).

ಬೌಲಿಂಗ್‌:  ಪಂಕಜ್ ಸಿಂಗ್‌ 17–4–77–3, ಸಿದ್ದಾರ್ಥ್‌ ಕೌಲ್‌ 21–3–73–4, ಮಹಮ್ಮದ್‌ ಸಿರಾಜ್‌ 15–5–44–0, ಕುಲದೀಪ್‌ ಯಾದವ್‌ 15–3–51–0, ಶಹಬಾಜ್‌ ನದೀಮ್‌ 17–2–41–0, ಅಖಿಲ್‌ ಹೆರ್ವಾಡ್ಕರ್‌ 3–0–13–1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT