ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತಕ್ಕೆ ಬಂದ ಭಾರತ ತಂಡ

Last Updated 20 ಜನವರಿ 2017, 19:54 IST
ಅಕ್ಷರ ಗಾತ್ರ

ಕೋಲ್ಕತ್ತ : ಇಂಗ್ಲೆಂಡ್‌ ವಿರು ದ್ಧದ ಮೂರನೇ ಏಕದಿನ ಕ್ರಿಕೆಟ್‌ ಪಂದ್ಯ ವಾಡಲು ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡವು ಶುಕ್ರವಾರ ಇಲ್ಲಿಗೆ ಬಂದಿತು. ಈಡನ್ ಗಾರ್ಡನ್ಸ್‌ ಕ್ರೀಡಾಂಗಣ ದಲ್ಲಿ ಜನವರಿ 22ರಂದು ಪಂದ್ಯ ನಡೆಯಲಿದೆ.

ಆತಿಥೇಯ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್‌ ಗಾಯ ದಿಂದ ಬಳಲುತ್ತಿರುವ ಕಾರಣ ಇಲ್ಲಿಗೆ ಬಂದವರೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರ ಳಿದರು ಎಂದು ಸ್ಥಳೀಯ ಮೂಲಗಳಿಂದ ತಿಳಿದು ಬಂದಿದೆ.

ಎಡಗೈ ಬ್ಯಾಟ್ಸ್‌ಮನ್‌ ಧವನ್‌  ಹೋದ ವರ್ಷದ ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದ ಟೆಸ್ಟ್‌ ಪಂದ್ಯದ  ವೇಳೆ  ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಅವರು ಇಂಗ್ಲೆಂಡ್‌ ಎದುರಿನ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಮೊದಲ ಪಂದ್ಯ ದಲ್ಲಿ 1 ಮತ್ತು ಕಟಕ್‌ನಲ್ಲಿ ನಡೆದ ಎರಡನೇ ಹೋರಾಟದಲ್ಲಿ 11 ರನ್‌ ಗಳಿಸಿ ಔಟಾಗಿದ್ದರು.

ಸ್ಪರ್ಧಾತ್ಮಕ ವಿಕೆಟ್: ಮೂರನೇ ಪಂದ್ಯಕ್ಕೆ ಇಲ್ಲಿನ ಪಿಚ್ ಸ್ಪರ್ಧಾತ್ಮಕವಾಗಿರುತ್ತದೆ ಎಂದು ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

‘ಇಲ್ಲಿನ ಪಿಚ್‌ ಸ್ಪರ್ಧಾತ್ಮಕವಾಗಿರ ಲಿದೆ. ಉತ್ತಮ ಕ್ರಿಕೆಟ್‌ ಪಂದ್ಯವನ್ನು ನೋಡಲು ಅಭಿಮಾನಿಗಳು ಒಳ್ಳೆಯ ಅವಕಾಶ ಲಭಿಸಲಿದೆ’ ಎಂದು ಅವರು ತಿಳಿಸಿದ್ದಾರೆ.

ಕಟಕ್‌ ವರದಿ: ಏಕದಿನ ಸರಣಿ ಸೋತು ಬೇಸರದಲ್ಲಿರುವ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಎರಡನೇ ಪಂದ್ಯದಲ್ಲಿ ನಿಧಾನಗತಿ ಯಲ್ಲಿ ಫೀಲ್ಡಿಂಗ್ ಮಾಡಿದ್ದಕ್ಕಾಗಿ ಐಸಿಸಿ ದಂಡ ವಿಧಿಸಿದೆ. ನಾಯಕ ಏಯೊನ್‌ ಮಾರ್ಗನ್‌ ಅವರಿಗೆ ಪಂದ್ಯದ ಸಂಭಾ ವನೆಯ ಶೇಕಡ 20ರಷ್ಟು ಮತ್ತು ಉಳಿದ ಆಟಗಾರರು ಶೇಕಡ 10ರಷ್ಟು ಹಣವನ್ನು ದಂಡ ರೂಪದಲ್ಲಿ ಕಟ್ಟಬೇಕಿದೆ.

ಮಕ್ಕಳೊಂದಿಗೆ ಬೆರೆತ ಯುವರಾಜ್‌: ಕೋಲ್ಕತ್ತಕ್ಕೆ ತೆರಳುವ ಮುನ್ನ ಭಾರತ ತಂಡದ ಕ್ರಿಕೆಟಿಗ ಯುವರಾಜ್‌ ಸಿಂಗ್ ಅವರು ಭುವನೇಶ್ವರದಲ್ಲಿ ಕ್ಯಾನ್ಸರ್‌ ಪೀಡಿತ ಮಕ್ಕಳ ಜೊತೆ ಹಲವು ಗಂಟೆ ಕಳೆದರು.

ಮಾಜಿ ಕ್ರಿಕೆಟಿಗರಾದ ದೇಬಶಿಶ್‌ ಮೊಹಂತಿ ಮತ್ತು ಶಿವಸುಂದರ ದಾಸ್‌ ಅವರು ಮಕ್ಕಳ ಜೊತೆ ಬೆರೆಯಲು ಯುವರಾಜ್‌ಗೆ ಅವಕಾಶ ದೊರಕಿಸಿ ಕೊಟ್ಟರು. ಯುವರಾಜ್‌  ಕೂಡ ಕ್ಯಾನ್ಸರ್‌ ನಿಂದ ಬಳಲಿದ್ದರು. ಬಾರಾಬತಿ ಕ್ರೀಡಾಂ ಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅವರು ಸೊಬಗಿನ ಬ್ಯಾಟಿಂಗ್ ಮೂಲಕ 150 ರನ್ ಗಳಿಸಿ ಕ್ರಿಕೆಟ್‌ ಪ್ರೇಮಿಗಳ ಮನ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT