ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವೇಶ್ವರ ಪುತ್ಥಳಿಗೆ ಅವಮಾನ: ಪ್ರತಿಭಟನೆ

Last Updated 21 ಜನವರಿ 2017, 5:30 IST
ಅಕ್ಷರ ಗಾತ್ರ

ವಿಜಯಪುರ: ಮಹಾನ್ ವ್ಯಕ್ತಿಗಳ ಪ್ರತಿಮೆಗಳಿಗೆ ಅವಮಾನ ಮಾಡಿದ ಅನೇಕ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿರುವುದು ಖಂಡನೀಯ. ಇಂತಹ ಕೃತ್ಯಗಳನ್ನು ಎಸಗಿದ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಕೀಲರು ಶುಕ್ರವಾರ ನ್ಯಾಯಾಲಯದ ಕಾರ್ಯ- ಕಲಾಪಗಳಿಂದ ದೂರ ಉಳಿದು ಪ್ರತಿಭಟನೆಗೆ ಅಣಿಯಾದರು.

ವಕೀಲರ ಸಂಘದ ಕಾರ್ಯಾಲಯದಿಂದ ಬೈಕ್ ರ್‌್ಯಾಲಿ ನಡೆಸಿದ ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ವಿಜಯಪುರ ತಾಲ್ಲೂಕು ನಿಡೋಣಿ ಗ್ರಾಮದಲ್ಲಿ ವಿಶ್ವ ಗುರು ಬಸವಣ್ಣನವರ ಮೂರ್ತಿ, ಸಿಂದಗಿ ತಾಲ್ಲೂಕಿನಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆಯನ್ನು ವಕೀಲರು ತೀವ್ರವಾಗಿ ಖಂಡಿಸಿದರು.

ವಕೀಲ ವಿ.ಎಸ್.ಖಾಡೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಐ.ಎಸ್.ಘಾಳಿ ಮಾತನಾಡಿ ಮಹಾನ್ ಮಾನವತಾವಾದಿ ಬಸವಣ್ಣನವರ ಮೂರ್ತಿಗೆ ಅವಮಾನ ಮಾಡಿರುವ ಕ್ರಮವನ್ನು ಜಗತ್ತಿನ ಎಲ್ಲ ವಿಚಾರವಂತರು ಖಂಡಿಸಬೇಕಾದ ಸಂಗತಿ. ತಪ್ಪಿತಸ್ಥ ವ್ಯಕ್ತಿಗಳನ್ನು ಪೊಲೀಸರು ಶೀಘ್ರವೇ ಪತ್ತೆ ಹಚ್ಚಿ ಅವರನ್ನು ಬಂಧಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಕೀಲ ಎಸ್.ಎಸ್.ಖಾದ್ರಿ ಇನಾಮದಾರ ಮಾತನಾಡಿದರು. ಉಪಾಧ್ಯಕ್ಷ ಎಸ್.ವಿ.ಹಜೇರಿ, ಕಾರ್ಯದರ್ಶಿ ಎ.ಎಸ್.ದೇಸಾಯಿ, ಸಂಜೀವಕುಮಾರ ಗದ್ಯಾಳ, ಸುನೀಲ ಅಳಗಿ, ಬಸವರಾಜ ಸಾವಳಗಿ, ಎಂ.ಎ. ಕಾಖಂಡಕಿ, ಎಸ್.ಟಿ. ಧಾರವಾಡಕರ, ಎನ್.ಎಂ. ಹುಂಡೇಕರ, ಎ.ಬಿ. ಪಾಟೀಲ, ಗಾಳಪ್ಪಗೋಳ ವಿ.ಎಚ್, ಎಂ.ಎಸ್. ಹತ್ತಿ,  ಜಿ.ಬಿ. ಕೋಳೂರ, ಅಭಯ ನಾಗಠಾಣ, ವಿಜಯಕರ, ಸಂಜೀವ ಅಂಕಲಗಿ, ಸತೀಶ, ಸಿ.ಎಂ. ಅಂಗಡಿ, ಆರ್.ಎಸ್.ಅಂಗಡಿ, ಸತೀಶ ಕೊಕಟನೂರ, ಕೆ.ಎಚ್. ನಿಡೋಣಿ, ಎ.ಎಚ್. ಬನಸೋಡೆ, ಎಸ್.ಟಿ.ಜುನೇದಿ, ಅಲ್ತಾಫ್ ಪಟೇಲ, ಸಿ.ಪಿ. ಪಾಟೀಲ, ಬಿ.ಎಂ. ಯಾತಗಿರಿ, ಎಸ್.ಜಿ. ಗಂಡೋಳಿ ಪಾಲ್ಗೊಂಡಿದ್ದರು.

ಗೋಲಗೇರಿಯಲ್ಲಿ ಧರಣಿ
ಸಿಂದಗಿ: ನಿಡೋಣಿ ಗ್ರಾಮದಲ್ಲಿ ಬಸವಣ್ಣನವರ ಪುತ್ಥಳಿಗೆ ಅವಮಾನಗೊಳಿಸಿರುವುದನ್ನು ಖಂಡಿಸಿ ತಾಲ್ಲೂಕಿನ ಗೋಲಗೇರಿ ಹಾಗೂ ಸಿಂದಗಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಗೋಲಗೇರಿ ಗ್ರಾಮದಲ್ಲಿ ಬಸವಾಭಿಮಾನಿಗಳು ರಸ್ತೆ ತಡೆ ಪ್ರತಿಭಟನೆ ಜೊತೆಗೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಸಂತೋಷ ಪಾಟೀಲ ಡಂಬಳ ಮಾತನಾಡಿದರು. ಪ್ರತಿಭಟನೆಯಲ್ಲಿ ಗೌಡಣ್ಣ ಆಲಮೇಲ, ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಶೈಲ ಚಳ್ಳಗಿ, ಬಸವರಾಜ ಮಾರಲಬಾವಿ, ಮಾಂತೇಶ ಸಾತಿಹಾಳ, ಮಹಾದೇವ ರಾಠೋಡ, ಸೈಫನ್ ಕೋರವಾರ, ಚಂದಪ್ಪ ನಾಯ್ಕೋಡಿ, ಅರವಿಂದ ಆಂದೇಲಿ, ರಾಜೂ ಹಿರೇಮಠ, ಮಹಾಬರಿ ಹಳಿಮನಿ, ಮೈಬೂಬ ನಾಗಾವಿ, ಸಿದ್ದು ಆಲಮೇಲ ಭಾಗವಹಿಸಿದ್ದರು.

ಕ್ಷೀರಾಭಿಷೇಕ
ಪಟ್ಟಣದ ಬಸವೇಶ್ವರ ವೃತ್ತದಲ್ಲಿನ ಬಸವಣ್ಣವರ ಪುತ್ಥಳಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಿಡೋಣಿ ಘಟನೆ ಹಾಗೂ ಕೊಳ್ಳೆಗಾಲದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಕರವೇ ಪ್ರಮುಖರಾದ ಸಂದೀಪ ಚೌರ, ಶ್ರೀಕಾಂತ ಬಿಜಾಪುರ, ಚೇತನ ರಾಂಪೂರ, ಶರಣು ಕಕ್ಕಳಮೇಲಿ, ವಿಕ್ರಮ ಪಂಡಿತ, ಗೊಲ್ಲಾಳ ಬ್ಯಾಕೋಡ, ರವಿ ಸಿಂದಗಿ, ರವಿಕಾಂತ ಬಿರಾದಾರ, ಶ್ಯಾಮ ಬಾಗೇವಾಡಿ, ಮಂಜೂ ಬಬಲೇಶ್ವರ, ಸಂತೋಷ ಶಂಬೇವಾಡ, ಮುತ್ತು ಹಿಪ್ಪರಗಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ವಿವಿಧ ಬೇಡಿಕೆ ಈಡೇರಿಕೆಗೆ ರೈತರ ಒತ್ತಾಯ
ಬಸವನಬಾಗೇವಾಡಿ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಂತರ ತಹಶೀಲ್ದಾರ್ ಎಂ.ಎನ್‌.ಚೋರಗಸ್ತಿ ಅವರಿಗೆ ಮನವಿ ಸಲ್ಲಿಸಿದರು.


ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಶೀನಾಥ ಸಿಂಧೂರ, ಪ್ರಧಾನ ಕಾರ್ಯದರ್ಶಿ ಲಿಂಗರಾಜ ಆಲೂರ ಮಾತನಾಡಿ ಭೀಕರ ಬರಗಾಲಕ್ಕೆ ಸಿಕ್ಕು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ದನ ಕರುಗಳಿಗೆ ಮೇವಿನ ಕೊರತೆಯಾಗಿದೆ. ಅಲ್ಪ ಸ್ವಲ್ಪ ಬೆಳೆ ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗದೆ  ತೊಂದರೆ ಅನುಭವಿಸುತ್ತಿದ್ದಾರೆ ಎಂದು ರೈತರು ಹೇಳಿದರು.

ಈಗಾಗಲೇ ರಾಜ್ಯದಲ್ಲಿ  ಸಾಲಬಾಧೆಯಿಂದ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ತೊಂದರೆಗಳನ್ನು ಅರಿತು ನೆರವಿಗೆ ಬರಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಎಪಿಎಂಸಿಯಲ್ಲಿ ಪ್ರಭಾವಿಗಳ ತೊಗರಿ ಖರೀದಿಸಲಾಗುತ್ತಿದೆ. ಸಣ್ಣ ರೈತರಿಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಎಲ್ಲ ರೈತರ ತೊಗರಿ ಖರೀದಿಸಬೇಕು. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಶಿವಪ್ಪ ಇಂಗಳೇಶ್ವರ, ಈರಯ್ಯ ಹಿರೇಮಠ, ವಿಠ್ಠಲ ಲಮಾಣಿ, ಆರ್.ಪಿ.ಲಮಾಣಿ, ಶಂಕರ ಲಮಾಣಿ, ಮುತ್ತು ಸವಣೂರ, ಶಟ್ಟೆಪ್ಪ ಲಮಾಣಿ, ರೇವಣಪ್ಪ ಲಮಾಣಿ, ರಾಜು ಲಮಾಣಿ, ಪರಸು ಲಮಾಣಿ, ಸಿವಲಿಂಗ ನಾಗೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT