ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೂ ಕಬಳಿಕೆ ಅಪರಾಧ’

Last Updated 21 ಜನವರಿ 2017, 5:48 IST
ಅಕ್ಷರ ಗಾತ್ರ

ಚಿಕ್ಕಮಗಳೂರು:  ಭೂಮಿ ಒತ್ತುವರಿ ಮಾಡುವುದು ಸೇರಿದಂತೆ ಕಾನೂನು ಬಾಹಿರವಾಗಿ ಸರ್ಕಾರಿ ಭೂಮಿ ಕಬಳಿಸು ವುದು ದಂಡನೀಯ ಅಪರಾಧ ಎಂದು ನ್ಯಾಯಾಧೀಶ ಎಚ್.ಎನ್. ನಾರಾಯಣ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ಹಿಂದೂ ಧಾರ್ಮಿಕ ಸಂಸ್ಥೆ, ವಕ್ಫ್, ಧರ್ಮದಾಯಿ ದತ್ತಿಗಳಿಗೆ, ಸ್ಥಳೀಯ ಪ್ರಾಧಿಕಾರಕ್ಕೆ ಸೇರಿದ ಭೂಮಿ ಯನ್ನು ಕಾನೂನು ಬಾಹಿರ ಒತ್ತುವರಿ ಮಾಡಿಕೊಂಡಿರುವುದು ಅಪರಾಧ. ಕೆಲವರು ಸಾರ್ವಜನಿಕ ಅಕ್ರಮವಾಗಿ ಭೂಮಿ ಕಬಳಿಸುತ್ತಿದ್ದಾರೆ. ನಕಲು ಗೃಹ ನಿರ್ಮಾಣ ಸಂಸ್ಥೆ ಸೃಷ್ಟಿಸಿ ಸಾರ್ವ ಜನಿಕರಿಗೆ ಮೋಸದಿಂದ ಸೈಟ್‌ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇವುಗಳಿಗೆ ಕಡಿವಾಣ ಹಾಕಲು ಈ ನಿಯಮ ಅನುಕೂಲವಾಗಲಿದೆ. ಸಾರ್ವ ಜನಿಕರ ಸುವ್ಯವಸ್ಥೆ ಅತಿಕೂಲ ಪರಿಣಾಮ ತಡೆಯಲು ಸಾಧ್ಯ ಎಂದರು.

ಭೂಕಬಳಿಕೆ ಸಾಬೀತಾದ ಅಪರಾ ಧಕ್ಕೆ 1ರಿಂದ 3ವರ್ಷಗಳ ಜೈಲು. ₹25ಸಾವಿರ ದಂಡ ವಿಧಿಸಲಾಗುವುದು. ಒತ್ತುವರಿ ಮಾಡಿದ ಜಮೀನನ್ನು ಮಾರಾಟ ಅಥವಾ ಹಂಚಿಕೆ ಮಾಡಿದ್ದರೆ. ಈ ಉದ್ದೇಶದಿಂದ ಅದನ್ನು ಜಾಹಿರಾತು ಪಡಿಸುವುದು ಅಥವಾ ಸ್ವಾಧೀನದ ಲ್ಲಿಟ್ಟುಕೊಳ್ಳುವುದು ಅಪರಾಧ ಎಂದರು.

ಜಿಲ್ಲಾಧಿಕಾರಿ ಜಿ.ಸತ್ಯವತಿ ಮಾತ ನಾಡಿ, ಜಿಲ್ಲೆಯಲ್ಲಿ 10ಎಕರೆ ಪ್ರದೇಶ ಕ್ಕಿಂತ ಹೆಚ್ಚು ಭೂಮಿ ಒತ್ತುವರಿ ಮಾಡಿದ ಬಗ್ಗೆ 580 ಪ್ರಕರಣಗಳನ್ನು ಗುರುತಿಸ ಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕೆಲವು ಕಾನೂನುಬಾಹಿರ ಒತ್ತುವರಿ ಪಡಿಸಿರುವುದನ್ನು ಖುಲಾಸೆ ಪಡಿಸ ಲಾಗಿದೆ.

ಅವುಗಳನ್ನು ಮರುಸ್ವಾಧೀನ ಪಡಿಸಿಕೊಳ್ಳಲಾಗಿದೆ. ನಾಮ ಫಲಕ ಗಳನ್ನು ಅಳವಡಿಸಲಾಗಿದೆ. ಈ ಭೂಮಿ ಯಲ್ಲಿ ಬೆಳೆದ ಕಾಫಿಗಿಡ ಗಳನ್ನು ತೆರವು ಗೊಳಿಸಲು ಹಾಗೂ ಸುತ್ತು ಕಂದಕ ನಿರ್ಮಿಸಲು ಅನುದಾನ ಕೊರತೆಯಿದೆ ಎಂದರು.  ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಉಪವಿಭಾಗಾಧಿಕಾರಿ ಸಂಗಪ್ಪ, ಸರೋಜ, ಡಿಎಫ್‌ಓ ಚಂದ್ರಪ್ಪ, ತಹಸೀಲ್ದಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT