ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24ರಿಂದ ಯಕ್ಷದೇಗುಲ ತಂಡದಿಂದ ಪ್ರಾತ್ಯಕ್ಷಿಕೆ

Last Updated 21 ಜನವರಿ 2017, 6:00 IST
ಅಕ್ಷರ ಗಾತ್ರ

ಬ್ರಹ್ಮಾವರ: ಬೆಂಗಳೂರಿನ ಯಕ್ಷದೇಗುಲ ಸಂಸ್ಥೆ ಉಡುಪಿ ಜಿಲ್ಲೆಯ ಆಯ್ದ ಪ್ರಾಥ ಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿ ಗಳಿಗೆ ಯಕ್ಷಾಂತರಂಗವನ್ನು ಪರಿಚಯಿ ಸುವ ಉದ್ದೇಶದಿಂದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಇದೇ 24ರಿಂದ 28ರವರೆಗೆ ಹಮ್ಮಿಕೊಂಡಿದೆ.

ಕಳೆದ ನಾಲ್ಕು ದಶಕಗಳಿಂದ ಬೆಂಗ ಳೂರಿನ ಯಕ್ಷ ದೇಗುಲವು ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಈ ನಿಟ್ಟಿನಲ್ಲಿ ವಾಚಿಕ, ಆಂ ಗಿಕ, ಸಾತ್ವಿಕ, ಆಹಾರ್ಯಗಳನ್ನೊಳ ಗೊಂಡ ಪರಿಪೂರ್ಣ ಕಲೆಯೆನಿಸಿರುವ ಯಕ್ಷಗಾನದ ಮೂಲ ಸತ್ತ್ವವನ್ನು ಹೊಸ ತಲೆಮಾರಿನವರಿಗೆ ತಿಳಿಸುವ ಸಲುವಾಗಿ ವಿನೂತನ ಪ್ರಯತ್ನಕ್ಕೆ ನಾಂದಿ ಹಾಡಿದೆ.

ಹೆಜ್ಜೆಗಾರಿಕೆ, ಪದಾಭಿನಯ, ಬಣ್ಣದ ವೇಷದ ಮುಖವರ್ಣಿಕೆ, ಸಭಾಲಕ್ಷಣದ ಬಾಲಗೋಪಾಲ, ಸ್ತ್ರೀವೇಷ, ಅಟ್ಟೆಕ್ಯಾ ದಿಗೆ, ಮುಂದಲೆ ಕಟ್ಟುವ ಕ್ರಮ, ವಸ್ತ್ರ ವಿನ್ಯಾಸಗಳ ಕುರಿತು ಮಾಹಿತಿ ಮತ್ತು ಪೌರಾಣಿಕ ಪ್ರಸಂಗಗಳ ಸ್ವಾರಸ್ಯಕರ ಸನ್ನಿ ವೇಶಗಳ ಪ್ರಸ್ತುತಿಯನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ  ತಿಳಿಸಿಕೊಡ ಲಾಗುವುದು.

ಈಗಾಗಲೇ ಶಾಲೆಗಳಲ್ಲಿ ನೀಡುತ್ತಿರುವ ಯಕ್ಷಶಿಕ್ಷಣ ಮತ್ತು ಯಕ್ಷ ಕಲಿಕೆಗಾಗಿಯೇ ಸಿದ್ಧ ಪಠ್ಯ ರೂಪಗೊಳ್ಳು ತ್ತಿರುವ ಸಂದರ್ಭದಲ್ಲಿ ಈ ಕಿರು ಪ್ರಯತ್ನವು ಯಕ್ಷಗಾನಕ್ಕೆ ಅಕಾಡೆಮಿಕ್ ರೂಪ ನೀಡುವ ಕಾರ್ಯಕ್ಕೆ ಮುನ್ನುಡಿ ಯಾಗಲಿದೆ.

ಇದೇ 24ರಂದು ಮಧ್ಯಾಹ್ನ 2ಕ್ಕೆ ಸಾಸ್ತಾನ ಯಡಬೆಟ್ಟಿನ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಉದ್ಘಾಟನೆ ನಡೆಯಲಿದೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷ ತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಪ್ರಸಂಗ ಕರ್ತ ಪ್ರಸಾದ್ ಮೊಗೆಬೆಟ್ಟು, ಮುಖೋಪಾಧ್ಯಾಯ ಸುಬ್ರಹ್ಮಣ್ಯ ವಾಕುಡ ಮತ್ತು ಕೇಸರಿ ಯುವಜನ ಸಂ ಘದ ಅಧ್ಯಕ್ಷ ಕೃಷ್ಣ ಪೂಜಾರಿಯವರು ಭಾಗವಹಿಸಲಿದ್ದಾರೆ. ಕೆ.ಮೋಹನ್ ನಿರ್ದೇಶನದಲ್ಲಿ ಉಪನ್ಯಾಸಕ ಹಾಗೂ ಕಲಾವಿದ ಸುಜಯೀಂದ್ರ ಹಂದೆ ಅವರ ನಿರೂಪಣೆಯೊಂದಿಗೆ ಯಕ್ಷದೇಗುಲದ ಕಲಾವಿದರಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಯಕ್ಷದೇಗುಲದ ವ್ಯವಸ್ಥಾಪಕ ಕೋಟ ಸುದರ್ಶನ ಉರಾಳ ತಿಳಿಸಿದ್ದಾರೆ.

ಪ್ರಾತ್ಯಕ್ಷಿಕೆ ಕಾರ್ಯಕ್ರಮದ ವಿವರ
ಇದೇ 24ರಂದು ಸಾಸ್ತಾನ ಯಡಬೆಟ್ಟಿನ ವಿದ್ಯೋದಯ ಅನು ದಾನಿತ ಹಿರಿಯ ಪ್ರಾಥಮಿಕ ಶಾಲೆ, 25ರ  ಮಧ್ಯಾಹ್ನ  2ಕ್ಕೆ ಕುಂದಾಪುರದ ಸೇಂಟ್ ಮೆರಿಸ್ ಹೈಸ್ಕೂಲ್, 26ರ ಬೆಳಿಗ್ಗೆ 9.30ಕ್ಕೆ ಕೋಟತಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 27ರ ಮಧ್ಯಾ ಹ್ನ 2ಕ್ಕೆ ಬ್ರಹ್ಮಾವರದ ಕ್ರಾಸ್ ಲ್ಯಾಂಡ್ ಕಾಲೇಜು ಮತ್ತು  28ರಂದು ಕೋಟೇಶ್ವರದ ಸರ್ಕಾರಿ ಪದವಿಪೂರ್ವ ಕಾಲೇಜಿ ನಲ್ಲಿ ಪ್ರಾತ್ಯಕ್ಷಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT