ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭ್ರಷ್ಟರಿಗೆ ರಾಜ್ಯ ಸರ್ಕಾರದ ರಕ್ಷಣೆ’

Last Updated 21 ಜನವರಿ 2017, 6:33 IST
ಅಕ್ಷರ ಗಾತ್ರ

ದೇವದುರ್ಗ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಭ್ರಷ್ಟರಿಗೆ ರಕ್ಷಣೆ  ನೀಡು­ತ್ತಿದೆ ಎಂಬುದಕ್ಕೆ ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಾಕ್ಷಿ ಎಂದು ಸಂಸದ ಪ್ರಹ್ಲಾದ್‌ ಜೋಷಿ ಆರೋಪಿಸಿದರು.

ಪಟ್ಟಣದಲ್ಲಿ ಬಿಜೆಪಿ ತಾಲ್ಲೂಕು ಘಟಕ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಕರಣದಲ್ಲಿ ಮುಖ್ಯಮಂತ್ರಿ­ ಹಾಗೂ ಸಚಿವರ ಹೆಸರು ಹೊರಬರುತ್ತವೆ ಎಂಬ ಭಯದಿಂದ ಎಸಿಬಿ ಮತ್ತು ಸಿಐಡಿ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ ಎಂದು ಆಪಾದಿಸಿದರು.

ಲೋಕಾಯುಕ್ತದ 900 ಪ್ರಕರಣ ಎಸಿಬಿಗೆ ವರ್ಗಾವಣೆಗೊಂಡರೂ ತನಿಖೆಯಲ್ಲಿ ಪ್ರಗತಿಯಾಗಿಲ್ಲ. ಸರ್ಕಾರದ ಕೈಗೊಂಬೆಯಾಗಿರುವ ಸಿಐಡಿ ತನಿಖೆಯಿಂದ ಸತ್ಯ ಸಂಗತಿ ಹೊರಬರುತ್ತದೆ ಎಂಬ ವಿಶ್ವಾಸವಿಲ್ಲ. ಶಾಸಕ ಎಚ್.ವೈ. ಮೇಟಿ ಆರೋಪ ಮುಕ್ತರಾಗುವುದು ಖಚಿತ. ಇಂತಹ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸುವ ಲಕ್ಷಣವಿಲ್ಲ ಎಂದರು.

ದೇಶದ ಶೇ 50ರಷ್ಟು ಜನ ಬಡತನ ರೇಖೆಗಿಂತ ಕೆಳಗೆ ಜೀವನ ನಡೆಸುತ್ತಿದ್ದಾರೆ. ಕಳೆದ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಏನು ಮಾಡಿ ಎಂದು ಪ್ರಶ್ನಿಸಿದರು.    

ಶಾಸಕ ಕೆ.ಶಿವನಗೌಡ ನಾಯಕ, ಬಸವನಗೌಡ ಬ್ಯಾಗವಟ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಿಂಗನಗೌಡ, ಶರಬಣ್ಣ ಸಾಹೂ, ತ್ರಿವಿಕ್ರಮ ಜೋಶಿ, ಸಿದ್ದು ಬಂಡಿ, ಚಂದಪ್ಪ ಬುದ್ದಿನ್ನಿ, ಪ್ರಕಾಶ ಪಾಟೀಲ್‌, ಶಿವಣ್ಣ ತಾತಾ, ಜಂಬಣ್ಣ ನಿಲೋಗಲ್‌, ಬಸವರಾಜ ಪಾಟೀಲ್‌ ಗಾಣದಾಳ, ದೊಡ್ಡನಗೌಡ ಪಾಟೀಲ, ರಾಮನಗೌಡ ಕರಡಿಗುಡ್ಡ, ಬಾಬು ಗೌರಂಪೇಟ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT