ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

Last Updated 21 ಜನವರಿ 2017, 8:00 IST
ಅಕ್ಷರ ಗಾತ್ರ

ನವದೆಹಲಿ: ಜವಾಹರ್‌ ಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಮೇಲೆ ಅಫಘಾನಿಸ್ತಾನದ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದಕ್ಷಿಣ ದೆಹಲಿಯ ಗ್ರೀನ್‌ ಪಾರ್ಕ್‌ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

21 ವರ್ಷ ವಯಸ್ಸಿನ ಯುವತಿ ವಿವಿಯ ದ್ವಿತೀಯ ಬಿಎ ವಿದ್ಯಾರ್ಥಿನಿ. ವಿದ್ಯಾರ್ಥಿನಿಯು ಗೆಳೆಯರೊಟ್ಟಿಗೆ ಪಬ್‌ಗೆ ಹೋಗಿದ್ದಾಳೆ. ಬಳಿಕ, ಸಲೀಮ್‌ ಎಂಬ ವ್ಯಕ್ತಿ ಯುವತಿಯನ್ನು ಮನೆಗೆ ಕರೆತಂದಿದ್ದಾನೆ.

ಸಲೀಮ್‌ ಮನೆಯಲ್ಲಿ ಸಿದ್ಧಾಂತ್‌, ಸುಲೈಮಾನ್ ಹಾಗೂ ಪ್ರತ್ಯೂಷಾ ಎಂಬ ಮೂವರು ಗೆಳೆಯರು ಬಂದಿದ್ದಾರೆ. ಬಳಿಕ, ಒಬ್ಬ ಗೆಳೆಯ ರಾತ್ರಿ ಯುವತಿಯನ್ನು ಜೆಎನ್‌ಯು ಆವರಣದ ಸಮೀಪ ಬಿಟ್ಟು ಹಿಂತಿರುಗಿದ್ದಾನೆ.

ನಂತರ ಕೆಲ ಸಮಯದ ಬಳಿಕ ಯುವತಿ ಸಲೀಮ್‌ ಮನೆಗೆ ಬಂದಿದ್ದಾಳೆ. ಅಲ್ಲಿ ವಿದ್ಯಾರ್ಥಿನಿ, ಸಲೀಮ್‌ ಹಾಗೂ ಸುಲೈಮಾನ್‌ ಈ ಮೂವರೂ ಮದ್ಯಪಾನ ಮಾಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಮೇಲೆ ಸಲೀಮ್‌ ಹಾಗೂ ಸುಲೈಮಾನ್ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರುದಿನ ಬೆಳಿಗ್ಗೆ ಪ್ರಜ್ಞೆ ಬಂದ ಬಳಿಕ ರಾತ್ರಿ ನಡೆದ ಘಟನೆ ನೆನಪಾಗಿ ವಿದ್ಯಾರ್ಥಿನಿಯು ಕಾಲೇಜಿನ ವಸತಿನಿಲಯದಲ್ಲಿ ಸ್ನೇಹಿತರ ಬಳಿ ಘಟನೆಯನ್ನು ತಿಳಿಸಿದ್ದಾಳೆ. ಗೆಳತಿಗೆ ಧೈರ್ಯತುಂಬಿದ ಸ್ನೇಹಿತರು ಆಕೆಯೊಂದಿಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಲೀಮ್‌ ಹಾಗೂ ಸುಲೈಮಾನ್‌ ಇಬ್ಬರನ್ನು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಸಲೀಮ್‌ ಹತ್ತು ವರ್ಷಗಳಿಂದ ಹಾಗೂ ಸುಲೈಮಾನ್‌ ಎರಡು ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT