ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ‘ಕ್ವಿಜ್‌’: ಬೆಂಗಳೂರಿನ ಸೇಂಟ್‌ ಪಾಲ್ಸ್‌ ಶಾಲೆ ಚಾಂಪಿಯನ್

Last Updated 21 ಜನವರಿ 2017, 12:42 IST
ಅಕ್ಷರ ಗಾತ್ರ

ಬೆಂಗಳೂರು:  ಬೆಂಗಳೂರಿನ ಸೇಂಟ್‌ ಪಾಲ್ಸ್‌ ಇಂಗ್ಲಿಷ್‌ ಸ್ಕೂಲ್‌ನ ತಂಡವು  ಪ್ರಜಾವಾಣಿ  ಕ್ವಿಜ್‌ ಚಾಂಪಿಯನ್‌ಶಿಪ್‌ನಲ್ಲಿ  ಪ್ರಶಸ್ತಿ ಗೆದ್ದುಕೊಂಡಿದೆ.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಕ್ವಿಜ್‌ ಚಾಂಪಿಯನ್‌ಶಿಪ್‌ನ  ಫೈನಲ್‌ ಸ್ಪರ್ಧೆಯಲ್ಲಿ ವಿವಿಧ ವಲಯಗಳಿಂದ ಆಯ್ಕೆಯಾದ 10 ತಂಡಗಳು ಭಾಗವಹಿಸಿದ್ದವು.

ಬೆಂಗಳೂರು ವಲಯದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದ್ದ ಸೇಂಟ್‌ ಪಾಲ್ಸ್‌ ಶಾಲೆಯ ಚಂದ್ರಚೂಡ್‌ ಹಾಗೂ ಸುಚೇತ್‌ ಅವರನ್ನು ಒಳಗೊಂಡ ತಂಡವು ಅಂತಿಮ ಸ್ಪರ್ಧೆಯಲ್ಲಿ 80 ಅಂಕಗಳನ್ನು ಗಳಿಸುವ ಮೂಲಕ ಚಾಂಪಿಯನ್‌ ಆಗಿ ಹೊರಹೊಮ್ಮಿತು.  

ಧಾರವಾಡದ ಶಿರಸಿ ಲಯನ್ಸ್‌ ಸ್ಕೂಲ್‌ ತಂಡವು 60 ಅಂಕಗಳೊಂದಿಗೆ ದ್ವಿತೀಯ ಪಡೆಯಿತು. ತಂಡದ  ಪ್ರಜ್ವಲ್‌ ಯಾಜಿ ಹಾಗೂ ಚಿನ್ಮಯ್‌ ಹೆಗಡೆ ಸೇಂಟ್‌ ಪಾಲ್ಸ್‌ ತಂಡಕ್ಕೆ ತೀವ್ರ ಪೈಪೋಟಿ ನೀಡಿದರು.

ಹಾಸನದ ಯುನೈಟೆಡ್‌ ಅಕಾಡೆಮಿ 30 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆಯಿತು. ಆದಿತ್ಯ ಹಾಗೂ ಅನೂಪ್‌ ತಂಡವನ್ನು ಪ್ರತಿನಿಧಿಸಿದ್ದರು. 

ನಟ ಚೇತನ್‌, ಹಾಕಿಪಟು ಅರ್ಜುನ್‌ ಹಾಲಪ್ಪ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಸ್ಟೀಫನ್‌ ವಾಜ್ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರ ಪ್ರದಾನ ಮಾಡಿದರು. 

ಪ್ರಥಮ ಬಹುಮಾನ: ₹50 ಸಾವಿರ
ದ್ವಿತೀಯ ಬಹುಮಾನ: ₹30 ಸಾವಿರ
ತೃತೀಯ ಬಹುಮಾನ: ₹10 ಸಾವಿರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT