ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಾಲಕಿಯರ ತಂಡಕ್ಕೆ ಪ್ರಶಸ್ತಿ

ರಾಷ್ಟ್ರೀಯ ಶಾಲಾ ಟೆನಿಸ್‌: ಮಿಂಚಿದ ಅಪೂರ್ವ, ವಿದುಲಾ
Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಮೈಸೂರು:  ಕರ್ನಾಟಕ ಬಾಲಕಿಯರ ತಂಡದವರು ಭಾರತೀಯ ಶಾಲಾ ಕ್ರೀಡಾ ಒಕ್ಕೂಟ (ಎಸ್‌ಜಿಎಫ್‌ಐ) ಆಶ್ರಯದ 62ನೇ ರಾಷ್ಟ್ರೀಯ ಶಾಲಾ ಟೆನಿಸ್‌ ಟೂರ್ನಿಯ 17 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್‌ ಆದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಸಹ ಯೋಗದಲ್ಲಿ ಮೈಸೂರು ಟೆನಿಸ್‌ ಕ್ಲಬ್‌ ಕೋರ್ಟ್‌ನಲ್ಲಿ ಶನಿವಾರ ನಡೆದ ಫೈನಲ್‌ ನಲ್ಲಿ ಆತಿಥೇಯರು 2–1ರಲ್ಲಿ ಛತ್ತೀಸ ಗಡ ತಂಡವನ್ನು ಮಣಿಸಿದರು.

ಮೊದಲ ಸಿಂಗಲ್ಸ್‌ನಲ್ಲಿ ಪಾರಮ್ಯ ಮೆರೆದ ಎಸ್‌.ಬಿ.ಅಪೂರ್ವ 8–3ರಲ್ಲಿ ಸಾಕ್ಷಿ ಮಿಶ್ರಾ ಅವರನ್ನು ಪರಾಭವ ಗೊಳಿಸಿದರು. ಆದರೆ, ಛತ್ತೀಸಗಡ ತಂಡದ ಆಟಗಾರ್ತಿ ಧರಣಿ 8–4ರಲ್ಲಿ ರಾಜ್ಯದ ವಿದುಲಾ ರೆಡ್ಡಿ  ಎದುರು ಗೆದ್ದು 1–1 ಸಮಬಲಕ್ಕೆ ಕಾರಣರಾದರು.

ನಿರ್ಣಾಯಕ ಡಬಲ್ಸ್‌ನಲ್ಲಿ ಅಪೂರ್ವ ಹಾಗೂ ಪಾರ್ವಿ ಶ್ರೀಕಾಂತ್‌ 7–5ರಲ್ಲಿ ಸಾಕ್ಷಿ ಹಾಗೂ ಧರಣಿ ಎದುರು ಗೆದ್ದು ರಾಜ್ಯ ತಂಡದ ಗೆಲುವಿಗೆ ಕಾರಣ ರಾದರು.
ಇದೇ ವಯೋಮಿತಿಯ ವೈಯಕ್ತಿಕ ವಿಭಾಗದ ಸಿಂಗಲ್ಸ್‌ನಲ್ಲಿ ಕರ್ನಾಟಕದ ಅಪೂರ್ವ ರನ್ನರ್‌ ಅಪ್‌ ಆದರು. ಅವರು ಫೈನಲ್‌ನಲ್ಲಿ 3–6ರಲ್ಲಿ ತೆಲಂ ಗಾಣದ ಡಿ.ಸಂಸ್ಕೃತಿ ಎದುರು ಸೋತರು.

17 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಗುಜರಾತ್‌ ತಂಡದವರು ಮೊದಲ ಸ್ಥಾನ ಪಡೆದರು. ಫೈನಲ್‌ನಲ್ಲಿ 2–1ರಲ್ಲಿ ದೆಹಲಿ ತಂಡವನ್ನು ಮಣಿ ಸಿದರು. ವೈಯಕ್ತಿಕ ವಿಭಾಗದ ಸಿಂಗಲ್ಸ್‌ ಫೈನಲ್‌ನಲ್ಲಿ ದೆಹಲಿಯ ಸೌರವ್‌ ಎದುರು ಗೆದ್ದ ಗುಜರಾತ್‌ನ ದೇವಿಜೇವಿಯ ಚಾಂಪಿಯನ್‌ ಆದರು.

14 ವರ್ಷದೊಳಗಿನವರ ಬಾಲಕರ ತಂಡ ವಿಭಾಗದಲ್ಲಿ ಮಧ್ಯಪ್ರದೇಶ ತಂಡ ಮೊದಲ ಸ್ಥಾನ ಪಡೆಯಿತು. ಫೈನಲ್‌ನಲ್ಲಿ 2–0ರಲ್ಲಿ ಗುಜರಾತ್‌ಗೆ ಆಘಾತ ನೀಡಿತು.
ವೈಯಕ್ತಿಕ ವಿಭಾಗದ ಸಿಂಗಲ್ಸ್‌ ಫೈನಲ್‌ನಲ್ಲಿ ಹರಿಯಾಣದ ಉದಿತ್‌ ವಿರುದ್ಧ ಗೆಲುವು ಸಾಧಿಸಿದ ಮಧ್ಯ ಪ್ರದೇ ಶದ ಕುಶ್‌ ಅರ್ಜೇರಿಯ ಟ್ರೋಫಿ ಎತ್ತಿ ಹಿಡಿದರು.

ಇದೇ ವಯೋಮಿತಿಯ ಬಾಲಕಿಯರ  ತಂಡ ವಿಭಾಗದಲ್ಲಿ ತಮಿಳುನಾಡು ತಂಡ ಅಗ್ರಸ್ಥಾನ ಗಳಿ ಸಿತು. ಫೈನಲ್‌ನಲ್ಲಿ 2–1ರಲ್ಲಿ ತೆಲಂಗಾಣ ತಂಡವನ್ನು ಪರಾಭವಗೊಳಿಸಿತು.

ವೈಯಕ್ತಿಕ ವಿಭಾಗದ ಸಿಂಗಲ್ಸ್‌ ಫೈನಲ್‌ನಲ್ಲಿ ತೆಲಂಗಾಣದ ಭಕ್ತಿ ಶಾ ವಿರುದ್ಧ ಜಯ ಗಳಿಸಿದ ಕೆವಿಎಸ್‌ ಶಾಲೆಯ ಎಸ್‌.ಕಾನಿಕಾ ಚಾಂಪಿಯನ್‌ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT