ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಓಜೋನ್‌ಗೆ ಸೋಲು

Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ತವರಿನ ಅಭಿಮಾನಿಗಳ ಎದುರು ದಿಟ್ಟ ಆಟ ಆಡಲು ವಿಫಲವಾದ ಓಜೋನ್‌ ಎಫ್‌ಸಿ ತಂಡ ಎರಡನೇ ಡಿವಿಷನ್‌ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಓಜೋನ್‌ ಎಫ್‌ಸಿ 1–2 ಗೋಲುಗಳಿಂದ ಕೆಂಕೇರೆ ಸ್ಪೋರ್ಟ್ಸ್‌ ತಂಡದ ವಿರುದ್ಧ ಮಣಿಯಿತು.

ಬಲಿಷ್ಠ ಆಟಗಾರರನ್ನು ಹೊಂದಿದ್ದ ಎರಡೂ ತಂಡಗಳು ಪಂದ್ಯದ ಆರಂಭ ದಿಂದಲೇ ಜಿದ್ದಾಜಿದ್ದಿನ ಪೈಪೋಟಿಗೆ ಇಳಿದವು. ಉಭಯ ತಂಡಗಳು ಶುರುವಿ ನಲ್ಲಿ ಕೆಲ ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಿಕೊಂಡವಾದರೂ ಅವುಗ ಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಎಡವಿದವು.

ಹೀಗಾಗಿ ಮೊದಲರ್ಧದ ಆಟ ಗೋಲು ರಹಿತವಾಗಿತ್ತು. ಉತ್ತರಾರ್ಧದಲ್ಲಿ ಭಿನ್ನ ರಣತಂತ್ರದೊಂದಿಗೆ ಕಣಕ್ಕಿಳಿದ ಆತಿಥೇಯರಿಗೆ 56ನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ಸಬೀತ್‌ ಸತ್ಯನ್‌ ಚೆಂಡನ್ನು ಗುರಿ ಸೇರಿಸಿ ತವರಿನ ಅಭಿಮಾನಿಗಳ ಮನ ಗೆದ್ದರು.

ಆದರೆ ಈ ಖುಷಿ ಓಜೋನ್‌ ತಂಡದಲ್ಲಿ ಹೆಚ್ಚು ಕಾಲ ಉಳಿಯಲು ಕೆಂಕೇರೆ ಆಟಗಾರರ ಅವಕಾಶ ನೀಡಲಿಲ್ಲ. ಈ ತಂಡದ ಯೋಗೇಶ್‌ ಕದಂ ಮತ್ತು ರಾಜೀವ್‌ ಗೋರುಯಿ ಕ್ರಮವಾಗಿ 61 ಮತ್ತು 65 ನೇ ನಿಮಿಷಗಳಲ್ಲಿ ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT