ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ವೀಕ್ಷಣೆಗೆ ಸಿಗದ ಅವಕಾಶ: ಪ್ರತಿಭಟನೆ

ಧಾರವಾಡ ಸಾಹಿತ್ಯ ಸಂಭ್ರಮ
Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಧಾರವಾಡ: ಧಾರವಾಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯುತ್ತಿರುವ ಸಭಾಂಗಣದ ಮುಂದೆ ಅಳವಡಿಸಿರುವ ಎಲ್‌ಇಡಿ ಪರದೆಯಲ್ಲಿ ‘ಅಲ್ಲಮ’ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಿರುವುದನ್ನು ಖಂಡಿಸಿ ಕೆಲವರು ಪ್ರತಿಭಟನೆ ನಡೆಸಿದರು.

ಟಿ.ಎಸ್. ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರದ ಪ್ರದರ್ಶನ ಶನಿವಾರ ಸಂಜೆ ಸಾಹಿತ್ಯ ಸಂಭ್ರಮದಲ್ಲಿ ನಡೆಯಿತು. ಸಭಾಂಗಣದ ಒಳಗೆ ಮಾತ್ರ ಚಿತ್ರ ಪ್ರದರ್ಶನ ಇತ್ತು. ಸಭಾಂಗಣದ ಒಳಗೆ ನಡೆಯುವ ಎಲ್ಲ ಕಾರ್ಯಕ್ರಮಗಳು ಹೊರಗೆ ಇರುವ ಪರದೆಯಲ್ಲಿ ಅವಕಾಶ ಇತ್ತಾದರೂ, ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಪರದೆ ಮುಂದೆ ಕಾರ್ಯಕ್ರಮ ವೀಕ್ಷಿಸುತ್ತಾ ಕುಳಿತವರು ಇದರಿಂದ ಅಸಮಾಧಾನಗೊಂಡು ಸಭಾಂಗಣದ ಗೇಟ್ ಬಳಿ ಬಂದು ಪ್ರತಿಭಟಿಸಿದರು.

ಪೊಲೀಸರು ಮತ್ತು  ಭದ್ರತಾ ಸಿಬ್ಬಂದಿ ಗೇಟ್‌  ಮುಚ್ಚುವ ಮೂಲಕ ಪ್ರತಿಭಟನಾಕಾರನ್ನು ಅಲ್ಲಿಯೇ ತಡೆದರು. ನಂತರ ಅಲ್ಲಿಗೆ ಬಂದ ಸಂಘಟಕರು, ಕಾರ್ಯಕ್ರಮಕ್ಕೆ ಪ್ರತಿನಿಧಿಗಳಾಗಿ ಬಂದವರಿಗೆ ಮಾತ್ರ ಚಿತ್ರ ವೀಕ್ಷಿಸಲು ಅವಕಾಶ ಇದೆ. ಸಾರ್ವಜನಿಕವಾಗಿ ಚಿತ್ರ ಪ್ರದರ್ಶನಕ್ಕೆ ಚಿತ್ರದ ನಿರ್ದೇಶಕರು ಒಪ್ಪುವುದಿಲ್ಲ ಎಂದು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT