ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೇಷನ್‌ ಮಾಸ್ಟರ್ಗಳ ಜವಾಬ್ದಾರಿ ಹೆಚ್ಚು

ದಕ್ಷಿಣ ರೈಲ್ವೆ ಸುರಕ್ಷತಾ ಸಮ್ಮೇಳನದಲ್ಲಿ ಸಚಿವ ರಾಜನ್‌ ಗೊಹೆನ್‌ ಕಿವಿಮಾತು
Last Updated 21 ಜನವರಿ 2017, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ರೈಲ್ವೆ ಸ್ಟೇಷನ್ ಮಾಸ್ಟರ್‌ಗಳ ಕೆಲಸದಲ್ಲಿ ಕೊಂಚ ಲೋಪವಾದರೂ ಅದು ಭಾರಿ ಅನಾಹುತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸ್ಟೇಷನ್ ಮಾಸ್ಟರ್‌ಗಳು ಸಮಯಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ರಾಜನ್‌ ಗೊಹೆನ್‌ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಅಖಿಲ ಭಾರತ ಸ್ಟೇಷನ್‌ ಮಾಸ್ಟರ್‌ಗಳ ಸಂಘ (ಎಐಎಸ್‌ಎಂಎ) ಶನಿವಾರ ಆಯೋಜಿಸಿದ್ದ ದಕ್ಷಿಣ ರೈಲ್ವೆ ಸುರಕ್ಷತಾ ಸಮ್ಮೇಳನದಲ್ಲಿ ಮಾತನಾಡಿದರು.

‘ಪ್ರಯಾಣಿಕರ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಿದೆ. ಹೆಚ್ಚಿನ    ಸಂಖ್ಯೆಯಲ್ಲಿ ಸ್ಟೇಷನ್ ಮಾಸ್ಟರ್‌ಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ’ ಎಂದರು.
ಶಾಸಕ ಎಸ್. ಸುರೇಶ್‌ಕುಮಾರ್ ಮಾತನಾಡಿ, ‘ಸ್ಟೇಷನ್‌ ಮಾಸ್ಟರ್‌ಗಳ ಆರೋಗ್ಯದ ದೃಷ್ಟಿಯಿಂದ ಒಂದು ನಿಲ್ದಾಣಕ್ಕೆ ಇಬ್ಬರು ಸ್ಟೇಷನ್‌ ಮಾಸ್ಟರ್‌ಗಳನ್ನು ನೇಮಕ ಮಾಡುವ ದಿಸೆಯಲ್ಲಿ ಸರ್ಕಾರ ಮುಂದಾಗಬೇಕು’ ಎಂದರು.

ಸಚಿವರಿಗೆ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಮನವಿ  ಸಲ್ಲಿಸಲಾಯಿತು. ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಕುಮಾರ್ ಗುಪ್ತಾ, ಸಂಘದ ಅಧ್ಯಕ್ಷ ಆರ್.ಕೆ. ಉನ್ನಿಕೃಷ್ಣನ್, ಪ್ರಧಾನ ಕಾರ್ಯದರ್ಶಿ ಸಿ.ಧನಂಜಯ ಇದ್ದರು.
*
ಪ್ರಮುಖ ಮನವಿಗಳು
* ರೈಲ್ವೆ ಸುಧಾರಣೆಗೆ ಡಾ. ಕುಂಜ್ರು ಸಮಿತಿ ನೀಡಿರುವ ವರದಿಯ  ಶಿಫಾರಸು  ಅನುಷ್ಠಾನಗೊಳಿಸಬೇಕು.

* ನಿಲ್ದಾಣದ ಸಮೀಪ ಸ್ಟೇಷನ್ ಮಾಸ್ಟರ್‌ಗಳಿಗೆ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸಬೇಕು.

* ಸಣ್ಣ ನಿಲ್ದಾಣಗಳಿರುವ ಸ್ಥಳಗಳಲ್ಲಿ ಆರೋಗ್ಯ ಸೇವೆ ಒದಗಿಸಬೇಕು.

* ಒಂದು ನಿಲ್ದಾಣಕ್ಕೆ ಇಬ್ಬರು ಮಾಸ್ಟರ್‌ಗಳ ನೇಮಕ ಮಾಡಬೇಕು.

* ಕರ್ತವ್ಯದ ಅವಧಿಯನ್ನು ಎಂಟು ಗಂಟೆಗೆ ಇಳಿಸಬೇಕು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT