ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌತುಕ ಹೆಚ್ಚಿಸಿದ ನಡೆ

ವಾಚಕರ ವಾಣಿ
Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ
ಅಮೆರಿಕದ ಅಧ್ಯಕ್ಷರಾಗಿ  ಪ್ರಮಾಣವಚನ ಸ್ವೀಕರಿಸಿದ ನಂತರ ಆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್ ತಮ್ಮ ಅವಧಿಯಲ್ಲಿ ಮೊದಲ ಆದ್ಯತೆ ಅಮೆರಿಕ, ಮತ್ತು ಅಮೆರಿಕ ಜನರ ಹಿತರಕ್ಷಣೆ ಎಂದು ಘೋಷಿಸಿದ್ದು ಒಪ್ಪುವಂಥದೇ. ವ್ಯಾಪಾರ, ವಲಸೆ, ಉದ್ಯೋಗ, ತೆರಿಗೆ ಮುಂತಾದ ವಿಷಯಗಳಲ್ಲಿ ಅಮೆರಿಕದ ಜನರಿಗೆ  ಮಾತ್ರ ಪ್ರಯೋಜನ ಆಗಬೇಕು ಎಂದು ಹೇಳಿರುವುದು ಅಲ್ಲಿನ ಜನರಿಗೆ ಸಮಾಧಾನ ಉಂಟು ಮಾಡುವಂಥದು.
 
ಹಿಂದಿನದನ್ನು ಹಿಂದೆ ಬಿಟ್ಟು ಮುಂದಿನ ದಿನಗಳ ಬಗೆಗೆ ತಮ್ಮ ವಿಚಾರಗಳನ್ನು ಸ್ಪಷ್ಟಪಡಿಸಿದ್ದಾರೆ ಟ್ರಂಪ್‌. ಸರ್ಕಾರದ ಶಕ್ತಿ ಜನರಿಗೆ ವರ್ಗಾವಣೆ  ಆಗಬೇಕು ಎಂದೂ ಘೋಷಿಸಿದ್ದಾರೆ. ಭಯೋತ್ಪಾದನೆಯನ್ನು ಮೂಲೋತ್ಪಾಟನೆಗೊಳಿ ಸುವ ಅವರ ನಿರ್ಧಾರ ಎಲ್ಲಾ ರಾಷ್ಟ್ರಗಳ ಗಮನವನ್ನು ಸೆಳೆಯುವಂಥದು.
 
‘ಅಮೆರಿಕದವರಿಗೆ ಮಾತ್ರ’ ಎನ್ನುವ ಅವರ ಧೋರಣೆ ನಮ್ಮ ಮಟ್ಟಿಗೆ ಸ್ವಲ್ಪ ಕಹಿ ಆದೀತು. ಯಾವುದೇ ದೇಶ ತನ್ನ ಮನೆಗೇ ಮಾರಿ ಆಗಬಾರದು. ನೂತನ ಅಧ್ಯಕ್ಷರಿಗೆ  ತಮ್ಮ ದೇಶದ ಬಗ್ಗೆ ಒಲವಿದೆ. ಚುನಾವಣೆಯ ವೇಳೆ ಹೇಳಿದ್ದ ಮಾತುಗಳನ್ನೇ ಈಗ ಅಧಿಕಾರ ಸ್ಥಾನದಿಂದ ಆಡಿದ್ದಾರೆ. ಅವರ ನಡೆಗಳನ್ನು ನಾವು ಕಾತರದಿಂದ ನೋಡಬೇಕು.
-ಸಾಮಗ ದತ್ತಾತ್ರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT