ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜನಾಥ್ ಪುತ್ರನಿಗೆ ಟಿಕೆಟ್

Last Updated 22 ಜನವರಿ 2017, 20:28 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಎರಡನೆಯ ಪಟ್ಟಿಯನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದ್ದು, ಕೇಂದ್ರ
ಗೃಹ ಸಚಿವ ರಾಜನಾಥ್‌ ಸಿಂಗ್ ಅವರ ಮಗ ಪಂಕಜ್ ಸಿಂಗ್ ಅವರು ನೋಯ್ಡಾದಿಂದ ಕಣಕ್ಕೆ ಇಳಿಯಲಿದ್ದಾರೆ.

ಹಿರಿಯ ಮುಖಂಡ ಲಾಲ್ಜಿ ಟಂಡನ್‌ ಅವರ ಮಗ ಅಶುತೋಷ್ ಅವರು ಲಖನೌ (ಪೂರ್ವ) ಕ್ಷೇತ್ರದಿಂದ, ಹುಕುಂ ಸಿಂಗ್ ಪುತ್ರಿ ಮೃಗಾಂಕಾ ಸಿಂಗ್ ಅವರು ಕೈರಾನಾದಿಂದ ಕಣಕ್ಕೆ ಇಳಿಯಲಿದ್ದಾರೆ.

ಬಿಎಸ್‌ಪಿಯಿಂದ ಬಿಜೆಪಿಗೆ ಬಂದಿರುವ ಸ್ವಾಮಿಪ್ರಸಾದ್ ಮೌರ್ಯ ಅವರ ಪುತ್ರ ಉತ್ಕರ್ಷ ಮೌರ್ಯ ಅವರಿಗೂ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ಸಿನಿಂದ ಬಿಜೆಪಿ ಸೇರಿರುವ ರೀಟಾ ಬಹುಗುಣ ಜೋಷಿ ಅವರನ್ನು ಲಖನೌ ದಂಡು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಪಕ್ಷ ಇದುವರೆಗೆ ಒಟ್ಟು 304 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT