ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರೈವಾರ್ಷಿಕ ಯೋಜನೆ ಜಾರಿ!

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಪಂಚವಾರ್ಷಿಕ ಯೋಜನೆ ಪದ್ಧತಿಯನ್ನು ಕೈಬಿಡಲು ಸರ್ಕಾರ ಉದ್ದೇಶಿಸಿದ್ದು, ಬದಲಿಗೆ ತ್ರೈವಾರ್ಷಿಕ (3ವರ್ಷಗಳ) ಯೋಜನೆ ಪದ್ಧತಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ನೀತಿ ಆಯೋಗವು ಈಗಾಗಲೇ ಈ ಸಂಬಂಧ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿದೆ’ ಎಂದು ಮೂಲಗಳು ಹೇಳಿವೆ.

‘ಫೆ.1ರಂದು ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮೊದಲ ತ್ರೈವಾರ್ಷಿಕ ಯೋಜನೆಯನ್ನು ಪ್ರಕಟಿಸಲಿದ್ದಾರೆ. ಈ ಯೋಜನೆ ಈ ವರ್ಷವೇ ಜಾರಿಯಾಗಲಿದ್ದು, 2020ಕ್ಕೆ ಕೊನೆಯಾಗಲಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ಕೃಷಿ ಮತ್ತು ತಯಾರಿಕಾ ವಲಯದಲ್ಲಿ  ಉದ್ಯೋಗದ ಪ್ರಮಾಣವನ್ನು ಹೆಚ್ಚಿಸಲು ಈ ಯೋಜನೆಯಲ್ಲಿ ಒತ್ತು ಕೊಡಲಾಗಿದೆ.  ಜತೆಗೆ ಕೃಷಿ ಕಾರ್ಮಿಕರು ಮತ್ತು ರೈತರ ಆದಾಯವನ್ನು 2022ರ ವೇಳೆಗೆ ಎರಡು ಪಟ್ಟು ಹೆಚ್ಚಿಸುವ ಸಲುವಾಗಿ ವಿವಿಧ ಕ್ರಮಗಳು ಈ ಯೋಜನೆ ಅಡಿ ಜಾರಿಯಾಗಲಿವೆ. ಅಲ್ಲದೆ ನೋಟು ರದ್ದತಿಯಿಂದ ಪರಿಣಾಮ ಎದುರಿಸಿದ ಎಲ್ಲಾ ವಲಯಗಳ ಸ್ಥಿತಿ ಸುಧಾರಣೆಗೆ ಕ್ರಮಗಳನ್ನು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT