ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ. 15 ಕ್ಕೆ ಇಸ್ರೊದಿಂದ 103 ಉಪಗ್ರಹಗಳ ಉಡಾವಣೆ

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಏಕ ಕಾಲದಲ್ಲಿ 103 ಉಪಗ್ರಹಗಳ ಉಡಾವಣೆಗೆ ದಿನ ನಿಗದಿ ಆಗಿದ್ದು, ಫೆ. 15ರಂದು  ಉಡಾವಣೆ ನಡೆಯಲಿದೆ. ಇಸ್ರೊ ಇದಕ್ಕಾಗಿ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈವರೆಗೆ ಅತಿ ಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ವಿಕ್ರಮ ಸಾಧಿಸಿರುವ  ರಷ್ಯಾದ ಸಾಧನೆಯನ್ನು ಭಾರತ ಹಿಂದಿಕ್ಕಲಿದೆ.

ಪಿಎಸ್‌ಎಲ್‌ವಿ ಸಿ–37 ರಾಕೆಟ್‌ ಮೂಲಕ ಭೂಮಿಯಿಂದ ಸುಮಾರು 505 ಕಿ.ಮೀ ಎತ್ತರದ ಕಕ್ಷೆಗೆ 102 ಸಣ್ಣ ಉಪಗ್ರಹಗಳನ್ನು ಸೇರಿಸಲಾಗುವುದು. ಕಾರ್ಟೊಸ್ಯಾಟ್‌–2 ಮಾತ್ರ ಕೊಂಚ ಎತ್ತರದ ಕಕ್ಷೆಯಲ್ಲಿ ನೆಲೆಗೊಳಿಸಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT