ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ನರ್‌ ಅಬ್ಬರಕ್ಕೆ ಪಾಕ್‌ ಕಂಗಾಲು

Last Updated 22 ಜನವರಿ 2017, 19:34 IST
ಅಕ್ಷರ ಗಾತ್ರ
ಸಿಡ್ನಿ: ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಭಾನುವಾರ ಪಾಕಿಸ್ತಾನ ಬೌಲರ್‌ಗಳ ಮೇಲೆ ಸವಾರಿ ನಡೆಸಿದ ಡೇವಿಡ್‌ ವಾರ್ನರ್‌ (130; 119ಎ, 11ಬೌಂ, 2ಸಿ) ವೃತ್ತಿ ಬದುಕಿನ 12ನೇ ಶತಕದ ಸಂಭ್ರಮ ಆಚರಿಸಿದರು.
 
ಅವರ ಸ್ಫೋಟಕ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ನಾಲ್ಕನೇ ಏಕದಿನ ಪಂದ್ಯದಲ್ಲಿ 86 ರನ್‌ ಗಳಿಂದ ಪಾಕಿಸ್ತಾನವನ್ನು ಮಣಿಸಿದೆ. ಇದರೊಂದಿಗೆ ಸ್ಟೀವನ್‌ ಸ್ಮಿತ್‌ ಪಡೆ ಒಂದು ಪಂದ್ಯದ ಆಟ ಬಾಕಿ ಇರು ವಂತೆಯೇ 3–1ರಿಂದ ಸರಣಿ ಗೆದ್ದುಕೊಂಡಿದೆ. ಮೊದಲು ಬ್ಯಾಟ್‌ ಮಾಡಿದ ಕಾಂಗರೂಗಳ ನಾಡಿನ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 353ರನ್‌ ಗಳಿಸಿತು. ಸವಾಲಿನ ಗುರಿ ಬೆನ್ನಟ್ಟುವ ಹಾದಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡ ಪಾಕಿಸ್ತಾನ 43.5 ಓವರ್‌ಗಳಲ್ಲಿ 267ರನ್‌ ಗಳಿಸಿ  ಹೋರಾಟ ಅಂತ್ಯಗೊಳಿಸಿತು.
 
 ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 353 (ಉಸ್ಮಾನ್‌ ಖವಾಜ 30, ಡೇವಿಡ್‌ ವಾರ್ನರ್‌ 130, ಸ್ಟೀವನ್‌ ಸ್ಮಿತ್‌ 49, ಟ್ರಾವಿಸ್‌ ಹೆಡ್‌ 51, ಗ್ಲೆನ್‌ ಮ್ಯಾಕ್ಸ್‌ವೆಲ್‌ 78; ಹಸನ್‌ ಅಲಿ 52ಕ್ಕೆ5, ಮಹಮ್ಮದ್‌ ಅಮೀರ್‌ 75ಕ್ಕೆ1).
 
ಪಾಕಿಸ್ತಾನ: 43.5 ಓವರ್‌ಗಳಲ್ಲಿ 267 (ಶಾರ್ಜೀಲ್‌ ಖಾನ್‌ 74,  ಮಹಮ್ಮದ್‌ ಹಫೀಜ್‌ 40, ಶೋಯಬ್‌ ಮಲಿಕ್‌ 47, ಉಮರ್‌ ಅಕ್ಮಲ್‌ 11, ಮಹಮ್ಮದ್‌ ರಿಜ್ವಾನ್‌ 10, ಇಮಾದ್‌ ವಾಸೀಂ 25; ಜೋಶ್‌ ಹ್ಯಾಜಲ್‌ವುಡ್‌ 54ಕ್ಕೆ3, ಪ್ಯಾಟ್‌ ಕಮಿನ್ಸ್‌ 45ಕ್ಕೆ1, ಟ್ರಾವಿಸ್‌ ಹೆಡ್‌ 66ಕ್ಕೆ2, ಆ್ಯಡಮ್‌ ಜಂಪಾ 55ಕ್ಕೆ3).
ಫಲಿತಾಂಶ:  ಆಸ್ಟ್ರೇಲಿಯಾ ತಂಡಕ್ಕೆ 86ರನ್‌ ಗೆಲುವು ಹಾಗೂ 5 ಪಂದ್ಯಗಳ ಸರಣಿಯಲ್ಲಿ 3–1ರಲ್ಲಿ ಮುನ್ನಡೆ.
ಪಂದ್ಯಶ್ರೇಷ್ಠ: ಡೇವಿಡ್ ವಾರ್ನರ್‌.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT