ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಯಿಂದ ಒಂದೇ ಎನ್ನುವ ಭಾವನೆ

ಮಂದಾರ್ತಿ ಮೊಗವೀರ ಕ್ರೀಡೋತ್ಸವ: ಜಿ.ಶಂಕರ್ ಚಾಲನೆ
Last Updated 23 ಜನವರಿ 2017, 6:06 IST
ಅಕ್ಷರ ಗಾತ್ರ

ಮಂದಾರ್ತಿ(ಬ್ರಹ್ಮಾವರ) : ಕ್ರೀಡೆಯಿಂದ ಸಂಘಟನಾತ್ಮಕವಾಗಿ ಬೆಳೆಯಲು ಸಾಧ್ಯ. ಇದರೊಂದಿಗೆ ನಾವೆಲ್ಲರೂ ಒಂದೇ ಎನ್ನುವ ಒಗ್ಗಟ್ಟಿನ ಭಾವನೆ ಮೂಡುತ್ತದೆ ಎಂದು ಉಡುಪಿ ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಹೇಳಿದರು.

ಮಂದಾರ್ತಿ ದುರ್ಗಾಪರಮೇಶ್ವರಿ ಪ್ರೌಢ ಶಾಲಾ ಮೈದಾನದಲ್ಲಿ ಭಾನುವಾರ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ನೇತೃತ್ವದಲ್ಲಿ  ಮೊಗವೀರ ಯುವ ಸಂಘಟನೆ ಮಂದಾರ್ತಿ ಘಟಕದ ಆತಿಥ್ಯದಲ್ಲಿ ನಡೆದ ಮೊಗವೀರ ಕ್ರೀಡೋತ್ಸವ-2017 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.

ದಕ್ಷಿಣ ಕನ್ನಡ ಮೊಗವೀರ ಮಹಾ ಜನ ಸಂಘದ ಅಧ್ಯಕ್ಷ ಗಂಗಾಧರ ಕರ್ಕೇರ ಕ್ರೀಡಾಜ್ಯೋತಿ ಬೆಳಗಿದರು. ಮಂದಾರ್ತಿ ದುರ್ಗಾಪರಮೇಶ್ವರಿ ದೇವ ಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಶೆಟ್ಟಿ ಧ್ವಜಾರೋಹಣ ಮಾಡಿದರು.

ದ.ಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ ಪಾಲ್ ಸುವರ್ಣ ಗೌರವ ವಂದನೆ ಸ್ವೀಕರಿ ಸಿದರು. ಇದಕ್ಕೂ ಮುನ್ನ ಕ್ರೀಡಾಪಟು ಗಳಾದ ಉಮೇಶ್ ಕುಂದರ್, ಶಿಲ್ಪಾ ಮತ್ತು ದೀಕ್ಷಾ ಅವರ ಉಸ್ತುವಾರಿಯಲ್ಲಿ ಕ್ರೀಡಾಜ್ಯೋತಿ  ತರಲಾಯಿತು.

ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷ ವಿಶ್ವನಾಥ ಮಾಸ್ಟರ್, ಉದ್ಯ ಮಿಗಳಾದ ಉಮೇಶ್ ಕುಂದರ್ ಬೆಂಗಳೂರು, ಧನಂಜಯ ಅಮೀನ್ ಪೇತ್ರಿ, ಕೆ.ಗುಣಕರ ಬೆಂಗಳೂರು, ಸುಧಾಕರ ಬಂಗೇರ ಬೆಂಗಳೂರು, ಮಹಾಬಲ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂತೋಷ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್ ಮೆಂಡನ್, ಯುವ ಸಂಘಟನೆ ಸರ್ವೋತ್ತಮ, ಯುವ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಸುವರ್ಣ ಬೈಕಾಡಿ, ಕ್ರೀಡಾ ಕಾರ್ಯದರ್ಶಿ ಕೃಷ್ಣ ಮೊಗವೀರ, ಮಂದಾರ್ತಿ ಘಟಕದ ಅಧ್ಯಕ್ಷ ರಾಘವ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಜಿಲ್ಲಾಧ್ಯಕ್ಷ ಜಯ ಸಿ. ಕೋಟ್ಯಾನ್ ಸ್ವಾಗತಿಸಿದರು. ಮಂದಾರ್ತಿ ಘಟಕದ ಸ್ಥಾಪಕಾಧ್ಯಕ್ಷ ಅಶೋಕ್ ಎಲ್ ಕುಂದರ್ ವಂದಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಮತ್ತು ಶಿವರಾಮ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT