ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೌಡಯ್ಯ ಶ್ರೇಷ್ಠ ವಚನಕಾರ’

Last Updated 23 ಜನವರಿ 2017, 9:17 IST
ಅಕ್ಷರ ಗಾತ್ರ

ಕಮಲನಗರ:  ಶೋಷಿತ ವರ್ಗದ ಧ್ವನಿಯಾಗಿ, ಸಮಾಜದಲ್ಲಿನ ಮೌಢ್ಯಗಳ ಅಳಿಸಿ ಹಾಕಲು ಪ್ರಯತ್ನಿಸಿದ ಅಂಬಿಗರ ಚೌಡಯ್ಯ ಶ್ರೇಷ್ಠ ವಚನಕಾರರು ಎಂದು ಬೀದರ್‌ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕ ಡಾ.ವಿಶ್ವನಾಥ ಕಿವಡೆ ಹೇಳಿದರು.

ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹಿರಂಗ ಶುದ್ಧಿಯ ಜೊತೆಗೆ ಅಂತರಂಗದ ಶುದ್ಧಿಯಾಗಬೇಕು. ಮೇಲ್ವರ್ಗದ ದಬ್ಬಾಳಿಕೆ, ಪುರೋಹಿತ ಶಾಹಿಗಳ ಶೋಷಣೆ, ಧರ್ಮದ ಹೆಸರಿನಲ್ಲಿ ನಡೆಯುವ ವಂಚನೆ, ವರ್ಗ ತಾರತಮ್ಯವನ್ನು ಖಂಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಂಡಿದ್ದರು ಎಂದರು.

ಪ್ರಾಚಾರ್ಯ ಬಿ.ಕೆ.ಬೂದೆ ಮಾತನಾಡಿ, ದೇವರ ಆರಾಧನೆಗೆ ಪರಿಶುದ್ಧವಾದ ಮನಸ್ಸು ಅಗತ್ಯ. ಆಡಂಬರದ ಪೂಜೆಯು ಸಮಾಜವನ್ನು ಅಂಧಕಾರದ ಕಡೆಗೆ ತಳ್ಳುತ್ತದೆ ಎಂದರು. ಪ್ರೊ.ಎಸ್‌.ಎನ್‌.ಶಿವಣಕರ್‌, ಪ್ರೊ.ಬಸವರಾಜ ಹತ್ತಿಕಂಕಣ ಮಾತನಾಡಿದರು. ಶ್ರೀನಿವಾಸ ಬೇಂದ್ರೆ, ಗಣಪತಿ ದಶರಥ್‌, ಮಿಥುನ್‌ ಶಿಂಧೆ, ಅನಿತಾ ಬಿರಾದಾರ್‌, ಜರೋಬಿ ಬಾಗವಾನ್‌, ಪ್ರವೀಣ ಶಿಂಧೆ ಇದ್ದರು. ಪ್ರೊ.ಎಸ್‌.ಎಸ್‌.ಮೈನಾಳೆ ಸ್ವಾಗತಿಸಿದರು. ಉಮಾಕಾಂತ ಬಚ್ಚಣ್ಣಾ ವಂದಿಸಿದರು. ಪ್ರೊ.ಜೆ.ಎಂ.ಚಿಮ್ಮಾ ನಿರೂಪಿಸಿದರು.

ಪಟ್ಟದ್ದೇವರ ಪ್ರೌಢ ಶಾಲೆ: ಕಮಲನಗರದ ಡಾ.ಚನ್ನಬಸವ ಪಟ್ಟದ್ದೇವರ ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಅಧಿಕಾರಿ ಪ್ರಕಾಶ ಮಾನಕರಿ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಶಿಕ್ಷಕ ಶಂಕರರಾವ ನೆಲವಾಡೆ ಅವರು ಚೌಡಯ್ಯ ಅವರ ಕುರಿತು ಮಾತನಾಡಿದರು.ಜ್ಞಾನೇಶ್ವರ ಹಂಡೆ, ವಿಜಯಕುಮಾರ ಶೇಗೆದಾರ್‌, ಸುಭಾಷ ಧರಣೆ, ಸುಷ್ಮಾ ನಾಯ್ಕ್‌, ದೇವಿದಾಸ ಡಾಂಗೆ, ಪೂರ್ಣಿಮಾ ಸಜ್ಜನಶೆಟ್ಟಿ, ಮಹಾನಂದಾ ಧರಣೆ, ಹಾವಗಿರಾವ ಮಠಪತಿ ಇದ್ದರು.

ಖತಗಾಂವ್‌ ವರದಿ: ಕಮಲನಗರ ಸಮೀಪದ ಖತಗಾಂವ್‌ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ವಿಜಯಕುಮಾರ ಬಿರಾದಾರ್‌ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸುಭಾಷ ಬಿರಾದಾರ್‌, ಸೂರ್ಯಕಾಂತ ಮಹಾಜನ್‌, ಇಂದ್ರಜೀತ್‌ ಗವಳಿ, ಮಲ್ಲಮ್ಮಾ ಕಸ್ತೂರೆ, ಇಂದಿರಾಬಾಯಿ ಕಾಂಬಳೆ, ಶಿವಕುಮಾರ ಡೊಂಗರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT