ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಕಟ್ಟಡ ಉದ್ಘಾಟನೆ 26ಕ್ಕೆ

ಆದರ್ಶ ವಿದ್ಯಾಲಯದಲ್ಲಿ ನಡೆದ ಪಾಲಕರ ಸಭೆಯಲ್ಲಿ ಬಿಇಓ ಮಾಹಿತಿ
Last Updated 23 ಜನವರಿ 2017, 11:51 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ತಾಲ್ಲೂಕಿನ ಹುಣಶ್ಯಾಳ ಪಿ.ಬಿ ಗ್ರಾಮದಲ್ಲಿ ನಿರ್ಮಾಣ ಗೊಂಡಿರುವ ಆದರ್ಶ ವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಇದೇ 26 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾ ಧಿಕಾರಿ ಮಂಜುನಾಥ ಗುಳೇದಗುಡ್ಡ ಹೇಳಿದರು.

ಪಟ್ಟಣದ ಬಸವೇಶ್ವರ ಪ.ಪೂ ಕಾಲೇಜು ಆವರಣದಲ್ಲಿನ ಆದರ್ಶ ವಿದ್ಯಾಲಯದಲ್ಲಿ ಭಾನುವಾರ ಜರುಗಿದ ಪಾಲಕರ ಹಾಗೂ ಎಸ್‌ಡಿಎಂಸಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಹುಣಶ್ಯಾಳ ಪಿ.ಬಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಕಟ್ಟಡವು ಎಲ್ಲ ರಿತಿಯ ಸೌಲಭ್ಯಗಳನ್ನು ಹೊಂದಿದೆ. ಉದ್ಘಾಟನೆ ನಂತರ ಪಿಠೋಪಕರಣಗಳನ್ನು ಸ್ಥಳಾಂತರಿಸ ಲಾಗುವುದು ಎಂದರು. ಶಾಲೆಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗುವುದು. ಫೆಬ್ರುವರಿ ತಿಂಗಳಲ್ಲಿ ನೂತನ ಕಟ್ಟಡದಲ್ಲಿ ಪಾಠ ಪ್ರವಚನ ನಡೆಯಲಿವೆ ಎಂದರು.

ಪಟ್ಟಣದ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವುದರಿಂದ ವಿದ್ಯಾರ್ಥಿ ಗಳಿಗೆ ಬಸ್‌ ಪಾಸ್‌ ಸೌಲಭ್ಯ ಕಲ್ಪಿಸುವಂತೆ  ಬಸ್‌ ಘಟಕದ ವ್ಯವಸ್ಥಾಪಕರಿಗೆ ಕೇಳಿಕೊಳ್ಳಲಾ ಗುವುದು ಎಂದು ಹೇಳಿದರು.

‘ನಮ್ಮ ಮಕ್ಕಳು ಈಗಾಗಲೇ ಪರೀಕ್ಷೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಶಾಲೆಯನ್ನು ಸ್ಥಳಾಂತರಿಸುವುದರಿಂದ  ಮಕ್ಕಳಿಗೆ ತೊಂದರೆಯಾಗಲಿದೆ. ಕೆಲ ಗ್ರಾಮಗಳಿಂದ ಸರಿಯಾದ ಸಮಯಕ್ಕೆ ಬಸ್‌ ಸೌಲಭ್ಯ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ವಿಶೇಷವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆಯ ಹಿತದೃಷ್ಟಿ ಯಿಂದ ಜೂನ್‌ ತಿಂಗಳಲ್ಲಿ ಶಾಲೆಯ ಸ್ಥಳಾಂತರ ಮಾಡಬೇಕು’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಪಾಲಕರು ಒತ್ತಾಯಿಸಿದರು.  ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಕೆ.ಎಂ.ಲಮಾಣಿ ಮಾತ ನಾಡಿ,  ಶಾಲಾ ಕಟ್ಟಡ ದಲ್ಲಿ ಶೈಕ್ಷಣಿಕ ಚಟುವಟಿಕೆ ನಡೆದಾಗ ಮಾತ್ರ ಕಟ್ಟಡ ಸುಸಜ್ಜಿತವಾಗಿ ಉಳಿಯು ತ್ತದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಎಸ್‌.ಎಲ್‌. ಬಂಡಿವಡ್ಡರ, ಉಪಾಧ್ಯಕ್ಷ ರಮೇಶ ಮೇಟಿ, ಶಿಕ್ಷಣ ಸಂಯೋಜಕ ಮಹಾಂತೇಶ ಝಳಕಿ, ಕವಿತಾ ಮಲ ಘಾಣ, ಗೀತಾ ಹಾರಿವಾಳ, ಅಂಬು ತಾಯಿ ಮಿಣಜಗಿ, ಕಸ್ತೂರಿ ಬುಯ್ಯಾರ, ರೇಣುಕಾ ಕೋಳಕುರ, ಸುಜಾತಾ ಬೋರಗಿ, ಯಮನಪ್ಪ ಉಳ್ಳಾಗಡ್ಡಿ, ಬಾಬು ಮಸಬಿನಾಳ, ನಿಂಗಪ್ಪ ಬಾಗೇವಾಡಿ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕಿ ಎಸ್‌.ಬಿ.ಹಡಲಗೇರಿ ಸ್ವಾಗತಿಸಿ, ಆರ್‌.ಐ.ಕುಂಬಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT