ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬದುಕಿನ ಸಾಕ್ಷಾತ್ಕಾರಕ್ಕೆ ಸಂವೇದನೆ ಅಗತ್ಯ’

ರವಿ ದಾತಾರ ಪ್ರಶಸ್ತಿ ಪ್ರದಾನ ಸಮಾರಂಭ; ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿದ ನೃತ್ಯ ರೂಪಕ
Last Updated 23 ಜನವರಿ 2017, 12:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನೃತ್ಯ ಸರ್ವ ಕಲೆಗಳಲ್ಲೂ ಸುಂದರವಾದ ಕಲೆ. ಇದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ಇಂದು ಮಾನವ ವ್ಯವಹಾರಿಕ ಬದುಕಿನಿಂದ ಸಂವೇದನೆ ರಹಿತನಾಗುತ್ತಿದ್ದಾನೆ.

ಬದುಕಿನ ಸಾಕ್ಷಾತ್ಕಾರಕ್ಕೆ ಸಂವೇದನೆ ಅಗತ್ಯ. ಇದನ್ನು ಕಲೆ ಒದಗಿಸುತ್ತದೆ’ ಎಂದು ಧಾರವಾಡ ಆಕಾಶವಾಣಿ ಕೇಂದ್ರದ ಉದ್ಘೋಷಕ ಶಶಿಧರ ನರೇಂದ್ರ ಹೇಳಿದರು.

ಹುಬ್ಬಳ್ಳಿಯ ಡಿ.ಎಸ್‌. ಕರ್ಕಿ ಕನ್ನಡ ಭವನದಲ್ಲಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಶಿರಸಿ ಕೇಂದ್ರದ ಹುಬ್ಬಳ್ಳಿ ಘಟಕದಿಂದ ಆಯೋಜಿಸಿದ್ದ ‘ರವಿ ದಾತಾರ’ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


‘ಮಕ್ಕಳು ಎಲ್ಲ ವಿಭಾಗದಲ್ಲೂ ಬೆಳೆಯಬೇಕು ಎಂಬ ನಿರೀಕ್ಷೆ ಪಾಲಕರಲ್ಲಿ ಸಾಮಾನ್ಯ. ಮಕ್ಕಳ  ಪ್ರತಿಭೆ ಗುರುತಿಸಿ ಪಾಲಕರು ಮಾರ್ಗದರ್ಶನ ಮಾಡಬೇಕು. ಶಿಷ್ಯರ ಮೇಲೆ ಗುರುಗಳು ಭರವಸೆ ಇಟ್ಟುಕೊಂಡಿರುತ್ತಾರೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಶಿಷ್ಯರದು’ ಎಂದು ಹೇಳಿದರು.

ಶಿರಸಿಯ ಸಾಮಾಜಿಕ ಕಾರ್ಯಕರ್ತ ದೀಪಕ ದೊಡ್ಡೂರ ಮಾತನಾಡಿ, ಗುರು –ಶಿಷ್ಯ ಪರಂಪರೆಯಿಂದಾಗಿ ಕಲಾ ಕ್ಷೇತ್ರದಲ್ಲಿ ಇನ್ನು ಮೌಲ್ಯಗಳು ಉಳಿದಿವೆ ಎಂದರು.ಹುಬ್ಬಳ್ಳಿಯ ಚೇತನ ಪಬ್ಲಿಕ್‌ ಸ್ಕೂಲಿನ ನಿರ್ದೇಶಕ ವಿ.ಎಂ. ಕೊರವಿ ಮಾತನಾಡಿ, ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಗೀತ ವಿಭಾಗವಿದ್ದು, ಅಲ್ಲಿ ಸರ್ಕಾರ ಸ್ನಾತಕೋತ್ತರ ನೃತ್ಯ ಪದವಿ ಕೋರ್ಸ್‌ ಆರಂಭಿಸಬೇಕಿದೆ ಎಂದು ಹೇಳಿದರು.

ನಾಗಪುರದ ವಿದ್ವಾನ್ ಕಿಶೋರ ಹಂಪಿಹೊಳಿ ಅವರಿಗೆ ‘ರವಿದಾತಾರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದುಷಿ ಸಹನಾ ಭಟ್‌ ದಂಪತಿಯನ್ನು ಸನ್ಮಾನಿಸಲಾಯಿತು.ಯಕ್ಷಗಾನ ಕಲಾವಿದೆ ವಿದ್ಯಾ ಭಟ್‌, ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್‌ ಹಾಜರಿದ್ದರು.

ಮನರಂಜಿಸಿದ ನೃತ್ಯ ರೂಪಕ: ಪ್ರಶಸ್ತಿ ವಿತರಣಾ ಸಮಾರಂಭದ ನಂತರ ನಡೆದ ವಿದುಷಿ ಸಹನಾ ಭಟ್‌ ನಿರ್ದೇಶನದ ಬಬ್ರು­ವಾಹನ ನೃತ್ಯ ರೂಪಕ ಕಲಾ ಪ್ರಿಯರನ್ನು ಮಂತ್ರ ಮುಗ್ಧಗೊಳಿಸಿತು.ಳ್ಳಿ: ‘ನೃತ್ಯ ಸರ್ವ ಕಲೆಗಳಲ್ಲೂ ಸುಂದರವಾದ ಕಲೆ. ಇದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ಇಂದು ಮಾನವ ವ್ಯವಹಾರಿಕ ಬದುಕಿನಿಂದ ಸಂವೇದನೆ ರಹಿತನಾಗುತ್ತಿದ್ದಾನೆ. ಬದುಕಿನ ಸಾಕ್ಷಾತ್ಕಾರಕ್ಕೆ ಸಂವೇದನೆ ಅಗತ್ಯ. ಇದನ್ನು ಕಲೆ ಒದಗಿಸುತ್ತದೆ’ ಎಂದು ಧಾರವಾಡ ಆಕಾಶವಾಣಿ ಕೇಂದ್ರದ ಉದ್ಘೋಷಕ ಶಶಿಧರ ನರೇಂದ್ರ ಹೇಳಿದರು.


ಹುಬ್ಬಳ್ಳಿಯ ಡಿ.ಎಸ್‌. ಕರ್ಕಿ ಕನ್ನಡ ಭವನದಲ್ಲಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಶಿರಸಿ ಕೇಂದ್ರದ ಹುಬ್ಬಳ್ಳಿ ಘಟಕದಿಂದ ಆಯೋಜಿಸಿದ್ದ ‘ರವಿ ದಾತಾರ’ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳು ಎಲ್ಲ ವಿಭಾಗದಲ್ಲೂ ಬೆಳೆಯಬೇಕು ಎಂಬ ನಿರೀಕ್ಷೆ ಪಾಲಕರಲ್ಲಿ ಸಾಮಾನ್ಯ. ಮಕ್ಕಳ  ಪ್ರತಿಭೆ ಗುರುತಿಸಿ ಪಾಲಕರು ಮಾರ್ಗದರ್ಶನ ಮಾಡಬೇಕು. ಶಿಷ್ಯರ ಮೇಲೆ ಗುರುಗಳು ಭರವಸೆ ಇಟ್ಟುಕೊಂಡಿರುತ್ತಾರೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಶಿಷ್ಯರದು’ ಎಂದು ಹೇಳಿದರು. ಶಿರಸಿಯ ಸಾಮಾಜಿಕ ಕಾರ್ಯಕರ್ತ ದೀಪಕ ದೊಡ್ಡೂರ ಮಾತನಾಡಿ, ಗುರು –ಶಿಷ್ಯ ಪರಂಪರೆಯಿಂದಾಗಿ ಕಲಾ ಕ್ಷೇತ್ರದಲ್ಲಿ ಇನ್ನು ಮೌಲ್ಯಗಳು ಉಳಿದಿವೆ ಎಂದರು.

ಹುಬ್ಬಳ್ಳಿಯ ಚೇತನ ಪಬ್ಲಿಕ್‌ ಸ್ಕೂಲಿನ ನಿರ್ದೇಶಕ ವಿ.ಎಂ. ಕೊರವಿ ಮಾತನಾಡಿ, ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಗೀತ ವಿಭಾಗವಿದ್ದು, ಅಲ್ಲಿ ಸರ್ಕಾರ ಸ್ನಾತಕೋತ್ತರ ನೃತ್ಯ ಪದವಿ ಕೋರ್ಸ್‌ ಆರಂಭಿಸಬೇಕಿದೆ ಎಂದು ಹೇಳಿದರು.

ನಾಗಪುರದ ವಿದ್ವಾನ್ ಕಿಶೋರ ಹಂಪಿಹೊಳಿ ಅವರಿಗೆ ‘ರವಿದಾತಾರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದುಷಿ ಸಹನಾ ಭಟ್‌ ದಂಪತಿಯನ್ನು ಸನ್ಮಾನಿಸಲಾಯಿತು.
ಯಕ್ಷಗಾನ ಕಲಾವಿದೆ ವಿದ್ಯಾ ಭಟ್‌, ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್‌ ಹಾಜರಿದ್ದರು.

ಮನರಂಜಿಸಿದ ನೃತ್ಯ ರೂಪಕ: ಪ್ರಶಸ್ತಿ ವಿತರಣಾ ಸಮಾರಂಭದ ನಂತರ ನಡೆದ ವಿದುಷಿ ಸಹನಾ ಭಟ್‌ ನಿರ್ದೇಶನದ ಬಬ್ರು­ವಾಹನ ನೃತ್ಯ ರೂಪಕ ಕಲಾ ಪ್ರಿಯರನ್ನು ಮಂತ್ರ ಮುಗ್ಧಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT