ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂದೂ ಮರೆಯದು ಮಾತೃಭಾಷೆ

Last Updated 23 ಜನವರಿ 2017, 13:43 IST
ಅಕ್ಷರ ಗಾತ್ರ

ಲಂಡನ್‌: ಹುಟ್ಟಿನಿಂದಲೇ ಜತೆಯಾಗುವ ಮಾತೃಭಾಷೆಯಲ್ಲಿ ಮಾತನಾಡಲು ಹೆಚ್ಚು ಅವಕಾಶ ಸಿಗದಿದ್ದರೂ ನೆನಪಿನಲ್ಲಿ ಅಚ್ಚಾಗಿರುತ್ತದೆ ಎಂದು ಹೊಸ ಅಧ್ಯಯನ ಹೇಳುತ್ತಿದೆ.

ಚಿಕ್ಕ ವಯಸ್ಸಿನಲ್ಲಿ ಮನೆಯವರು ಕಲಿಸುವ ಅಥವಾ ಮಾತನಾಡುವ ಭಾಷೆ ಸುಪ್ತ ಮನಸ್ಸಿನಲ್ಲಿ ಉಳಿಯುತ್ತದೆ. ಮಕ್ಕಳು ಬೆಳೆಯುತ್ತ ಭಾಷೆ ಬದಲಾಗಿ ಎಷ್ಟೇ ವರ್ಷಗಳು ಮಾತೃಭಾಷೆ ಆಡದಿದ್ದರೂ ನೆನಪಿನಿಂದ ಮಾಸಿರುವುದಿಲ್ಲ.

ಸುಪ್ತವಾಗಿ ಉಳಿದಿಕೊಂಡಿರುವ ಭಾಷಾ ಜ್ಞಾನ ಸುಲಭವಾಗಿ ಮತ್ತೆ ಮಾತೃಭಾಷೆ ಉಚ್ಚಾರಣೆ ಕಲಿಯಲು ಸಹಾಯ ಮಾಡುತ್ತದೆ. ಈ ಕುರಿತು ನೆದರ್‌ಲ್ಯಾಂಡ್‌ನ ರಾಡ್‌ಬೌಂಡ್‌ ವಿಶ್ವವಿದ್ಯಾಲಯ ಹಾಗೂ ಇತರೆ ವಿಜ್ಞಾನಿಗಳು ಜತೆಗೂಡಿ ದಶಕಗಳ ಕಾಲ ಸಂಶೋಧನೆ ನಡೆಸಿದ್ದಾರೆ.

ಡಚ್‌ ಭಾಷೆ ಮಾತನಾಡುವ ಕೊರಿಯಾ ಮೂಲದ 29 ಮಕ್ಕಳು ಹಾಗೂ ಅಷ್ಟೇ ಪ್ರಮಾಣದ ಸ್ಥಳೀಯ ಡಚ್‌ ಮಾತನಾಡುವ ಮಕ್ಕಳನ್ನು ಈ ಅಧ್ಯಯನದಲ್ಲಿ ಗಮನಿಸಲಾಗಿದೆ.

ಈ ಎಲ್ಲ ಮಕ್ಕಳಿಗೆ ಕೊರಿಯನ್‌ ಭಾಷಾ ತರಬೇತಿ ನೀಡಿ ಪುನರ್‌ಉಚ್ಚರಿಸುವಂತೆ ತಿಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಮೂಲ ಕೊರಿಯನ್ನರು ಹೆಚ್ಚು ಸ್ಪಷ್ಟ ಮತ್ತು ಸರಿಯಾಗಿ ಕೊರಿಯನ್‌ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT