ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌, ಐಪಿಎಸ್‌ ಅಧಿಕಾರಿಗಳ ವಿಚಾರಣೆಗೆ 90 ದಿನ ಗಡುವು

Last Updated 23 ಜನವರಿ 2017, 14:46 IST
ಅಕ್ಷರ ಗಾತ್ರ

ನವದೆಹಲಿ: ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ  ಮೇಲಿನ ಇಲಾಖಾ ವಿಚಾರಣೆಯು ಗರಿಷ್ಠ 90 ದಿನಗಳಲ್ಲಿ ಮುಗಿಯಬೇಕು. ತಪ್ಪಿತಸ್ಥರಿಗೆ ತ್ವರಿತವಾಗಿ ಶಿಕ್ಷೆ ನೀಡುವ ನಿಟ್ಟಿನಲ್ಲಿ ಸರ್ಕಾರ ಹೊಸ ನಿಯಮಾವಳಿ ರೂಪಿಸಿದೆ.

ಅಖಿಲ ಭಾರತೀಯ ಸೇವೆಗಳ ಅಧಿಕಾರಿಗಳ ವಿಚಾರಣೆಗೆ ಕೇಂದ್ರ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆ ಸಚಿವಾಲಯ ಹೊಸ ನಿಯಮಾವಳಿ ಸಿದ್ಧಪಡಿಸಿದೆ.

ಭಾರತೀಯ ಆಡಳಿತ ಸೇವೆ(ಐಎಎಸ್‌), ಭಾರತೀಯ ಪೊಲೀಸ್‌ ಸೇವೆ(ಐಪಿಎಸ್‌), ಭಾರತೀಯ ಅರಣ್ಯ ಸೇನೆ(ಐಎಫ್‌ಎಸ್‌) ಸೇರಿದಂತೆ ಇತರೆ ವರ್ಗದ ಅಧಿಕಾರಿಗಳ ವಿಚಾರಣೆ ತ್ವರಿತವಾಗಿ ಪೂರ್ಣಗೊಳಿಸಲು ಸಹಕಾರಿಯಾಗಲಿದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

ಹೊಸ ನಿಯಮಾವಳಿ ಪ್ರಕಾರ, ಇಲಾಖಾ ವಿಚಾರಣೆ ಮತ್ತು ವರದಿ ಸಲ್ಲಿಸಲು 6 ತಿಂಗಳ ಮಿತಿ ನಿಗದಿ ಪಡಿಸಲಾಗಿದೆ. ನಿಗದಿಯಂತೆ ವಿಚಾರಣೆ ಪೂರ್ಣಗೊಳ್ಳದಿರಲು ನ್ಯಾಯಸಮ್ಮತ ಕಾರಣಗಳಿದ್ದರೆ ಗರಿಷ್ಠ 90 ದಿನಗಳ ಕಾಲಾವಕಾಶ ವಿಸ್ತರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT