ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಾಧಿಕಾರ ಮಹೋತ್ಸವ: ಧರ್ಮ ಜಾಗೃತಿ ಪಾದಯಾತ್ರೆ

Last Updated 24 ಜನವರಿ 2017, 9:18 IST
ಅಕ್ಷರ ಗಾತ್ರ

ಮಸ್ಕಿ: ಫೆ. 3 ರಂದು ಇಲ್ಲಿನ ಗಚ್ಚಿನಮಠದ ಪಟ್ಟಾಧಿಕಾರ ವಹಿಸಿಕೊಳ್ಳಲಿರುವ ರುದ್ರಮುನಿದೇವರು ಸೋಮವಾರದಿಂದ ಪಟ್ಟಣದಲ್ಲಿ ಧರ್ಮ ಜಾಗೃತಿ ಪಾದಯಾತ್ರೆ ಕೈಗೊಂಡರು. ಬಸವೇಶ್ವರ ನಗರದ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಬಸವೇಶ್ವರ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಪ್ರಾರಂಭಿಸಿದರು.

ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು, ಗುಳೆದಗುಡ್ಡದ ನೀಲಕಂಠಸ್ವಾಮೀಜಿ, ಮಡಿವಾಳಯ್ಯ ಶಾಸ್ತ್ರಿ  ಸ್ವಾಮಿಗಳ ಪಾದಯಾತ್ರೆಗೆ ಸಾಥ್‌ ನೀಡಿದರು. ಬಸವೇಶ್ವರ ನಗರದಿಂದ ಆರಂಭವಾದ ಯಾತ್ರೆ ಪಾರ್ವತಿ ನಗರ, ಸೋಮನಾಥ ನಗರ, ಪೂಜಾರಿ ಓಣಿ, ವಾಲ್ಮೀಕಿ ನಗರ, ದೈವದಕಟ್ಟೆ, ಗುಂಡಳ್ಳಿ ಓಣಿ, ಮುದಗಲ್ಲ ಓಣಿ ಸೇರಿದಂತೆ ವಿವಿಧೆಡೆ ಪಾದಯಾತ್ರೆ ನಡೆಸಿದರು.

ಪಾದಯಾತ್ರೆ ಸಮಯದಲ್ಲಿ ದಾರಿಯುದ್ದಕ್ಕೂ ಭಕ್ತರು ಪಾದಪೂಜೆ ಮಾಡಿದರು.  ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ಉಪಾಧ್ಯಕ್ಷ ರವಿಕುಮಾರ ಪಾಟೀಲ, ಕಿರಣ್‌ ಸಾನಬಾಳ, ಎಂ. ಅಮರೇಶ, ಅಮರೇಶ ನಂದಿಹಾಳ, ದೇವಣ್ಣ ನಾಯಕ,  ಶರಣಯ್ಯ ಸೊಪ್ಪಿಮಠ , ಮಹಾದೇವಪ್ಪಗೌಡ ಪೊಲೀಸ್‌ ಪಾಟೀಲ, ತಿಮ್ಮನಗೌಡ ಗುಡದೂರು, ಡಾ. ಬಿ.ಎಚ್‌. ದಿವಟರ್‌, ಪಂಪಣ್ಣ ಗುಂಡಳ್ಳಿ, ಬಸನಗೌಡ ಪೊಲೀಸ್‌ ಪಾಟೀಲ, ಸಿದ್ದಲಿಂಗಯ್ಯ ಗಚ್ಚಿನಮಠ, ಆದಯ್ಯಸ್ವಾಮಿ ಕ್ಯಾತನಟ್ಟಿ, ಲಕ್ಷ್ಮಿನಾರಾಯಣ ಶೆಟ್ಟಿ ಭಾಗವಹಿಸಿದ್ದರು.

ಪ್ರವಚನ: ಧಾರ್ಮಿಕ ಕಾರ್ಯಕ್ರಮಗಳಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಎಮ್ಮಿಗನೂರಿನ ವಾಮದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಗಚ್ಚಿನಮಠದ ರುದ್ರಮುನಿದೇವರ ಪಟ್ಟಾಧಿಕಾರ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಲಿಂಗೈಕ್ಯ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ಪ್ರವಚನದ ಸಾನಿಧ್ಯ ವಹಿಸಿ ಮಾತನಾಡಿದರು. ಸಮಾಜ ಬದಲಾಗಬೇಕು, ಎಲ್ಲರನ್ನೂ ಕೆಟ್ಟ ದೃಷ್ಟಿಯಿಂದ ನೋಡುವ ಪ್ರವೃತ್ತಿ ಬಿಡಬೇಕು ಎಂದರು.

ಶಾಸಕ ಪ್ರತಾಪಗೌಡ ಪಾಟೀಲ ಉದ್ಘಾಟಿಸಿದರು. ತೆಕ್ಕಲಕೋಟೆಯ ವೀರಭದ್ರ ಶಿವಾಚಾರ್ಯರು, ರಂಭಾಪುರಿ ಶಾಖಾ ಮಠದ ಸೋಮನಾಥ ಶಿವಾಚಾರ್ಯರು, ಗುಳೆದಗುಡ್ಡದ ನೀಲಕಂಠ ಸ್ವಾಮೀಜಿ, ಹಳೆಕೋಟೆಯ ಮಲ್ಲಿಕಾರ್ಜುನ ಸ್ವಾಮೀಜಿ, ದೇವರಬೂಪೂರದ ಗಜದಂಡ ಸ್ವಾಮೀಜಿ, ಗಚ್ಚಿನಮಠದ ರುದ್ರಮುನಿದೇವರು, ಮಡಿವಾಳಯ್ಯ ಶಾಸ್ತ್ರಿ, ಕೆ. ವೀರನಗೌಡ, ಮಹಾದೇವಪ್ಪಗೌಡ ಪೊಲೀಸ್‌ ಪಾಟೀಲ, ಡಾ. ಶಿವಶರಣಪ್ಪ ಇತ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT