ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿಯೊಂದಿಗೆ ನೃತ್ಯ ಮಾಡಿದ ಪಾಕ್‌ ಮಾಜಿ ಅಧ್ಯಕ್ಷ ಮುಷರಫ್‌

Last Updated 24 ಜನವರಿ 2017, 10:28 IST
ಅಕ್ಷರ ಗಾತ್ರ
ADVERTISEMENT

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಯುವತಿಯೊಂದಿಗೆ ನೈಟ್‌ ಡಾನ್ಸ್‌ ಬಾರ್‌ನಲ್ಲಿ ‘ದಿಲ್ಲಿ ವಾಲಿ ಗರ್ಲ್‌ಫ್ರೆಂಡ್‌’ ಎಂಬ ಬಾಲಿವುಡ್‌ ಗೀತೆಗೆ ಹೆಜ್ಜೆ ಹಾಕಿರುವುದು ಇದೀಗ ವೈರಲ್‌ ಆಗಿದೆ.

ಪಾಕಿಸ್ತಾನದ ಪತ್ರಕರ್ತ ಹಮೀದ್‌ ಮಿರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೊ ತುಣುಕನ್ನು ಹರಿಬಿಟ್ಟಿದ್ದಾರೆ. ಮುಷರಫ್‌ ನೃತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಲು ಪಾಕಿಸ್ತಾನ ಜನತೆ ಮುಗಿಬಿದ್ದಿದ್ದಾರೆ. ಯಾವ ಸ್ಥಳದಲ್ಲಿ ಮುಷರಫ್‌ ಅವರು ಈ ನೃತ್ಯ ಮಾಡಿದ್ದು ಎಂಬುದು ಬಹಿರಂಗಗೊಂಡಿಲ್ಲ.

ಇದಕ್ಕೂ ಮೊದಲು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದ ಮುಷರಫ್‌ ಅವರು ಹೆಂಡತಿ ಜತೆ ಹೆಜ್ಜೆ ಹಾಕಿದ ವಿಡಿಯೊ ಸಖತ್‌ ವೈರಲ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT