ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಗಳ ದೇಣಿಗೆ: ಶೇ 69ರಷ್ಟಕ್ಕೆ ಮೂಲವೇ ಇಲ್ಲ

Last Updated 24 ಜನವರಿ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಟ್ಟದ 57 ಪಕ್ಷಗಳು 2004–05ರಿಂದ 2014–15ರ ಅವಧಿಯಲ್ಲಿ ಸಂಗ್ರಹಿಸಿದ ದೇಣಿಗೆಯ ಮೊತ್ತ ₹11,367 ಕೋಟಿ ಎಂದು ಅಸೋಸಿಯೇಷನ್‌ ಫಾರ್ ಡೆಮಾಕ್ರಟಿಕ್‌ ರೈಟ್ಸ್‌ (ಎಡಿಆರ್‌) ಸಂಸ್ಥೆ ಹೇಳಿದೆ. 
 
ಸಂಸ್ಥೆ ಲೆಕ್ಕಪತ್ರಗಳ ವಿಶ್ಲೇಷಣೆ ನಡೆಸಿದ್ದು, ಈ ದೇಣಿಗೆಯಲ್ಲಿ ಶೇ 69ರಷ್ಟು ಮೊತ್ತವನ್ನು ಅನಾಮಧೇಯ ಮೂಲಗಳಿಂದಲೇ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ನೀಡಿದೆ. 
 
ಅಪರಿಚಿತ ಮೂಲಗಳಿಂದ ರಾಷ್ಟ್ರೀಯ ಪಕ್ಷಗಳು ಸಂಗ್ರಹಿಸುವ ದೇಣಿಗೆ ಪ್ರಮಾಣ ಶೇ 313ರಷ್ಟು ಏರಿಕೆಯಾಗಿದ್ದರೆ ಪ್ರಾದೇಶಿಕ ಪಕ್ಷಗಳದ್ದು ಶೇ 652ರಷ್ಟು ಹೆಚ್ಚಾಗಿದೆ. ದೇಣಿಗೆ ನೀಡಿದವರ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಜನರಿಗೆ ದೊರೆಯುವಂತೆ ಮಾಡಬೇಕು ಎಂದು ಎಡಿಆರ್‌ ಒತ್ತಾಯಿಸಿದೆ.
 
ಸಂಸ್ಥೆ ವಿಶ್ಲೇಷಣೆ ನಡೆಸಿದ 11 ಹಣಕಾಸು ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷ ಅತಿ ಹೆಚ್ಚು ಅಂದರೆ ₹3,982 ಕೋಟಿ ದೇಣಿಗೆ ಸಂಗ್ರಹಿಸಿದೆ. ಅನಾಮಧೇಯ ಮೂಲಗಳಿಂದ ಅತಿ ಹೆಚ್ಚು ದೇಣಿಗೆ ಪಡೆದುಕೊಂಡ ಪಕ್ಷವೂ ಇದೇ ಆಗಿದೆ. ಒಟ್ಟು ದೇಣಿಗೆಯ ಶೇ 83ರಷ್ಟು ಅಥವಾ ₹3,323 ಕೋಟಿ ಅಪರಿಚಿತರಿಂದಲೇ ಬಂದಿದೆ.
 
ದೇಣಿಗೆ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿರುವ ಬಿಜೆಪಿ ₹3,272 ಕೋಟಿ ಸಂಗ್ರಹಿಸಿದ್ದರೆ ಅದರಲ್ಲಿ ಶೇ 65ರಷ್ಟು ಅಥವಾ ₹2,125 ಕೋಟಿಯ ಮೂಲ ಅನಾಮಧೇಯ. 
 
ಅನಾಮಧೇಯ ದೇಣಿಗೆ ಎಂದರೇನು?: ಈ ಮೊತ್ತವನ್ನು ಪಕ್ಷಗಳು ತಮ್ಮ ಆದಾಯ ತೆರಿಗೆ ಲೆಕ್ಕದಲ್ಲಿ ತೋರಿಸುತ್ತವೆ. ಆದರೆ ಇವೆಲ್ಲವೂ ₹20 ಸಾವಿರಕ್ಕಿಂತ ಕೆಳಗಿನ ದೇಣಿಗೆ ರೂಪದಲ್ಲಿ ಪಡೆಯಲಾಗಿದೆ ಎಂಬ ಕಾರಣಕ್ಕೆ ದೇಣಿಗೆ ಕೊಟ್ಟವರ ಮಾಹಿತಿ ಸಲ್ಲಿಸುವುದಿಲ್ಲ. 
 
ಪಕ್ಷಗಳು ಸಂಗ್ರಹಿಸಿರುವ ಒಟ್ಟು ಮೊತ್ತದಲ್ಲಿ ₹1,835 ಕೋಟಿ (ಶೇ 16ರಷ್ಟು) ದೇಣಿಗೆ ನೀಡಿದವರ ಮಾಹಿತಿ ಮಾತ್ರ ಇದೆ. ಇವು ₹20 ಸಾವಿರಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಪಡೆದುಕೊಂಡ ದೇಣಿಗೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT