ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರ್ವ: ವನಸುಮ ರಂಗೋತ್ಸವ ಉದ್ಘಾಟನೆ

Last Updated 28 ಜನವರಿ 2017, 5:11 IST
ಅಕ್ಷರ ಗಾತ್ರ

ಶಿರ್ವ: ಗ್ರಾಮೀಣ ಪ್ರದೇಶದಲ್ಲಿ ಆಧುನಿಕ ನವ್ಯ ನಾಟಕಗಳ ಬಗ್ಗೆ ಜನಸಾಮಾನ್ಯರಲ್ಲಿ ಆಸಕ್ತಿ ಮೂಡಿಸಲು ರಂಗೋತ್ಸವಗಳು ಸಹಕಾರಿಯಾಗಲಿದೆ. ನಾಟಕೋತ್ಸವ ಗಳು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಆಕ ರ್ಷಿಸುವಂತಾಗಬೇಕು ಎಂದು ಉದ್ಯಮಿ ಮನೋಹರ್ ಶೆಟ್ಟಿ ತಿಳಿಸಿದರು.

ಕಟಪಾಡಿ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು ರಂಗಮಂದಿರದಲ್ಲಿ ಕಟಪಾಡಿಯ ವನಸುಮ ವೇದಿಕೆ ವತಿಯಿಂದ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ಯೋಗದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ವನಸುಮ ರಂಗೋತ್ಸವ 2017 ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ವನಸುಮ ವೇದಿಕೆಯ ಗೌರವಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಬಾಂಧವ್ಯ ಬ್ಲಡ್ ಕರ್ನಾಟಕದ ಬಾಂಧವ್ಯ ದಿನೇಶ್ ಹಾಗೂ ವಂದನಾ ಯೋಗೀಶ್ ಆಚಾರ್ಯ ಅವರನ್ನು ಅಭಿನಂದಿಸ ಲಾಯಿತು. ವೇದಿಕೆಯ ಅಧ್ಯಕ್ಷ ಬಾಸುಮ ಕೊಡಗು, ಶಾಲಾ ಸಂಚಾಲಕ ಕೆ.ವಸಂತ ಮಾಧವ ಭಟ್ ಉಪಸ್ಥಿತರಿದ್ದರು.ಅಕ್ಷಯ್ ಸ್ವಾಗತಿಸಿದರು. ಪ್ರಭಾತ್ ಶೆಟ್ಟಿ ವಂದಿಸಿದರು. ವೇದಿಕೆಯ ಖಜಾಂಚಿ ಕಾವ್ಯವಾಣಿ ಕೊಡಗು ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT