ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೀರ್ತನೆ ಮೂಲಕ ಮೌಢ್ಯ ತೊಲಗಿಸಿದ ಪುರಂದರ ದಾಸ’

ನಗರ ಸಂಕೀರ್ತನೆ: ಅದ್ದೂರಿ ಮೆರವಣಿಗೆ; ಮಹಿಳೆಯರಿಂದ ಕೋಲಾಟ
Last Updated 28 ಜನವರಿ 2017, 8:18 IST
ಅಕ್ಷರ ಗಾತ್ರ

ಯಾದಗಿರಿ: ಪುರಂದರ ದಾಸರ ಪುಣ್ಯತಿಥಿ ಅಂಗವಾಗಿ ನಗರದಲ್ಲಿ ವಿಶ್ವಮಧ್ವ ಮಹಾ ಪರಿಷತ್‌ವತಿಯಿಂದ ಶುಕ್ರವಾರ ನಗರ ಸಂಕೀರ್ತನೆ ಕಾರ್ಯಕ್ರಮ ಭವ್ಯ ಮೆರ ವ ಣಿಗೆಯೊಂದಿಗೆ ವಿಜೃಂಭಣೆಯಿಂದ ಜರುಗಿತು.

ಶುಕ್ರವಾರ ಬೆಳಿಗ್ಗೆ ನಗರದ ಬಾಲಾಜಿ ಮಂದಿರದಿಂದ ರಾಘವೇಂದ್ರಸ್ವಾಮಿ ಮಠ ಪರಿಮಳ ಮಂಟಪದವರೆಗೆ ಹರೇ ಶ್ರೀನಿವಾಸ, ಗುರುರಾಜ ಮಹಿಳಾ, ಶ್ರೀರಾಮ ಭಜನಾ ಮಂಡಳಿಗಳ ಕಾರ್ಯಕರ್ತರು ಹಾಗೂ ನೂರಾರು ವಿಪ್ರ ಬಾಂಧವರಿಂದ ದಾಸರ ಕಿರ್ತನೆ, ಭಜನೆಯೊಂದಿಗೆ ಪುರಂದರ ದಾಸರ ಭಾವಚಿತ್ರದೊಂದಿಗೆ ನಗರ ಸಂಕೀರ್ತನೆ ನಡೆಸಲಾಯಿತು. ಮಹಿಳೆಯರು ಮತ್ತು ಮಕ್ಕಳು ದಾಸರ ಕೀರ್ತನೆಗೆ ಕೋಲಾಟ ಹಾಕಿದರು.

ನಂತರ ರಾಘವೇಂದ್ರ ಸ್ವಾಮಿ ಮಠದಲ್ಲಿ ಪಂಡಿತ ನರಸಿಂಹಾಚರ್ಯ ಪುರಾಣಿಕ ಅವರು ಪುರಂದರ ದಾಸರ ಕುರಿತು ಉಪನ್ಯಾಸ ನೀಡಿದರು. ‘ದಾಸರಲ್ಲಿ ಪುರಂದರ ದಾಸರು ಸರ್ವ ಶ್ರೇಷ್ಠರಾಗಿದ್ದಾರೆ. ಅವರು ತಮ್ಮ ಕೀರ್ತನೆಗಳ ಮೂಲಕ ಅಂದು ಸಮಾಜದಲ್ಲಿನ ಮೌಢ್ಯತೆಗಳನ್ನು ತೊಲಗಿಸಿ, ಸಮಾಜಿಕ ಪರಿವರ್ತನೆಯಲ್ಲಿ ಮಹತ್ತರದ ಕ್ರಾಂತಿಯನ್ನು ಮಾಡಿದ್ದಾರೆ. ಅವರು ತೊರಿದ ದಾರಿಯಲ್ಲಿ ನಾವು ಸಹ ನಗರದಲ್ಲಿ ಸಂಕಿರ್ತನೆಗಳನ್ನು ನಡೆಸುವ ಮೂಲಕ ದಾಸರ ತತ್ವಗಳನ್ನು ಸಮಾಜಕ್ಕೆ ಸಾರುವ ಉದ್ದೇಶ ಇಟ್ಟುಕೊಳ್ಳಲಾಗಿದೆ’ ಎಂದು ಹೇಳಿದರು

‘ಸಾಹಿತ್ಯ, ಸಂಸ್ಕೃತಿ, ಮತ್ತು ಆಧ್ಯಾತ್ಮಿಮಿಕ ಕ್ಷೇತ್ರದಲ್ಲಿ ಪುರಂದರ ದಾಸರು ಅನನ್ಯ ಕೊಡುಗೆ ನೀಡಿದ್ದನ್ನು ಮರೆಯುವಂತಿಲ್ಲ. ಪುರಂದರ ವಿಠ್ಠಲ ಎಂಬ ಅಂಕಿತದಲ್ಲಿ ಅಪಾರ ಕೀರ್ತನೆಗಳನ್ನು ರಚಿಸಿದ್ದಾರೆ. ಅಂತಹ ಮಹಾನ ವ್ಯಕ್ತಿಯ ಕೀರ್ತನೆ ಮತ್ತು ಇತರ ಕೃತಿಗಳನ್ನು ಅಧ್ಯಯನ ಮಾಡುವ ಮೂಲಕ ನಮ್ಮ ಜೀವನ ಪಾವನ ಮಾಡಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ಉತ್ತರಾಧಿ ಮಠದ ಸತ್ಯಾ ತ್ಮತೀರ್ಥರ ಅನುಗ್ರಹದಿಂದ ಕಳೆದ ನಾಲ್ಕು ವರ್ಷಗಳಿಂದ ವಿಶ್ವಮಧ್ವ ಮಹಾ ಪರಿ ಷತ್ತು ಘಟಕದಿಂದ ಹಲವು ಕಾರ್ಯಕ್ರಮಗಳು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಿ ಬಂಧು ಗಳ ಸಂಘಟನೆಯೊಂದಿಗೆ ಧಾರ್ಮಿಕ ಸಂಸ್ಕಾರಗಳ ಜಾಗೃತಿ ಮೂಡಿ ಸಲಾಗುತ್ತದೆ’ ಎಂದು ಹೇಳಿದರು.

ಸಮಾರಂಭದಲ್ಲಿ ಮಹಿಳೆಯರು, ಮಕ್ಕಳು, ನೂರಾರು ವಿಪ್ರ ಸಮಾಜ ಬಾಂಧವರು ಭಾಗವಹಿಸಿ, ಸಂಕೀರ್ತನೆಯನ್ನು ಯಶಸ್ವಿಗೊಳಿಸಿದರು. ಮಧ್ಯಾಹ್ನ ಪರಿಮಳ ಮಂಟಪದಲ್ಲಿ ತೀರ್ಥ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಶ್ರೀಯಾಜ್ಞ್ಯವಲ್ಕ್ಯ ಬಡಾವಣೆ : ನಗರದ ಹೊಸಲ್ಲಿ ಕ್ರಾಸ್ ಹತ್ತಿರವಿರುವ ಶ್ರೀಯಾ ಜ್ಞ್ಯವಲ್ಕ್ಯ ಬಡಾವಣೆಯ ರಾಘವೇಂದ್ರ ಸ್ವಾಮೀಜಿ ಮಠದಲ್ಲಿ ಪುರಂದರದಾಸರ ಪುಣ್ಯತಿಥಿ ಬಹಳ ಅದ್ಧೂರಿಯಾಗಿ ಜರುಗಿತು. ಶುಕ್ರವಾರ ಬೆಳಿಗ್ಗೆ ಮಠದಲ್ಲಿ ಅಷ್ಟೋತ್ತರ, ವಿಶೇಷ ಪೂಜೆ, ರಥೋತ್ಸವ, ನೈವೈದ್ಯೆ, ಮಹಾ ಮಂಗ ಳಾರತಿ, ಭಜನಾ ಕಾರ್ಯಕ್ರಮಗಳು ಜರುಗಿದವು. ಪುರಂದರದಾಸರ ಪುಣ್ಯತಿಥಿ ಸಮಾರಂಭದಲ್ಲಿ ಸ್ಟೇಶನ ಬಡಾವಣೆಯ ಅನೇಕ ಜನ ವಿಪ್ರ ಬಾಂಧವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT