ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ‘ಅಲ್ಲಮ’ ಚಿತ್ರ ನಿಷೇಧಕ್ಕೆ ಒತ್ತಾಯ

Last Updated 28 ಜನವರಿ 2017, 8:21 IST
ಅಕ್ಷರ ಗಾತ್ರ

ಸುರಪುರ: ಬಸವಪ್ರಿಯ ಲಿಂಗಾಯತ ಸಮಿತಿ ಮತ್ತು ವೀರಶೈವ ಲಿಂಗಾಯತ ಯುವ ವೇದಿಕೆಯ ಮುಖಂಡರು ಶುಕ್ರವಾರ ತಹಶೀಲ್ದಾರ್‌ ಕಚೇರಿ ಮುಂದೆ ‘ಅಲ್ಲಮ’ ಚಿತ್ರ ನಿಷೇಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.


ಮುಖಂಡರು ಮಾತನಾಡಿ, ‘ಟಿ.ಎಸ್. ನಾಗಾಭರಣ ಅವರು ಉದ್ದೇಶ ಪೂರ್ವಕವಾಗಿಯೇ ಲಿಂಗಾಯತರಿಗೆ ಅವಮಾನಿಸುವ ರೀತಿಯಲ್ಲಿ ಅಲ್ಲಮ ಚಿತ್ರ ಮಾಡಿ ಬಸವಣ್ಣನವರು ನೀಡಿದ ಇಷ್ಟಲಿಂಗವನ್ನು ಮರೆ ಮಾಚಿದ್ದಾರೆ’ ಎಂದು ಆರೋಪಿಸಿದರು.

‘ಬಸವಾದಿ ಶರಣರ ಜೀವ ನಾಧಾರಿತ ಅಲ್ಲಮ ಚಿತ್ರದಲ್ಲಿ ಶೂನ್ಯ ಪೀಠಾಧೀಶರಾದ ಅಲ್ಲಮಪ್ರಭುವಿಗೆ ಇಷ್ಟಲಿಂಗ ಹಾಕದೆ, ಕಲ್ಯಾಣದಲ್ಲಿಯ ಅರಸನಾಗಿದ್ದ ಬಿಜ್ಜಳನ ಕೊರಳಲ್ಲಿ ಲಿಂಗ ಹಾಕಲಾಗಿದೆ. ಅಲ್ಲದೆ ಕಲ್ಯಾಣ ಕ್ರಾಂತಿಗೆ ಕಾರಣವಾದ ಅಂತರ್‌ಜಾತಿ ವಿವಾಹವನ್ನು ವಿರೋಧಿಸಿದವರು ಅಲ್ಲಿಯ ವೈದಿಕರು. ಆದರೆ, ಸಿನಿಮಾದಲ್ಲಿ ಲಿಂಗಾಯತರು ವಿರೋಧಿ ಸಿದರೆಂದು ತಿರುಚಲಾಗಿದೆ.

ಇದು ಲಿಂಗಾಯತರಿಗೆ ಮತ್ತು ಬಸವ ತತ್ವಕ್ಕೆ ಮಾಡಿದ ಅವಮಾನ’ ಎಂದು ದೂರಿದರು.‘ಇಡೀ ಚಿತ್ರದಲ್ಲಿ ಎಲ್ಲಿಯೂ ಬಸವಣ್ಣ, ಅಲ್ಲಮಪ್ರಭು, ಅಕ್ಕ ಮಹಾ ದೇವಿ ಯಾರಿಗೂ ಇಷ್ಟ ಲಿಂಗವನ್ನು ಹಾಕದೆ ಇಡೀ ಚಿತ್ರವು ಬಸವ ಪರಂಪ ರೆಯ ವಿರೋಧಿಯಾಗಿ ಚಿತ್ರಿಸಲಾಗಿದೆ. ಆದ್ದರಿಂದ ಸರ್ಕಾರ ಕೂಡಲೆ ಈ ಚಿತ್ರವನ್ನು ನಿಷೇಧಿಸಬೇಕು. ಒಂದು ವೇಳೆ ನಿಷೇಧ ಮಾಡದಿದ್ದರೆ ರಾಜ್ಯ ದಾದ್ಯಂತ ಉಗ್ರ ಹೋರಾಟ ನಡೆಸ ಲಾಗುವುದು’ ಎಂದು ಎಚ್ಚರಿಸಿದರು.

ಮನವಿ ಪತ್ರವನ್ನು ಗ್ರೇಡ್ -2 ತಹಶೀಲ್ದಾರ್ ಸುಫೀಯಾ ಸುಲ್ತಾನ್‌ ಅವರಿಗೆ ಸಲ್ಲಿಸಲಾಯಿತು. ರಾಜು ಕುಂಬಾರ, ಚಂದ್ರಶೇಖರ ಡೊಣೂರ, ನಾಗಭೂಷಣ ಯಾಳಗಿ, ಸಂಗಾರಡ್ಡಿ ಬಿಜಾಸಪೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT