ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ವರಿಗೂ ಸಮಪಾಲು ಸಂವಿಧಾನದ ಆಶಯ’

Last Updated 28 ಜನವರಿ 2017, 8:32 IST
ಅಕ್ಷರ ಗಾತ್ರ

ತಾಳಿಕೋಟೆ: ‘ನಮ್ಮ ಸಂವಿಧಾನ  ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು  ಎಂಬ ಆಶಯದಡಿ ರಚಿಸಲಾಗಿದೆ’ ಎಂದು ಪುರಸಭೆಯ ಮುಖ್ಯಾಧಿಕಾರಿ ಅಶೋಕ ಪಾಟೀಲ ಹೇಳಿದರು. ಅವರು ಸ್ಥಳೀಯ ಪುರಸಭೆಯ ಆವರಣದಲ್ಲಿ  ಗುರುವಾರ ಸಾರ್ವಜನಿಕ ಸಭೆಯಲ್ಲಿ  68ನೆಯ ಗಣರಾಜ್ಯದಿನದ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸನ್ಮಾನ:  ಕ್ರೀಡಾ ರಂಗದಲ್ಲಿ ರಾಷ್ಟ್ರಮಟ್ಟ ದಲ್ಲಿ ಸಾಧನೆ ಮಾಡಿದ ವಿಪಿಎಂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಅಪೂರ್ವಾ ಡೋಣೂರಮಠ  ಹಾಗೂ  ಎಸ್‌.ಎಸ್‌.ಪ್ರೌಢಶಾಲೆಯ ವೈಶಾಲಿ ಕಾಂಬಳೆ (ಕರಾಟೆ)  ಕುಮಾರ ಚವಾಣ  ಹಾಗೂ ಸಾಗರ ನಾಯಕ ಎಚ್‌.ಎಸ್‌. ಪಾಟೀಲ ಪಿಯುಕಾಲೇಜು, ಪ್ರವೀಣ ಸಜ್ಜನ ತಾಳಿಕೋಟೆ ಎಸ್‌ಡಿಎಂ ಧಾರವಾಡ (ರಾಷ್ಟ್ರಮಟ್ಟದ 19 ವರ್ಷ ದೊಳಗಿನ ವಾಲಿಬಾಲ್ ಪಂಧ್ಯಾವಳಿ ದ್ವಿತೀಯ ಸ್ಥಾನ ) ಅವರನ್ನು ಗೌರವಿಸ ಲಾಯಿತು. ಪಟ್ಟಣದ ಹಿರಿಯ ನಾಗರಿಕರು, ಪುರಸಭೆಯ ಸದಸ್ಯರು, ಸಿಬ್ಬಂದಿ, ವಿವಿಧ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿ ದ್ದರು. ಪುರಸಭೆಯ ವ್ಯವಸ್ಥಾಪಕ ಎಸ್‌.ವಿ ಅಸ್ಕಿ ಸ್ವಾಗತಿಸಿದರು. ವಿಶೇಷ ತಹಶೀಲ್ದಾರ್ ಕಚೇರಿಯ ಗ್ರಾಮ ಲೆಕ್ಕಾಧಿಕಾರಿ  ಶಿವಾನಂದ ಅಂಗಡಿ ನಿರೂಪಿಸಿದರು.

ವಿವಿಧೆಡೆ ಧ್ವಜಾರೋಹಣ: ಸರ್ವಜ್ಞ ಪ್ರಾಥಮಿಕ ಹಾಗೂ ಪ್ರೌಢಶಾಲೆ: ಸಂಸ್ಥೆಯ ಮುಖ್ಯಸ್ಥ ಸಿದ್ಧನಗೌಡ ಮಂಗಳೂರು 68ನೇ ಗಣರಾಜ್ಯ ದಿನದ ನಿಮಿತ್ತ ಧ್ವಜಾರೋಹಣ ನೆರವೇರಿ ಸಿದರು. ಮುಖ್ಯ ಅತಿಥಿಗಳಾಗಿ ಎಸ್‌.ಎಸ್‌.ಶಿರಗುಪ್ಪ, ಸಂಗನಗೌಡ ಅಸ್ಕಿ(ಹಿರೂರ), ಶ್ರೀಶೈಲ ಬಿರಾದಾರ, ಅಂಬಾಜಿ ಘೋರ್ಪಡೆ, ಸುಜಾತಾ ಮಂಗಳೂರು ಸುರೇಖಾ ಸಾಲಂಕಿ ಇತರರಿದ್ದರು ಮಕ್ಕಳಿಂದ ವಿವಿಧ ಮನ ರಂಜನೆ ಕಾರ್ಯಕ್ರಮಗಳು ಜರುಗಿದವು.

ರಿಲಾಯನ್ಸ್ ಉರ್ದು ಪ್ರಾಥಮಿಕ   ಪ್ರೌಢಶಾಲೆ: ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ರಹಮಾನ ನಮಾಜಕಟ್ಟಿ 68ನೇ ಗಣ ರಾಜ್ಯ ದಿನದ ನಿಮಿತ್ತ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ರಾಜೆಸಾಬ ಒಂಟಿ, ರಾಹತಬಿ ಪಟ್ಟೇವಾಲೆ, ಸಿಕಂದರ ವಠಾರ ಇತರರಿದ್ದರು.

ಭಾವಸಾರ ಕ್ಷತ್ರೀಯ ಬ್ಯಾಂಕ್‌:  68ನೇ ಗಣರಾಜ್ಯ ದಿನದ ನಿಮಿತ್ತ ಧ್ವಜಾ ರೋಹಣ ಬ್ಯಾಂಕಿನ ಅಧ್ಯಕ್ಷ ವಿಜಯ ಧರ್ಮಣ್ಣ ದರ್ಜಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ವ್ಯವಸ್ಥಾಪಕರಾದ ಪರಶುರಾಮ ತೇಲಕರ, ಹಾಗೂ ನಿರ್ದೇಶಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT