ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಗಳಿಗೆ ಅದ್ಧೂರಿ ಸ್ವಾಗತ

ಅಟ್ಯಾ-ಪಟ್ಯಾ ಕ್ರೀಡೆಯಲ್ಲಿ ಸಾಧನೆ
Last Updated 28 ಜನವರಿ 2017, 8:42 IST
ಅಕ್ಷರ ಗಾತ್ರ

ನರೇಗಲ್ಲ(ರೋಣ): ಜ. 21 ರಿಂದ 23 ವರೆಗೆ ನೆರೆಯ ಭೂತಾನ ದೇಶದಲ್ಲಿ ನಡೆದ ಅಂತರರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ದೇಶದ ಪರ ಪ್ರತಿನಿಧಿಸಿ ಸಾಧನೆ ತೋರಿದ ಕುವರಿಯರಿಗೆ ಪಟ್ಟಣದಲ್ಲಿ ಶುಕ್ರವಾರ ಹೂವು ಗುಚ್ಚ ನೀಡಿ ಸಿಹಿ ಹಂಚಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಅಂತರರಾಷ್ಟ್ರೀಯ ಜೂನಿಯರ್ ಅಟ್ಯಾ-ಪಟ್ಯಾ ಕ್ರೀಡೆಯ ಫೈನಲ್  ಪಂದ್ಯದಲ್ಲಿ ಭಾರತ ಮತ್ತು ಭೂತಾನ್ ದೇಶದ ವಿರುದ್ಧ 4-0 ಸೆಟ್‌ ಗಳಿಂದ ಜಯ ಸಾಧಿಸಿ ವಿಜಯದ ಮಾಲೆ ಧರಿಸಿದರು.

ವಿಜಯಿ ತಂಡದಲ್ಲಿ ಭಾಗವಹಿಸಿದ ನರೇಗಲ್ ಪಟ್ಟಣದ ಪ್ರತಿಭೆಗಳಾದ ವರ್ಷ ಉಮೇಶ ಅವರೆಡ್ಡಿ, ನೇತ್ರಾವತಿ ರೋಣದ, ಪುಜಾ ಗಾಳಿ ಬಾಲಕಿಯ ಸಾಧನೆಯನ್ನು ಮೆಚ್ಚಿ ಪಟ್ಟಣದಲ್ಲಿನ   ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರು, ಕ್ರೀಡಾ ಸಂಘ ಸಂಸ್ಥೆಗಳು ವಿಜಯೋತ್ಸವ ಆಚರಿಸಿದರು.

ಭಾರತ ತಂಡದ ತರಬೇತುದಾರ ಸಮೀಪದ ಯಾವಗಲ್ಲ್ ಗ್ರಾಮದ ಬಾಲಕಿಯರ ಶಾಲೆಯ ದೈಹಿಕ  ಶಿಕ್ಷಕ ಕೃಷ್ಣ ನಡುಮನಿ ಅವರಿಗೆ ಹಾಗೂ ಪ್ರಾವಿಣ್ಯತೆ ಮೆರೆದ ಬಾಲಕಿಯರಿಗೆ ಸಂಭ್ರಮದಿಂದ ಸ್ವಾಗತಿಸಿ, ಅಭಿನಂಧನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT