ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಡಿನಾಡಲ್ಲಿ ಕನ್ನಡ ಅಸ್ತಿತ್ವಕ್ಕೆ ಧಕ್ಕೆ’

ಕನ್ನಡ ಸಾಹಿತ್ಯ ಪರಿಷತ್ತ್‌ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ
Last Updated 28 ಜನವರಿ 2017, 8:44 IST
ಅಕ್ಷರ ಗಾತ್ರ

ಶಿರಹಟ್ಟಿ: ಕನ್ನಡ ಭಾಷೆ ಶ್ರೀಮಂತ ಸಾಹಿತ್ಯವನ್ನು ಎಲ್ಲಡೆ ಪಸರಿಸುವ ಕಾರ್ಯ ಪ್ರತಿ ಕನ್ನಡಿಗರದ್ದಾಗಬೇಕು. ಸಾವಿರಾರು ವರ್ಷಗಳ ಭವ್ಯ ಇತಿಹಾ ಸವನ್ನು ಹೊಂದಿರುವ  ಕನ್ನಡ ಭಾಷೆ ಹಿರಿಮೆಯನ್ನು ಪ್ರಚುರಪಡಿಸುವ ಕೆಲಸ ಆಗಬೇಕಿದೆ ಎಂದು ಉಪನ್ಯಾಸಕ ಕೆ.ಎ. ಬಳಿಗೇರ ಹೇಳಿದರು.

ಶುಕ್ರವಾರ ಪಟ್ಟಣದ ಸಿಸಿಎನ್‌ ಪ್ರೌಡಶಾಲೆಯಲ್ಲಿ ಕಸಾಪ ಅಡಿ ಜರುಗಿದ ಸಿದ್ರಾಮಪ್ಪ ಅಕ್ಕಿ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಡಿನಾಡು ಸ್ಥಳಗಳಲ್ಲಿ ಕನ್ನಡ ಭಾಷೆಗೆ ಗಂಡಾಂತರ ಆಗಿದ್ದು, ಅದರ ಹೋರಾಟಕ್ಕೆ ಪ್ರತಿ ಕನ್ನಡಿಗರು ಸಿದ್ಧರಾಗಬೇಕು. ಚಿನ್ನದ, ಕವಿಗಳ, ಗಂಧದ ಹಾಗೂ ಕಾಫೀ ಕಣಜ ಕರ್ನಾಟಕದ ಉಳಿವಿಗೆ ನಾವೆಲ್ಲರೂ ಕಂಕಣಬದ್ದರಾಗಬೇಕಿದೆ.

ಕರ್ನಾಟಕ ಖನಿಜಗಳ ತವರೂರು. ಅದಕ್ಕೆ ನಿದರ್ಶ ನವಾಗಿ ಉತ್ತರ ಕರ್ನಾಟಕದ ಪಶ್ಚಿಮ ಘಟ್ಟ ಎಂದು ಪ್ರಖ್ಯಾತಿಯಾದ ಕಪ್ಪತಗುಡ್ಡದ ಸಂರಕ್ಷಣೆ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆಯಬೇಕು ಎಂದು ಸಲಹೆ ನೀಡಿದರು. 
  
ಪಟ್ಟಣ ಪಂಚಾಯ್ತಿ ನೂತನ ಅಧ್ಯಕ್ಷ ಬುಡನಶ್ಯಾ ಮಕಾಂದರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ,  ನಾಡಿನ ಒಡಲಲ್ಲಿ ಅಮೂ ಲ್ಯ ಬಂಡಾರವಿದೆ. ಅದರ ಸಂರಕ್ಷಣೆ ನಮ್ಮೆಲ್ಲರ ಪ್ರಮುಖ ಉದ್ದೇಶವಾಗಿರ ಬೇಕು ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಫ್‌.ಎಸ್‌. ಅಕ್ಕಿ, ಐ.ಸಿ ನೂರಶೆಟ್ಟರ, ಸಿಸಿಎನ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ, ಬಸವರಾಜ ಹೊಸೂರ, ಗುರುರಾಜ ಸರ್ಜಾಪೂರ, ನಿವೃತ್ತ ಶಿಕ್ಷಕ ಆರ್‌.ಬಿ. ಕಮತ, ಕೆ.ಎಫ್‌. ರಮಜಾನವರ, ಮಹದೇವ ಸ್ವಾಮಿ, ಎಂ.ಎ. ಮಕಾಂದರ್‌, ಎಚ್‌.ಆರ್‌. ಬೆನಹಾಳ, ನಜೀರ್‌ ಡಂಬಳ ಮತ್ತಿತರರು ಉಪಸ್ಥಿತರಿದ್ದರು.

ಸೇತುವೆ ಕೆಲಸ ಪೂರ್ಣಗೊಳಿಸಲು  ಆಗ್ರಹ
ಕಳೆದ ಒಂದು ದಶಕದಿಂದ ಆರಂಭಗೊಂಡಿರುವ ಪಟ್ಟಣದ ಕೆಳಗೇರಿ ಓಣಿಯಲ್ಲಿರುವ ರಸ್ತೆ ಸೇತುವೆಯನ್ನು ತಕ್ಷಣ ಪೂರ್ಣಗೊಳಿಸುವಂತೆ ಆಗ್ರಹಿಸಿ  ಕುಂದು ಕೊರತೆ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ  ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿದರು.

ಸೊರಟೂರ ಮಾರ್ಗವಾಗಿ ಜಿಲ್ಲಾ ಕೇಂದ್ರಸ್ಥಳವಾದ ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಸೇತುವೆ ನಿರ್ಮಾಣಗೊಂಡು ದಶಕ ಪೂರ್ಣಗೊಳ್ಳುತ್ತಾ ಬಂದರೂ ಇನ್ನು ಸಾರ್ವಜನಿಕರ ಅನುಕೂಲಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಸೇತುವೆ ಅಕ್ಕ ಪಕ್ಕ ರಸ್ತೆಯನ್ನು ನಿರ್ಮಾಣ ಮಾಡಿ ತಕ್ಷಣ ಪ್ರಯಾಣಿಕರಿಗೆ ಹಾಗೂ  ಪಟ್ಟಣದ ಜನತೆಗೆ ಅವಕಾಶ ಮಾಡಿಕೊಡಬೇಕು.

ಕುಂದುಕೊರತೆ ವೇದಿಕೆ ವತಿಯಿಂದ ಈ ಹಿಂದೆ ಹಲವಾರು ಬಾರಿ ಮನವಿ ಹಾಗೂ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ. ದೊಡ್ಡ ಮೊತ್ತದ ಹಣವನ್ನು ವ್ಯಯಿಸಿ ಸರ್ಕಾರ ಸೇತುವೆ ನಿರ್ಮಾಣ ಮಾಡಿದರೂ ಪ್ರಯೋಜನವಾಗಿಲ್ಲ. 

ನಿಗಧಿತ ಅವಧಿಯಲ್ಲಿ ಜನಪ್ರತಿನಿ ಧಿಗಳು ಹಾಗೂ ಲೋಕೋಪಯೋಗಿ ಇಲಾಖೆ ಮೇಲಾಧಿಕಾರಿಗಳು ಪರಿಹ ರಿಸದೇ ಇದ್ದಲ್ಲಿ ಕಾರ್ಯಾಲಯಕ್ಕೆ ಬೀಗ ಜಡಿದು ಸೇತುವೆ ಪಕ್ಕದಲ್ಲಿ ರಸ್ತಾರೋಖ ನಡೆಸುವದಾಗಿ ಕುಂದುಕೊರತೆ ಹೋರಾಟ ಸಮಿತಿ ಸದಸ್ಯರು ಎಚ್ಚರಿಕೆ ನೀಡಿದರು.

ವೇದಿಕೆ ಅಧ್ಯಕ್ಷ ಸಿದ್ರಾಮಯ್ಯ ಹಾವೇರಿಮಠ, ಅಕ್ಬರಸಾಬ ಯಾದಗಿರಿ, ಶ್ರೀನಿವಾಸ ಬಾರ್ಬರ, ಶ್ರೀನಿವಾಸ ಕಪಟಕರ, ಮುನ್ನಾ ಡಾಲಾಯತ, ಸಂಜೀವ ಹೆಸರಡ್ಡಿ, ನಜೀರ ಡಂಬಳ, ಜಾಕೀರ ಕೋಳಿವಾಡ, ಇಂತಿಯಾಜ ಶಿಗ್ಲಿ, ಬಿ.ಎಸ್‌. ಸಂಗಪ್ಪಶೆಟ್ಟರ, ಮಲ್ಲೇಶ ಲಮಾಣಿ, ಮಕಾಂದರ್‌ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT