ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್, ಸಿಬ್ಬಂದಿ ಮೇಲೆ ಹಲ್ಲೆ

ಮುಂಡರಗಿ ತಾಲ್ಲೂಕು ಜ್ಯಾಲವಾಡಿ ಗ್ರಾಮದಲ್ಲಿ ನಡೆದ ಘಟನೆ
Last Updated 28 ಜನವರಿ 2017, 8:46 IST
ಅಕ್ಷರ ಗಾತ್ರ

ಮುಂಡರಗಿ: ಕಾರಿನಲ್ಲಿ ಬಂದ ನಾಲ್ಕು ಜನ ಅಪರಿಚಿತರು ಮುಂಡರಗಿ ತಹಶೀಲ್ದಾರ ಕೆ.ಬಿ.ಕೋರಿಶೆಟ್ಟರ   ಹಾಗೂ ಅವರ ಮೂವರು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲ್ಲೂಕಿನ ಜ್ಯಾಲವಾಡಿಗೆ ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಕಂದಾಯ ನಿರೀಕ್ಷಕ ಎಂ.ಎ.ನದಾಫ್, ಗ್ರಾಮ ಲೆಕ್ಕಾಧಿಕಾರಿ ಹಾಗೂ ವಾಹನ ಚಾಲಕರು ಅಪರಿಚಿತರಿಂದ ಹಲ್ಲೆಗೊಳಗಾಗಿದ್ದಾರೆ ಎಂದು ತಹಶೀಲ್ದಾರ್‌ರು ತಿಳಿಸಿದ್ದಾರೆ.

ಅಕ್ರಮ ಮರಳು ಸಾಗಾಟವನ್ನು ನಿಯಂತ್ರಿಸುವ ಉದ್ದೇಶದಿಂದ ತಹಶೀ ಲ್ದಾರ್‌  ಕೆ.ಬಿ. ಕೋರಿಶೆಟ್ಟರ ಹಾಗೂ ಅವರ ಸಿಬ್ಬಂದಿಯವರು ಲೋಕೋಪ ಯೋಗಿ ಇಲಾಖೆಯ ವಾಹನವನ್ನು ತಗೆದುಕೊಂಡು ಬುಧವಾರ ರಾತ್ರಿ 11.30ಗಂಟೆಗೆ ತಾಲ್ಲೂಕಿನ ಬಾಗೇವಾಡಿ ರಸ್ತೆ ಮಾರ್ಗವಾಗಿ ತೆರಳಿದ್ದಾರೆ. ಜ್ಯಾಲವಾಡಿಗೆ ಗ್ರಾಮದ ಕ್ರಾಸ್ ಬಳಿ ಅಪರಿಚಿತ ಕಾರೊಂದು ತಹಶೀಲ್ದಾರರ ವಾಹನವನ್ನು ತುಂಬಾ ದೂರದವರೆಗೆ ಹಿಂಬಾಲಿಸಿದೆ.

ಸಂಶಯಗೊಂಡ ತಹಶೀಲ್ದಾರ ಅವರು ಜ್ಯಾಲವಾಡಿಗೆ ಗ್ರಾಮದ ಕಿರು ರಸ್ತೆಯಲ್ಲಿ ತಮ್ಮ ವಾಹನವನ್ನು ನಿಲ್ಲಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಕಾರಿನಿಂದ ಇಳಿದು ತಹಶಿಲ್ದಾರ್ ಅವರ ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ.

ಅನಿರೀಕ್ಷಿತ ಘಟನೆಯಿಂದ ತಬ್ಬಿಬ್ಬಾದ ತಹಶೀಲ್ದಾರ್‌ ಅವರ ವಾಹನದಲ್ಲಿದ್ದ ಇತರರು ಪ್ರತಿಯಾಗಿ ಅಪರಿಚಿತರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕಾರಿನಿಂದ ಬಂದಿದ್ದ ಇಬ್ಬರು ಅಪರಿಚಿತರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತದೆ.

ಕೈಗೆ ಸಿಕ್ಕಿದ್ದ ಇಬ್ಬರು ಅಪರಿಚಿತರನ್ನು ತಹಶೀಲ್ದಾರ್‌ರು ತಮ್ಮ ವಾಹನದಲ್ಲಿ ಕುಳ್ಳಿರಿಸಿ ಅವರ ಕಾರನ್ನು ತಗೆದು ಕೊಂಡು ಪರಾರಿಯಾದ ಇನ್ನಿಬ್ಬರು ಅಪರಿಚಿತರನ್ನು ಹಿಂಬಾಲಿಸಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡು ತಹಶೀಲ್ದಾರ್‌ರ ವಾಹನದಲ್ಲಿದ್ದ ಇಬ್ಬರು ಅಪರಿಚಿತರು ತಹಶೀಲ್ದಾರ್‌ ವಾಹನ ಚಾಲಕನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಹಲ್ಲೆ ಮಾಡಲು ಯತ್ನಿಸಿದ ನಾಲ್ಕೂ ಜನರು ಪರಾರಿಯಾಗಿದ್ದರಿಂದ ತಹಶೀ ಲ್ದಾರ್‌ರು ಅಪರಿಚಿತರ ಕಾರನ್ನು ವಶಪಡಿಸಿಕೊಂಡು ಮುಂಡರಗಿಗೆ ಆಗಮಿಸಿದ್ದಾರೆ. ಮುಂಡರಗಿಗೆ ಬಂದ ತಕ್ಷಣ ತಹಶೀಲ್ದಾರರು ಸಿಪಿಐ ಅವರಿಗೆ ಈ ಕುರಿತು ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.

’ಜ.25ರಂದು ರಾತ್ರಿ ಘಟನೆ ನಡೆದಿದ್ದು, ಜ.26ರಂದು ಇಡೀ ದಿವಸ ಗಣರಾಜ್ಯೋತ್ಸವದ ಕೆಲಸ ಕಾರ್ಯ ಗಳಲ್ಲಿ ಬಿಡುವಿಲ್ಲದಂತಾಗಿತ್ತು. ಆದ್ದರಿಂದ ಅಂದು ಈ ಕುರಿತು ಲಿಖಿತವಾಗಿ ದೂರು ನೀಡಲಿಲ್ಲ.

ಜ.27ರಂದು ಮಧ್ಯಾಹ್ನ ಉಪ ವಿಭಾಗಾಧಿಕಾರಿಗಳು ಈ ಕುರಿತು ಚರ್ಚಿಸಲು ಸಭೆ ಕರೆದಿದ್ದು, ಈ ಕುರಿತಂತೆ ಅವರೊಂದಿಗೆ ಚರ್ಚಿಸಿ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ ಕೆ.ಬಿ.ಕೋರಿಶೆಟ್ಟರ ತಿಳಿಸಿದರು.

ಜಿಲ್ಲಾಸ್ಪತ್ರೆಗೆ ದಾಖಲಾದ ಅಪರಿಚಿತರು?: ಜ್ಯಾಲವಾಡಿಗೆ ಗ್ರಾಮದಲ್ಲಿ ಮುಂಡರಗಿ ತಹಶೀಲ್ದಾರ್‌ ಹಾಗೂ ಅವರ ಸಿಬ್ಬಂದಿಯು ನಮ್ಮ ಮೇಲೆ ವಿನಾಕಾರಣ ಹಲ್ಲೆ ಮಾಡಿದ್ದಾರೆ ಎಂದು ಇಬ್ಬರು ಅಪರಿಚಿತರು ಗುರುವಾರ ಸಂಜೆ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT