ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರುಗುಪ್ಪ ಅಭಿವೃದ್ಧಿಗೆ ₹ 25 ಕೋಟಿ

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ನಾಗರಾಜ ಮಾಹಿತಿ
Last Updated 28 ಜನವರಿ 2017, 10:45 IST
ಅಕ್ಷರ ಗಾತ್ರ

ಸಿರುಗುಪ್ಪ: ಇಲ್ಲಿನ ನಗರಸಭೆಗೆ  ₹ 25 ಕೋಟಿ ವಿಶೇಷ ಅನುದಾನವನ್ನು  ಸರ್ಕಾರ ಮಂಜೂರು ಮಾಡಿದ್ದು ನಗ ರದ ಅಭಿವೃದ್ಧಿಗೆ ಅನೇಕ ಯೋಜನೆ ಗಳನ್ನು ರೂಪಿಸಲಾಗುವುದು ಎಂದು ಶಾಸಕ ಬಿ.ಎಂ. ನಾಗರಾಜ ಹೇಳಿದರು. ಇಲ್ಲಿಯ ಪ್ರೌಢಶಾಲಾ ಮೈದಾನದಲ್ಲಿ ಗುರುವಾರ ನಡೆದ 68ನೇ ಗಣರಾಜ್ಯ ದಿನದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ನಗರಕ್ಕೆ ಕುಡಿಯುವ ನೀರಿನ ಕೆರೆ ನಿರ್ಮಾಣದ ಭೂಮಿಪೂಜೆಯನ್ನು ಮುಖ್ಯಮಂತ್ರಿಗಳಿಂದ ನೆರವೇರಿಸಲಾ ಗಿದೆ. ನಗರಸಭೆವತಿಯಿಂದ ಬಡವರಿಗೆ 650 ನಿವೇಶನ ವಿತರಿಸಲಾಗುವುದು, 970 ಅಡಿಗೆ ಅನಿಲ ಸಂಪರ್ಕಗಳನ್ನು ನೀಡಲಾಗಿದೆ, 250 ವೈಯಕ್ತಿಕ ಶೌಚಾ ಲಯ ನಿರ್ಮಾಣಕ್ಕೆ ಸಹಾಯಧನ ಮತ್ತು ತಾಲ್ಲೂಕಿನಾದ್ಯಾಂತ 9 ಸಾವಿರ ವಸತಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ತಹಶೀಲ್ದಾರ್‌ ಎಂ.ಸುನಿತಾ ಧ್ವಜಾ ರೋಹಣ ನೆರವೇರಿಸಿ ಮಾತನಾಡಿದರು. 

ರಾಷ್ಟ್ರಮಟ್ಟದ ಥ್ರೋಬಾಲ್‌ ಟೂರ್ನಿ ಯಲ್ಲಿ ಭಾಗವಹಿಸಿದ ಬಿ.ಇ.ಹನು ಮಂತಮ್ಮ ಕಾಲೇಜಿನ ಕ್ರೀಡಾಪಟುಗ ಳಾದ ಗೀತಾಂಜಲಿ, ಸೌಮ್ಯಾ, ಪ್ರಕಾಶ್‌, ಎಸ್‌.ಆರ್‌.ಪ್ರಿಯಾಂಕ, ರಾಜ್ಯಮಟ್ಟದಲ್ಲಿ ಚಕ್ರ ಎಸೆತ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ವಿಜಯಮೇರಿ ಶಾಲೆಯ ಗಣೇಶ್‌ ಮತ್ತು ರಾಷ್ಟ್ರಮಟ್ಟದ ಪೆಂಟಾಥ್ಲಾನ್‌ ಕ್ರೀಡೆಯಲ್ಲಿ ಪಾಲ್ಗೊಂಡ ಶಾಂತಿನಿಕೇತನ ಶಾಲೆಯ ಎಸ್‌.ಲಸುಮಯ್ಯ, ರಾಜ್ಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಜಾವಲಿನ್‌ ಕ್ರೀಡೆಯಲ್ಲಿ ಮೂರನೇ ಸ್ಥಾನ ಪಡೆದ ಶಾಂತಿನಿಕೇತನ ಶಾಲೆಯ ಎನ್‌. ಕಲೀಲ್‌ ಹೈದರ್‌ ಹಾಗೂ ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಿದ ತಹಶೀಲ್ದಾರ್‌ ಎಂ.ಸುನಿತಾ, ಉಪತಹಶೀಲ್ದಾರ್‌ಗಳಾದ ಆನಂದ್‌ಮೋಹನ್‌, ಎಚ್‌.ಎಂ.ಶೇಷ ಗಿರಿ, ಕಂದಾಯ ನಿರೀಕ್ಷಕ ಖಾಲಿದ್‌ ಅವರನ್ನು ಗೌರವಿಸಲಾಯಿತು.

ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕಿನ ಉಪಾಧ್ಯಕ್ಷ ಟಿ.ಎಂ.ಚಂದ್ರಶೇಖರಯ್ಯ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಚೊಕ್ಕ ಬಸವನಗೌಡ, ನಗರಸಭೆ ಅಧ್ಯಕ್ಷೆ ಬಿ. ಪಾರಿಜಾತಮ್ಮ ಮುತ್ತಾಲಯ್ಯಶೆಟ್ಟಿ, ಉಪಾ ಧ್ಯಕ್ಷ ಮಲ್ಲಿಕಾರ್ಜುನ, ಪೌರಾಯುಕ್ತ ಮರಿಲಿಂಗಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿನಾಗೇಶಪ್ಪ, ಇಓ ಶ್ರೀನಿ ವಾಸ್‌, ಕೆ.ವೆಂಕಟರಾಮರೆಡ್ಡಿ, ಬಿಇಓ ಶ್ರೀನಿವಾಸಮೂರ್ತಿ, ಈರಣ್ಣ, ವಿಜಯ ರಂಗಾ ರೆಡ್ಡಿ, ಎಂ.ಪಂಪಾಪತಿ ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT