ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆಶಯ ಈಡೇರಿಸಲು ಸಲಹೆ

ಶಾಲಾ, ಕಾಲೇಜು, ಕಚೇರಿಗಳಲ್ಲಿ ವಿಜೃಂಭಣೆಯ ಗಣರಾಜ್ಯೋತ್ಸವ; ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಭ್ರಮಿಸಿದ ಮಕ್ಕಳು
Last Updated 28 ಜನವರಿ 2017, 10:46 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ವಿವಿಧ ಸಂಘ, ಸಂಸ್ಥೆ ಗಳು, ಶಾಲೆ – ಕಾಲೇಜುಗಳು, ಸರ್ಕಾರಿ ಇಲಾಖೆಗಳು ಹಾಗೂ ರಾಜಕೀಯ ಪಕ್ಷಗಳ ಕಚೇರಿಯಲ್ಲಿ ಗುರುವಾರ 68ನೇ ಗಣರಾಜ್ಯೋತ್ಸವ ದಿನವನ್ನು ಸಡಗರ ದಿಂದ ಆಚರಿಸಲಾಯಿತು.

ಪ್ರಗತಿ ಸೇವಾ ಟ್ರಸ್ಟ್‌: ಗಣರಾಜ್ಯ ದಿನದ ಅಂಗವಾಗಿ ಇಲ್ಲಿನ ರಾಮಯ್ಯ ಕಾಲೊನಿ ಯಲ್ಲಿ ಸಸಿ ನೆಡುವ ಅಭಿಯಾನಕ್ಕೆ ಮುಖಂಡ ಜಿ. ಸೋಮಶೇಖರರೆಡ್ಡಿ ಚಾಲನೆ ನೀಡಿದರು. ಪಾಲಿಕೆ ಸದಸ್ಯ ಶ್ರೀನಿ ವಾಸ ಮೋತ್ಕರ್, ಟ್ರಸ್ಟ್‌ನ ಅಧ್ಯಕ್ಷ ಟಿ.ಎಸ್‌. ಸುರೇಶಕುಮಾರ್, ಮುಖಂಡ ರಾದ ಎಚ್‌.ಹನುಮಂತಪ್ಪ, ನಾಗರಾಜ, ಸತ್ಯನಾರಾಯಣ, ಸೂರಿ, ರಾಮು, ಜಾಫರ್‌ ಉಲ್ಲಾ ಇದ್ದರು.

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ: ಸಂಘದ ಕಚೇರಿಯ ಆವರಣದಲ್ಲಿ ಅಧ್ಯಕ್ಷ ಕೆ.ಬಸವನಗೌಡ ಧ್ವಜರೋಹಣ ನೆರವೇರಿಸಿದರು. ಪದಾಧಿಕಾರಿಗಳು ಹಾಜರಿದ್ದರು.

ವುಂಕಿ ಮರಿಸಿದ್ಧಮ್ಮ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ: ಇಲ್ಲಿನ ಬಸವೇಶ್ವರ ನಗರದಲ್ಲಿರುವ ಶಾಲೆಯ ಆವರಣದಲ್ಲಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಬಾಣಾಪುರ ನಾಗ ಭೂಷಣಗೌಡ ಧ್ವಜಾರೋಹಣ ನೆರವೇ ರಿಸಿದರು. ಸದಸ್ಯ ಸಿರಿವಾರದ ವೀರಭ ದ್ರಪ್ಪ, ಸಿಆರ್‌ಪಿ ಮೃತ್ಯುಂಜಯ, ಶಾಲೆಯ ಮುಖ್ಯಶಿಕ್ಷಕ ಬಿ. ಶಿವಕುಮಾರಗೌಡ, ಮುಖಂಡರಾದ ಆರ್‌.ಎಚ್.ಎಂ. ಚನ್ನ ಬಸಯ್ಯ, ವಿ.ಎಂ.ರಾಜಶೇಖರ ಇದ್ದರು.

ಸರಳಾದೇವಿ ಸತೀಶ್ಚಂದ್ರ ಅಗರವಾಲ ಸರ್ಕಾರಿ ಪ್ರಥಮದರ್ಜೆ ಸ್ವಾಯತ್ತ ಕಾಲೇಜು: ಕಾಲೇಜಿನ ಆವರಣದಲ್ಲಿ ಪ್ರಾಚಾರ್ಯ ಪ್ರೊ.ಯು.ಅಬ್ದುಲ್ ಮುತಾ ಲಿಬ್ ಧ್ವಜಾರೋಹಣ ನೆರವೇರಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಟಿ.ಪದ್ಮಾ, ಜಿ.ಆನಂದಕುಮಾರ್, ಮಹ ಮ್ಮದ ಗೌಸ್‌, ಕೆ.ಬಿ.ಸಂಜೀವ ಪ್ರಸಾದ್, ಪ್ರಾಧ್ಯಾಪಕರಾದ ಆರ್.ಎಂ.ಶ್ರೀದೇವಿ, ಸಿ.ಕಾವಲ್ಲಯ್ಯ ಹಾಜರಿದ್ದರು.

ಶ್ರೀ ಚೈತನ್ಯ ಟೆಕ್ನೋ ಶಾಲೆ: ನಗರದ ಶಾಲೆಯ ಆವರಣದಲ್ಲಿ ಎನ್‌ಸಿಸಿ ಅಧಿ ಕಾರಿ ಅನಿಲಕುಮಾರ್‌ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಿ.ಎಸ್‌.ರಾವ್‌, ನಿರ್ದೇಶಕ ರಾದ ಸೀಮಾ, ವೀರ ಮಾಚನೇನಿ ಚರಣ್ ಇದ್ದರು.

ಮಹಾನಗರ ಪಾಲಿಕೆ: ನಗರದ ಪಾಲಿಕೆ ಕಚೇರಿಯ ಆವರಣದಲ್ಲಿ ಮೇಯರ್ ಜಿ.ಜಯಲಲಿತಾ ಧ್ವಜಾರೋಹಣ ನೆರ ವೇರಿಸಿದರು. ಪಾಲಿಕೆ ಸದಸ್ಯರಾದ ಬಿ.ಕೆ. ಕೆರಕೋಡಪ್ಪ, ನಾಗರಾಜ, ವೆಂಕಟ ರಮಣ, ವಿ.ಎಸ್. ಮರಿದೇವಯ್ಯ, ಆಯುಕ್ತ ಮಂಜುನಾಥ ಕೆ.ನಲವಡಿ ಇತರರು ಇದ್ದರು.

ಸರ್ಕಾರಿ ತೆಲುಗು ಕಿರಿಯ ಪ್ರಾಥಮಿಕ ಶಾಲೆ: ಇಲ್ಲಿನ ಶ್ರೀರಾಮನಗರ ಪ್ರದೇಶ ದಲ್ಲಿರುವ ತೆಲುಗು ಶಾಲೆಯ ಆವರಣ ದಲ್ಲಿ ಮುಖ್ಯಶಿಕ್ಷಕಿ ಪಿ.ಸುಬ್ಬಲಕ್ಷ್ಮಿ ಧ್ವಜಾ ರೋಹಣ ನೆರವೇರಿಸಿದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಲಕ್ಷ್ಮಿ, ಶಿಕ್ಷಕಿ ಯರಾದ ಶಶಿಕಲಾ ದೇವಿ, ಬಿ.ತುಳಸಮ್ಮ ಹಾಜರಿದ್ದರು.

ಜೆಡಿಎಸ್‌ ಜಿಲ್ಲಾ ಘಟಕ: ನಗರದ ಮೀನಾಕ್ಷಿ ವೃತ್ತದ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಕೋರ್ ಕಮಿಟಿ ಸದಸ್ಯ ಮೀನಳ್ಳಿ ಡಿ.ತಾಯಣ್ಣ ಧ್ವಜಾರೋಹಣ ನೆರವೇರಿಸಿದರು.ಮುಖಂಡರಾದ ಪಿ.ಎಸ್. ಸೋಮಲಿಂಗನ ಗೌಡ, ಕಪ್ಪ ಗಲ್ ರಸೂಲ್‌ ಸಾಬ್, ಎಚ್.ಎಂ. ಕಿರಣ ಕುಮಾರ್, ವೈ.ಗೋಪಾಲ, ಪಿ.ಬಂಡೇ ಗೌಡ, ಕೆ.ಶ್ರೀನಿವಾಸರಾವ್‌, ಎಸ್.ಎಂ. ರಫೀಕ, ಮಲ್ಲಾರೆಡ್ಡಿ, ಕೆ.ನಾಗರಾಜ, ಎಂ.ಡಿ.ರಫೀಕ್, ಯಲ್ಲನಗೌಡ, ಈಶ್ವರ ಗೌಡ, ವೈ.ಗೌಸಿಯಾ ಬೀ ಇದ್ದರು.

ಜಿಲ್ಲಾ ಕಾಂಗ್ರೆಸ್ ಸಮಿತಿ: ನಗರದ ಡಾ.ರಾಜ್ ರಸ್ತೆಯಲ್ಲಿರುವ ಪಕ್ಷದ ಕಚೇರಿ ಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯಲು ಧ್ವಜಾ ರೋಹಣ ನೆರವೇರಿಸಿದರು. ಪಾಲಿಕೆ ಸದಸ್ಯ ಜಿ.ವೆಂಕಟರಮಣ, ಮುಖಂಡ ರಾದ ಅಸುಂಡಿ ವನ್ನೂರಪ್ಪ, ಅಸುಂಡಿ ನಾಗರಾಜಗೌಡಮ, ಟಿ.ಪದ್ಮಾ, ಗೂಳಪ್ಪ ಹಾಜರಿದ್ದರು.

ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜು: ನಗರದ ಡಾ.ರಾಜ್‌ ರಸ್ತೆ ಯಲ್ಲಿರುವ ಕಾಲೇಜಿನ ಆವರಣದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್‌.ಜೆ.ವಿ. ಮಹಿಪಾಲ ಧ್ವಜಾರೋಹಣ ನೆರವೇರಿಸಿ ದರು. ಮುಖ್ಯಶಿಕ್ಷಕ ಜೆ.ಅನಿಲಕುಮಾರ್‌, ಸಹಾಯಕ ಮುಖ್ಯಶಿಕ್ಷಕ ನಾಗರಾಜ ಪಾಟೀಲ್, ಕಿಡ್ಸ್ ಅಕಾಡಮಿ ಸಮನ್ವಯ ಅಧಿಕಾರಿ ಮೋನಾ ಓಬಿರಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT