ಗುರುವಾರ, 25 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕರಿಗೆ ನೀಡುವ ಮದ್ಯವನ್ನೂ ಹೊರಗಿನವರಿಗೆ ಮಾರಲಾಗುತ್ತಿದೆ!

Last Updated 28 ಜನವರಿ 2017, 20:23 IST
ಅಕ್ಷರ ಗಾತ್ರ
ADVERTISEMENT

ಗಾಂಧೀಧಾಮ್: ಗಡಿ ರಕ್ಷಣಾ ಪಡೆಯ ಯೋಧರಿಗಾಗಿ ನೀಡಲಾಗುವ ಮದ್ಯವನ್ನೂ ಹೊರಗಿನವರಿಗೆ ಮಾರುವ ದಂಧೆ ಸೇನೆಯಲ್ಲಿ ನಡೆಯುತ್ತದೆ ಎಂದು ಬಿಎಸ್‍ಎಫ್ ನೌಕರರೊಬ್ಬರು ಆರೋಪಿಸಿದ್ದಾರೆ.

ಬಿಎಸ್‍ಎಫ್‍ನಲ್ಲಿ ಗುಮಾಸ್ತನಾಗಿರುವ ನವರತನ್ ಚೌಧರಿ ಎಂಬವರು ಈ ಆರೋಪ ಮಾಡಿದ್ದು, ಫೇಸ್‍ಬುಕ್‍ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ.

ರಾಜಸ್ತಾನದ ಬಿಕಾನೇರ್ ನಿವಾಸಿಯಾಗಿರುವ ಚೌಧರಿ, ಗುಜರಾತಿನ ಕಚ್ ಜಿಲ್ಲೆಯಲ್ಲಿ ಬಿಎಸ್‍ಎಫ್ 150 ಬೆಟಾಲಿಯನ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚೌಧರಿ ಅವರು ಜನವರಿ 26ರಂದು ಫೇಸ್‌ಬುಕ್‍ನಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದು ಈ ವಿಡಿಯೋ ಈಗ ವೈರಲ್ ಆಗಿದೆ.

ವಿಡಿಯೊದಲ್ಲಿ ಏನಿದೆ?

ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಇದೆ. ಆದರೆ ನಾವು (ಬಿಎಸ್‌ಎಫ್ ಯೋಧರು) ಒಳ್ಳೆಯ ಆಹಾರ ನೀಡಿ ಎಂದೂ ಕೇಳುವಂತಿಲ್ಲ. ಒಂದು ವೇಳೆ ಈ ಬಗ್ಗೆ ಯಾರಾದರೂ ದೂರು ನೀಡಿದರೆ, ಅವರು ದೊಡ್ಡ ತಪ್ಪು ಮಾಡಿದ್ದಾರೆ ಅನ್ನುವ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತದೆ. ನಾವು ಉತ್ತಮ ಆಹಾರವನ್ನಷ್ಟೇ ಕೇಳುತ್ತಿದ್ದೇವೆ.

ಎಲ್ಲರೂ ಭ್ರಷ್ಟಾಚಾರ ತೊಲಗಲಿ ಎಂದು ಬಯಸುತ್ತಿದ್ದಾರೆ. ಆದರೆ ಯಾರೊಬ್ಬರೂ ಅದನ್ನು ನಿಲ್ಲಿಸುವ ಯತ್ನ ಮಾಡಲು ಮುಂದೆ ಬರುವುದೇ ಇಲ್ಲ. ಪ್ರತೀ ಬಾರಿ ವಿಶಲ್ ಬ್ಲೋವರ್  ಮಾತ್ರ ಶಿಕ್ಷೆಗೊಳಪಡುತ್ತಾನೆ. ಎಲ್ಲ ನಿಯಮಗಳೂ ಆತನ ಮೇಲೆಯೇ ಹೇರಲ್ಪಡುತ್ತದೆ. ಆದರೆ ಭ್ರಷ್ಟಾಚಾರ ಮಾಡಿದವರಿಗೆ ಶಿಕ್ಷೆಯೇ ಆಗುವುದಿಲ್ಲ ಎಂದು ಚೌಧರಿ ಹೇಳಿದ್ದಾರೆ.

ನಾನೊಬ್ಬ ಪ್ರಾಮಾಣಿಕ ವ್ಯಕ್ತಿ. ಏನೇ ತಪ್ಪುಗಳು ನನ್ನ ಕಣ್ಣಿಗೆ ಬಿದ್ದರೆ ನಾನದರ ಬಗ್ಗೆ ದೂರು ನೀಡುತ್ತೇನೆ. ಈ ಸಂದರ್ಭಗಳಲ್ಲಿ ನನ್ನನ್ನು ಹೊಸ ಸ್ಥಳಗಳಿಗೆ ಎತ್ತಂಗಡಿ ಮಾಡಲಾಗುತ್ತದೆ. ಆದರೆ ಅವರಿಗೆ ಯಾವತ್ತೂ ನನ್ನ ಸ್ಥೈರ್ಯಕ್ಕೆ ಕುಂದು ಉಂಟು ಮಾಡಲು ಸಾಧ್ಯವಾಗಲ್ಲ.

ಈಗ ಅವರು ಆಳ್ವಿಕೆಯ ಎಲ್ಲೆಯನ್ನು ಮೀರಿದ್ದಾರೆ. ಇಲ್ಲಿ (ಬಿಎಸ್‍ಎಫ್ ನಲ್ಲಿ) ಮುಲಾಜಿಲ್ಲದೆ ಭ್ರಷ್ಟಾಚಾರ ಮಾಡಬಹುದು. ಆದರೆ ಈ ಬಗ್ಗೆ ದೂರು ನೀಡಿದರೆ ನಾವೇ ದೊಡ್ಡ ತಪ್ಪು ಮಾಡಿದಂತಾಗುತ್ತದೆ.

ಯೋಧರ ಉಳಿತಾಯದ ದುಡ್ಡಿನಿಂದಲೇ ಮದ್ಯವನ್ನು ಖರೀದಿಸಲಾಗುತ್ತದೆ. ಇಲ್ಲಿ ನಮಗೆ ನೀಡುವ ಮದ್ಯವನ್ನು ಹೊರಗಿನವರಿಗೆ ಮಾರುತ್ತಾರೆ. ನಾಲ್ಕು ತಿಂಗಳ ಹಿಂದೆ ನಾನು ಈ ಬಗ್ಗೆ ದೂರು ದಾಖಲಿಸಿದ್ದೆ. ಆದರೆ ಈ ವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದಲೇ ನಾನು ಈ ರೀತಿ ದೇಶದ ಜನರ ಮುಂದೆ ಬರಲೇಬೇಕಾಯಿತು.

ನಾನು ಅಪ್‍ಲೋಡ್ ಮಾಡಿದ ಈ ವಿಡಿಯೊದಲ್ಲಿ ಹೊರಗಿನ ವ್ಯಕ್ತಿಯೊಬ್ಬರು ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗುತ್ತಿರುವುದನ್ನು ನೀವು ನೋಡಬಹುದು.

ನಾನು  ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ವಿಡಿಯೊವನ್ನು ಸಾಕ್ಷ್ಯವಾಗಿ ಪರಿಗಣಿಸಿ ಬಿಎಸ್‍ಎಫ್ ಏನಾದರೂ ಕ್ರಮ ತೆಗೆದುಕೊಳ್ಳುವುದೇ ಎಂದು ನೋಡಬೇಕು. ನಾನು  ಇನ್ನೊಂದಷ್ಟು ಸಾಕ್ಷ್ಯಗಳನ್ನು ನೀಡಬಲ್ಲೆ ಎಂದು ಚೌಧರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT