ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಪತ್ರ ಸ್ಪರ್ಧೆ 2017

Last Updated 28 ಜನವರಿ 2017, 19:30 IST
ಅಕ್ಷರ ಗಾತ್ರ

ಇಷ್ಟಪಾತ್ರರಿಗೆ ತನ್ನ ಹೃದಯವನ್ನೇ ಅರ್ಪಿಸಿದರೂ ಪ್ರೇಮಿಯ ಮನಸಿನಲ್ಲಿ ಹೇಳಲೇಬೇಕಾದ ಪಿಸುನುಡಿಯೊಂದು ಉಳಿದುಬಿಡುತ್ತದೆ. ಒಲವಿನ ಆ ಮಾತು ಪೂರ್ಣಗೊಳ್ಳುವುದು ಪ್ರೇಮಪತ್ರದಲ್ಲಿ. ಹೃದಯದ ಯಾವುದೋ ಕವಾಟದಲ್ಲಿ ಹುದುಗಿದ್ದ ಪ್ರೇಮದ ಮಾತು ಅಕ್ಷರಗಳ ರೂಪದಲ್ಲಿ ಜೀವತಾಳುತ್ತದೆ.

ಗ್ಯಾಜೆಟ್‌ಗಳ ಪ್ರಭಾವಳಿಯ ಕಾಲದಲ್ಲೂ ಏಕಾಂತದಲ್ಲಿ ಕೂತು ಮನಸ್ಸಿನ ಭಾವನೆಗಳನ್ನು ಪತ್ರದ ಮೂಲಕ ಅಭಿವ್ಯಕ್ತಿಸುವುದು ಅಪೂರ್ವ ಸುಖ ನೀಡುವ ಪ್ರಕ್ರಿಯೆ. ಪ್ರೇಮದ ಆ ವಿಶೇಷ ಅನುಭವಕ್ಕೆ ಒಳಗಾಗುವ ಅವಕಾಶವೊಂದನ್ನು ‘ಕಾಮನಬಿಲ್ಲು’ ಪ್ರೇಮಪತ್ರ ಸ್ಪರ್ಧೆ ಒದಗಿಸಿಕೊಡುತ್ತಿದೆ.

ಫೆಬ್ರುವರಿ 14ರ ‘ಪ್ರೇಮಿಗಳ ದಿನ’ ರಸವತ್ತಾಗಲಿ, ಅರ್ಥವತ್ತಾಗಲಿ ಎನ್ನುವುದು ‘ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆ’ಯ ಉದ್ದೇಶ. ಹದಿಹರೆಯದ ತರುಣ ತರುಣಿಯರ ಜೊತೆಗೆ ಪ್ರೇಮದ ಸವಿಯುಂಡ ಪ್ರಬುದ್ಧರೂ ಪ್ರೇಮಪತ್ರ ಬರೆಯಲಿಕ್ಕೆ ಅವಕಾಶವಿದೆ.

ಭಾವುಕತೆ, ತುಂಟತನ, ತಿಳಿವಳಿಕೆ, ರಸಿಕತೆ, ಕಸಿವಿಸಿ, ಸಂಕೋಚ – ನಿಮ್ಮ ಇಷ್ಟದ ಹುಡುಗ/ಹುಡುಗಿಗೆ ಪ್ರೇಮಪತ್ರದ ಮೂಲಕ ಏನೆಲ್ಲವನ್ನು ದಾಟಿಸಬಹುದು! ಪತ್ರ ಬರೆಯಲು ಇನ್ನೇನು ನೆಪ ಬೇಕು?

*ಮೊದಲನೇ ಬಹುಮಾನ  ₹ 3000
*ಎರಡನೇ ಬಹುಮಾನ ₹ 2000
*ಮೂರನೇ ಬಹುಮಾನ ₹ 1000

ಪ್ರೇಮಪತ್ರ 500 ಪದಗಳನ್ನು ಮೀರಬಾರದು. ಪತ್ರದ ಜೊತೆಗೆ ನಿಮ್ಮ ಹೆಸರು, ಅಂಚೆ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಫೋಟೊ ಇರುವುದು ಕಡ್ಡಾಯ. ಪತ್ರಗಳು ಜನವರಿ 30ಕ್ಕೆ ಮೊದಲು ಪ್ರಜಾವಾಣಿ ಕಚೇರಿ ತಲುಪಬೇಕು. ಈ ಪತ್ರಗಳನ್ನು ಯಾವುದೇ ರೀತಿಯಲ್ಲಿ ಬಳಸಿಕೊಳ್ಳುವ ಹಕ್ಕು ‘ಪ್ರಜಾವಾಣಿ’ಗೆ ಇರುತ್ತದೆ.

ಇ–ಮೇಲ್‌ನಲ್ಲಿ ಕಳುಹಿಸುವ ಪತ್ರಗಳು ಯುನಿಕೋಡ್ ಅಥವಾ ನುಡಿ/ಬರಹ ತಂತ್ರಾಂಶದಲ್ಲಿರಲಿ. ಕಳುಹಿಸಬೇಕಾದ ವಿಳಾಸ: ಪ್ರೇಮಪತ್ರ ಸ್ಪರ್ಧೆ, ‘ಕಾಮನಬಿಲ್ಲು’ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು-01. ಇ-ಮೇಲ್: premapathra@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT