ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಗಳಿಗೆ ಜಾನಪದವೇ ಮೂಲಬೇರು

ಹೂವಿನಹಡಗಲಿಯಲ್ಲಿ ತಾಲ್ಲೂಕು ಮಟ್ಟದ ಪ್ರಥಮ ಜಾನಪದ ಸಮ್ಮೇಳನ: ಅಧ್ಯಕ್ಷ ಹಾಲಯ್ಯ ಶಾಸ್ತ್ರಿ ಅಭಿಮತ
Last Updated 30 ಜನವರಿ 2017, 5:22 IST
ಅಕ್ಷರ ಗಾತ್ರ
ಹೂವಿನಹಡಗಲಿ: ‘ಎಲ್ಲ ಸಾಹಿತ್ಯ ಮತ್ತು ಕಲಾ ಪ್ರಕಾರಗಳಿಗೆ ಜಾನಪದವೇ ತಾಯಿಬೇರು. ಇಂತಹ ಜೀವಧಾತುವನ್ನು ಉಳಿಸಿ, ಬೆಳೆಸಿ ಸಂರಕ್ಷಿಸುವ ಹೊಣೆ ಗಾರಿಕೆ ಎಲ್ಲರ ಮೇಲಿದೆ’ ಎಂದು ಜಾನ ಪದ ಸಮ್ಮೇಳನ ಅಧ್ಯಕ್ಷ ಎ.ಎಂ. ಹಾಲಯ್ಯ ಶಾಸ್ತ್ರಿ ಹೇಳಿದರು.
 
ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕ ಜಿಪಿಜಿ ಕಾಲೇಜು ಆವರಣದಲ್ಲಿ ಭಾನುವಾರ ಹಮ್ಮಿ ಕೊಂಡಿದ್ದ ತಾಲ್ಲೂಕು ಮಟ್ಟದ ಪ್ರಥಮ ಜಾನಪದ ಸಮ್ಮೇಳನದಲ್ಲಿ ಅವರು ಆಶಯ ನುಡಿಗಳನ್ನು ಆಡಿದರು.
 
‘ಮಗು ಹುಟ್ಟಿದಾಗ ಜೋಗುಳ ಹಾಡಿನಿಂದಲೇ ಜಾನಪದ ಆರಂಭ ವಾಗುತ್ತದೆ. ಮನುಷ್ಯನ ಹಾದಿಯಿಂದ ಅಂತ್ಯದವರೆಗೂ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಜಾನಪದವು ಸಮುದ್ರ ದಷ್ಟು ಆಳ, ಆಕಾಶದಷ್ಟು ವಿಸ್ತಾರ ಹೊಂದಿದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದ್ವಾಂಸರು ಮತ್ತು ಕಲಾವಿ ದರ ಒಗ್ಗೂಡಿದಾಗ ಜಾನಪದ ಕ್ಷೇತ್ರ ಇನ್ನೂ ಹೆಚ್ಚು ಬೆಳಗುತ್ತದೆ’ ಎಂದರು.
 
ಜಾನಪದ ಕಲೆಗಳನ್ನು ಬೆಳೆಸಿದವರು ಬಹಳಷ್ಟಿದ್ದಾರೆ, ಆದರೆ ಕಲೆ ಉಳಿಸುವ ವರು ಬೇಕಾಗಿದ್ದಾರೆ. ಸುಶಿಕ್ಷಿತರು, ನೌಕರ ವರ್ಗದವರು, ಯುವಕರು ಹಿರಿಯ ಕಲಾವಿದರ ಸಂಪರ್ಕ ಬೆಳೆಸಿಕೊಂಡು ಜಾನಪದ ಕಲಾ ಪ್ರಕಾರಗಳಲ್ಲಿ ತೊಡಗಿಸಿ ಕೊಳ್ಳಬೇಕು. ಸರ್ಕಾರ, ಅಕಾಡೆಮಿಗಳು ಕಲಾವಿದರ ಮೂಲ ಅವಶ್ಯಕತೆಗಳನ್ನು ಪೂರೈಸಬೇಕು. ಮಾಸಾಶನ, ಔಷಧೋ ಪಚಾರ ನೆರವು, ಸಾರಿಗೆ ಭತ್ಯೆ, ನಿವೇಶನ ಸೌಲಭ್ಯ ಕಲ್ಪಿಸಿಕೊಡಬೇಕು ಎಂದರು.
 
ಸಾಹಿತಿ ಡಾ.ನಿಂಗು ಸೊಲಗಿ ಮಾತ ನಾಡಿ, ‘ಜಾನಪದ ವಿಶ್ವವಿದ್ಯಾಲಯಗಳು ಕಲಾವಿದರ ಮನೆಗೆ ಬರುವಂತಾದರೆ ಮಾತ್ರ ವಿವಿಗಳ ಆವರಣದಲ್ಲಿ ಕಲೆ ಅನಾವರಣಗೊಳ್ಳುತ್ತದೆ. ದೃಶ್ಯಕಾವ್ಯ, ನುಡಿ, ನಾದಗಳು ಉಳಿಯಬೇಕಾದರೆ ಜಾನಪದ ಕಲೆಗಳ ದಾಖಲೀಕಣ ನಡೆ ಯಬೇಕು. ಅಜ್ಜಿಯ ಹಾಡನ್ನು ದಾಖಲಿಸಿ ‘ಸಿರಿಗೌರಿ’ ಪುಸ್ತಕ ಹೊರ ತರುವ ಮೂಲಕ ಜಾನಪದ ಪರಿಷತ್ ಅಧ್ಯಕ್ಷ ಖಾದರ್‌ ಬಾಷಾ ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ಮಾಡಿದ್ದಾರೆ’ ಎಂದು ಪ್ರಶಂಸಿಸಿದರು.
 
ಜಿಲ್ಲಾ ಪಂಚಾಯ್ತಿ ಸದಸ್ಯ ಪಿ. ವಿಜಯಕುಮಾರ್ ‘ಸಿರಿಗೌರಿ’ ಪುಸ್ತಕ ಬಿಡುಗಡೆಗೊಳಿಸಿದರು. ಸಾಹಿತಿ ಮೇಟಿ ಕೊಟ್ರಪ್ಪ ‘ಜಾನಪದ ಮಲ್ಲಿಗೆ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
 
ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದರು. ತಹಶೀಲ್ದಾರ್ ರಾಘವೇಂದ್ರ ರಾವ್, ನಿವೃತ್ತ ಶಿಕ್ಷಣಾಧಿಕಾರಿ ಎಚ್.ಎಂ. ಬೆಟ್ಟಯ್ಯ, ಕೆ.ಎಂ.ವಾಮದೇವಯ್ಯ, ಕರಿವೀರನಗೌಡ ಪಾಟೀಲ, ವಾರದ ಗೌಸ್‌ ಮೊಹಿದ್ದೀನ್, ಸ್ವಾಗತ ಸಮಿತಿ ಅಧ್ಯಕ್ಷ ಎ.ಕೊಟ್ರಗೌಡ, ಜಾನಪದ ಪರಿಷತ್ ಅಧ್ಯಕ್ಷ ಎಲ್.ಖಾದರ್ ಬಾಷಾ ಇದ್ದರು. ಕುತಿಜಾಬಿ, ಹಯಾತಬೀ ಜಾನಪದ ಗೀತೆಗಳನ್ನು ಹಾಡಿದರು.
 
ಸಮ್ಮೇಳನ ಅಧ್ಯಕ್ಷರ ಭವ್ಯ ಮೆರವಣಿಗೆ: ಜಾನಪದ ಸಮ್ಮೇಳನ ಅಧ್ಯಕ್ಷ ಎ.ಎಂ. ಹಾಲಯ್ಯ ಶಾಸ್ತ್ರಿಗಳನ್ನು ಭವ್ಯ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಸಮಾಳ, ನಂದಿಕೋಲು ಮಂಗಳ ವಾದ್ಯ ಗಳು ಮೆರವಣಿಗೆಗೆ ಮೆರಗು ತಂದಿದ್ದವು. ಕೂಡ್ಲಿಗಿಯ ದುರುಗಮ್ಮ ತಂಡದವರ ಮಹಿಳಾ ಡೊಳ್ಳು ಕುಣಿತ, ಸ್ಥಳೀಯ ಕಲಾವಿದರ ಹಲಾಯಿ ಹೆಜ್ಜೆ ಮೇಳ, ಕೋಲಾಟ, ಹಲಗೆ ವಾದ್ಯ, ಗೊರವರ ಕುಣಿತ ಪ್ರದರ್ಶನ ನಡೆಯಿತು.
 
**
ಸಮ್ಮೇಳನಕ್ಕೆ ಗಣ್ಯರ ಗೈರು 
ಸಮ್ಮೇಳನದಲ್ಲಿ ಗಣ್ಯರ ಗೈರು ಹಾಜರಿ ಎದ್ದು ಕಂಡಿತು. ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಹಂಪಿ ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿ, ಜಾನಪದ ವಿಭಾಗದ ಮುಖ್ಯಸ್ಥ ಮಂಜುನಾಥ ಬೇವಿನಕಟ್ಟಿ. ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಟಿ.ತಿಮ್ಮೇಗೌಡ ಹಾಗೂ ಸ್ಥಳೀಯ ಜನಪ್ರತಿನಿಗಳು ಗೈರು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT