ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೋಟು ಅಮಾನ್ಯ ಕಾರ್ಯ ಯಶಸ್ವಿ’

Last Updated 30 ಜನವರಿ 2017, 5:27 IST
ಅಕ್ಷರ ಗಾತ್ರ

ನಾಲತವಾಡ: ‘ಅಧಿಕ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಕಾರ್ಯ ಯಶಸ್ವಿಯಾಗಿದೆ’ ಎಂದು ಬಿಜೆಪಿಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಪಾಟೀಲ ( ಕೂಚಬಾಳ) ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀ ವೀರೇಶ್ವರ ಕಲಾ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ನೋಟು ಬದಲು ದೇಶ ಮೊದಲು’ ಎಂಬ ರಾಷ್ಟ್ರ ಜಾಗೃತಿ ಕಾರ್ಯಕ್ರಮದಲ್ಲಿ  ಅವರು ‘ಆರ್ಥಿಕ ಪುನರುತ್ಥಾನದ ಕಡೆಗೆ ಭಾರತ’ ಎಂಬ ವಿಷಯ ಕುರಿತು ಮಾತನಾಡಿದರು.

ಗರಿಷ್ಠ ಮುಖಬೆಲೆ ನೋಟುಗಳ ರದ್ದತಿಯಿಂದ ತೆರಿಗೆ ಸಂಗ್ರಹ ಹೆಚ್ಚಳ ವಾಗಿದೆ. ಆರ್ಥಿಕ ಪ್ರಗತಿ ಸುಸ್ಥಿರವಾಗಿದೆ, ಜಮ್ಮು– ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹಗೊಂಡಿದೆ. ದೇಶದ ವಿವಿಧ ರಾಜ್ಯಗಳಾದ ಮಧ್ಯ ಪ್ರದೇಶ, ಜಾರ್ಖಂಡ್‌, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ನಕ್ಸಲರು ಶರಣಾಗುತ್ತಿದ್ದಾರೆ ಎಂದರು.

ಬಿಜೆಪಿಯ ಯುವ ಮೋರ್ಚಾದ ಮುದ್ದೇಬಿಹಾಳ ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ವಿಜಯಪುರ ನಗದುರಹಿತ ಆರ್ಥಿಕ ವ್ಯವಹಾರ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಪ್ರಾರಂಭದಲ್ಲಿ ಜಮ್ಮು ಕಾಶ್ಮೀರದಲ್ಲಿ ಹಿಮಪಾತದಿಂದ ವೀರ ಮರಣ ವನ್ನಪ್ಪಿದ ವೀರ ಯೋಧರಿಗೆ ಒಂದು ನಿಮಿಷದ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಮಹಾವಿ ದ್ಯಾಲಯದ ಪ್ರಾಚಾರ್ಯ ಎನ್.ಆರ್. ಸಗರ ಮಹಾವಿದ್ಯಾಲಯ ಆಡಳಿತ ಮಂಡಳಿ ಚೇರಮನ್‌ ಎಂ.ಎಸ್.  ಪಾಟೀಲ, ಶರಣಗೌಡ ಪಾಟೀಲ, ಪ್ರಾಚಾರ್ಯ ಜಿ.ಬಿ. ಹಂಚಿನಾಳಮಠ,  ಉಪನ್ಯಾಸಕರಾದ ಎಸ್.ಬಿ.ಪಾಟೀಲ, ಡಾ. ಡಿ.ಆರ್.ಮಳಖೇಡ ಇದ್ದರು.
ಎಸ್.ಬಿ.ಬಾಗೇವಾಡಿ ಪ್ರಾರ್ಥಿಸಿ ದರು, ಪ್ರೊ.ಆರ್.ಸಿ.ಗೂಳಿ ಸ್ವಾಗತಿಸಿ ದರು. ಪ್ರೊ.ಎ.ಬಿ.ಪೂಜಾರಿ ನಿರೂಪಿಸಿ ದರು, ಪ್ರೊ.ಆರ್.ಪಿ.ನಲವಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT