ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳುಬಿದ್ದ ‘ಸ್ವಾತಂತ್ರ್ಯ ಭವನ’!

ಕೂಡ್ಲಿಗಿಯ ಮಹದೇವ ಮೈಲಾರ ಕ್ರೀಡಾಂಗಣದಲ್ಲಿ ನಿರ್ಮಾಣ
Last Updated 30 ಜನವರಿ 2017, 5:36 IST
ಅಕ್ಷರ ಗಾತ್ರ
ಕೂಡ್ಲಿಗಿ: ದೇಶ ಸ್ವಾತಂತ್ರ್ಯ ಪಡೆದ ನೆನೆಪಿಗಾಗಿ ದೇಶಾದ್ಯಂತ ಅನೇಕ ಸ್ಮಾರಕ ಗಳನ್ನು ನಿರ್ಮಾಣ ಮಾಡಲಾಗಿದೆ. ಅದರಂತೆ ಕೂಡ್ಲಿಗಿ ಪಟ್ಟಣದ ಮಹ ದೇವ ಮೈಲಾರ ಕ್ರೀಡಾಂಗಣದಲ್ಲಿ ಭಾರ ತಕ್ಕೆ ಸ್ವಾತಂತ್ರ್ಯ ಬಂದ ದಿನ 1947 ಆ. 15ರಂದೇ ಭವನ ನಿರ್ಮಾಣಕ್ಕೆ ಚಾಲನೆ ನೀಡಿ ಅದಕ್ಕೆ ‘ಸ್ವಾತಂತ್ರ್ಯ ಭವನ’ ಎಂದು ನಾಮಕರಣ ಮಾಡಲಾಗಿತ್ತು.
 
ಆದರೆ ಸ್ವಾತಂತ್ರ್ಯದ ಸವಿ ನೆನಪುಗಳನ್ನು ಸಾರ ಬೇಕಿದ್ದ ಈ ಭವನ ಈಗ ಪಾಳು ಬಿದ್ದು ಹಂದಿ– ನಾಯಿಗಳ ವಾಸಸ್ಥಾನವಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ. 
 
ಈ ಭವದನದ ಪಕ್ಕದಲ್ಲಿಯೇ ಗಾಂಧಿ ಚಿತಾಭಸ್ಮವನ್ನು ಪ್ರತಿಷ್ಠಾಪನೆ ಮಾಡಿ, ಅದಕ್ಕೆ ಹುತಾತ್ಮರ ಸ್ಮಾಕರ ಎಂದು ನಾಮಕರಣ ಮಾಡಲಾಗಿದೆ. ಜನರಲ್ ಕಾರ್ಯಪ್ಪ, ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಸೇರಿದಂತೆ ಅನೇಕ ಕೇಂದ್ರ ಮಂತ್ರಿಗಳು ಮತ್ತು ರಾಜ್ಯದ ಮುಖ್ಯ ಮಂತ್ರಿಗಳು, ಮಂತ್ರಿಗಳು, ಅಧಿ ಕಾರಿಗಳು ಈ ಸ್ಮಾರಕಕ್ಕೆ ಬೇಟಿ ನೀಡಿ ದ್ದಾರೆ. ಆದರೆ ಇದರ ಪಕ್ಕದಲ್ಲಿಯೇ ಇರುವ ಸ್ವಾತಂತ್ರ್ಯ ಭವನವನ್ನು ಗಮನಿ ಸದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
 
ಅಂದಿನ ತಾಲ್ಲೂಕು ಬೋರ್ಡ್ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ರಾಗಿದ್ದ ಬಿಂದು ಮಾಧವ ಹಾಗೂ ವಿದ್ಯಾರ್ಥಿಗಳ ಶ್ರಮದಾನದಿಂದ ಈ ಭವನ ನಿರ್ಮಾಣಗೊಂಡಿದೆ. ಮಾಜಿ ಸಚಿವ ಸಂಡೂರಿನ ಎಂ.ವೈ. ಘೋರ್ಪಡೆ ಸಹ ಭವನ ನಿರ್ಮಾಣದಲ್ಲಿ ಶ್ರಮದಾನ ಮಾಡಿದ್ದಾರೆ ಎಂದು ನಿವೃತ್ತ ಶಿಕ್ಷಕ ಡಿ. ನಾಗರಾಜ್ ನೆನೆಯುತ್ತಾರೆ. ಕೆಲ ವರ್ಷ ಗಳ ನಂತರ ತಾಲ್ಲೂಕು ಬೋರ್ಡಿನ ಆರ್ಥಿಕ ನೆರವಿನಿಂದ ಇದಕ್ಕೆ ಒಂದು ರೂಪ ನೀಡಲಾಯಿತು.
 
ಕೊಟ್ಟೂರು ಕ್ಷೇತ್ರ ಶಾಸಕರಾಗಿದ್ದ ಮರುಳಸಿದ್ದನಗೌಡ ಅವರ ಅನುದಾನ ದಲ್ಲಿ ಮತ್ತೊಷ್ಟು ಅಭಿವೃದ್ಧಿ ಪಡಿಸಲಾ ಯಿತು. ಅನಂತರ ಕೆಲ ಕಾರಣಗಳಿಂದ ಸ್ವಾತಂತ್ರ್ಯ ಭವನ ನಿರ್ಲಕ್ಷ್ಯಕ್ಕೆ ಒಳಗಾಗಿತು. ಆದರೆ ಪಟ್ಟಣದಲ್ಲಿ ಕಾರ್ಯ ನಿರ್ವಹಿ ಸುತ್ತಿದ್ದ ಅನೇಕ ಅಧಿಕಾರಿಗಳು ಇಲ್ಲಿ ಬ್ಯಾಡ್‌ಮಿಂಟನ್ ಆಡಲು ಬರುತ್ತಿದ್ದರು. ಇದರಿಂದ ಇದನ್ನು ಒಂದು ಸುಸಜ್ಜಿತ ಅಡಿಟೋರಿಯಂನ್ನಾಗಿ ಪರಿವರ್ತಿಸಿ, ಬ್ಯಾಡ್ಮಿಂಟನ್ ಸೇರಿ ವಿವಿಧ ಉದ್ದೇಶ ಗಳಿಗೆ ಅನುಕೂಲವಾಗುವಂತೆ ನಿರ್ಮಿ ಸಲು ಮುಂದಾದರು. ಆದರೆ ಅಧಿಕಾರಿ ಗಳು ಇಲ್ಲಿಂದ ವರ್ಗಾವಣೆಯಾದ ನಂತರ ಯೋಜನೆ ಅಲ್ಲಿಯೇ ಉಳಿಯಿ ತಾದರೂ, ಪಟ್ಟಣ ಪೊಲೀಸ್ ಠಾಣೆಗೆ ಸಿಪಿಐ ಅಗಿ ಬಂದಿದ್ದ ವಿನ್ಸಂಟ್ ಶಾಂತ ಕುಮಾರ್ ಅವರ ಇಚ್ಛಾಶಕ್ತಿ ಹಾಗೂ ದಾನಿಗಳಿಂದ ಸಂಗ್ರಹ ಮಾಡಿದ ಹಣದಿಂದ ಸುತ್ತ ಸಿಮೆಂಟ್ ಕಂಬಗಳನ್ನು ಹಾಕಿ, ಗೊಡೆ ನಿರ್ಮಾಣ ಮಾಡಲಾ ಯಿತು. ಇನ್ನೇನು ಛಾವಣಿಗೆ ಸಿಮೆಂಟ್ ಸೀಟ್ ಹಾಕಬೇಕು ಎನ್ನುವಷ್ಟರಲ್ಲಿ ಶಾಂತ ಕುಮಾರ್ ಸಹ ವರ್ಗಾವಣೆಯಾದರು. ಅಲ್ಲಿಂದ ಇಲ್ಲಿಯವರೆಗೂ ಅವಶೇಷ ದಂತೆ ನಿಂತಿರುವ ಭವನ ಅನೈತಿಕ ಚಟು ವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
 
ಇತ್ತೀಚೆಗೆ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಜಿಲ್ಲಾಧಿಕಾರಿ ರಾಮ್ ಪ್ರಸಾದ್ ಮನೋಹರ್ ಈ ಕಟ್ಟಡ ವೀಕ್ಷಿಸಿ ಸಂಪೂರ್ಣ ಮಾಹಿತಿ ಪಡೆದರು. 
 
ನಂತರ ಲೋಕೋಪಯೋಗಿ ಇಲಾ ಖೆಯ ಸಹಾಯಕ ಎಂಜನಿಯರ್ ಶರಣ್ ಕುಮಾರ್ ಅವರನ್ನು ಸ್ಥಳಕ್ಕೆ ಕರೆಯಿಸಿ ಕೊಂಡು ತಕ್ಷಣ ಇದನ್ನು ಪೂರ್ಣಗೊ ಳಿಸಲು ಬೇಕಾಗುವ ಹಣ ಕಾಸಿನ ಯೋಜನೆ ರೂಪಿಸಿ ಕಳಿಸುವಂತೆ ಸೂಚಿಸಿ ದ್ದರು. ಆದರೆ ಇದುವರೆಗೂ ಕಾರ್ಯ ರೂಪಕ್ಕೆ ಬಂದಿಲ್ಲ. ಜಿಲ್ಲಾಧಿಕಾರಿ ಕೂಡ ಇದರ ಬಗ್ಗೆ ಮರೆತಂತಿದೆ.
 
ಇನ್ನಾದರೂ ಸ್ಥಳೀಯ ಜನ ಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ಇದನ್ನು ಪೂರ್ಣಗೊಳಿಸಿ ಒಂದು ಸುಂದರ ಭವನವನ್ನಾಗಿ ರೂಪಿಸಲು ಮುಂದಾಗ ಬೇಕು ಎಂದು ಸ್ಥಳೀಯರ ಒತ್ತಾಯ.
 
**
-ಎ.ಎಂ. ಸೋಮಶೇಖರಯ್ಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT