ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶರಣ ಸಾಹಿತ್ಯ ಪರಿಚಯಿಸಿದ ಹರ್ಡೇಕರ್ ಮಂಜಪ್ಪ’

Last Updated 30 ಜನವರಿ 2017, 5:53 IST
ಅಕ್ಷರ ಗಾತ್ರ

ಮುಳಗುಂದ : ಧರ್ಮ ಕ್ರಾಂತಿ, ಕಾಯಕ ನಿಷ್ಠಿಯಿಂದ ಶರಣ ಶರಣೆಯರ ವಚನ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಿದವರಲ್ಲಿ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರು ಒಬ್ಬರು. ಎಂದು ಧಾರವಾಡ ಮುರುಘಾ ಮಠ, ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಸ್ವಾಮಿಜೀ ಹೇಳಿದರು.

ಅವರು ಪಟ್ಟಣದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ ಕಲಾಭವನದಲ್ಲಿ ಜರುಗಿದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸ್ಥಳಿಯ ಕಸಾಪ ವತಿಯಿಂದ ಲಿಂ.ಗ ಂಗಮ್ಮಾ ಚ.ಚವಡಿ ಇವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಅನುಭವ ಮಂಟಪ ಸ್ಥಾಪಿಸಿ ವರ್ಣ, ವರ್ಗ,ಆಶ್ರಮ, ಲಿಂಗಬೇದಗಳ ಕಿತ್ತೆಸೆದು ಮಾನವರೆಲ್ಲರನ್ನು ಅಪ್ಪಿಕೊಂಡು ಸಕಲ ಜೀವಾತ್ಮರ ಲೇಸನ್ನು ಬಯಸಿದ 12ನೇ ಶತಮಾನದ ಶರಣ ಶರಣಿಯರ ವಚನಗಳನ್ನು ಸಂಗ್ರಹಸುವಲ್ಲಿ ಪ್ರಮುಖ ರಾದ ಫ.ಗು ಹಳಕಟ್ಟಿ, ಉತ್ತಂಗಿ ಚನ್ನಪ್ಪನವರ ಜತೆಗೆ ಹರ್ಡೇಕರ ಮಂಜಪ್ಪನವರು ಸಹ ವಚನ ಸಾಹಿ ತ್ಯವನ್ನು ಜಗತ್ತಿಗೆ ಪರಿಚಯಿಸಿದವರು. ಅವರ ಸಮರ್ಪಣಾ ಭಾವ ಎಲ್ಲರಿಗೂ ಮಾದರಿಯಾಗಿದೆ. ಎಂದರು.

ಕಾರ್ಯಕ್ರಮದಲ್ಲಿ ಹರ್ಡೇಕರ ಮಂಜಪ್ಪನವರ ಕುರಿತು ಉಪನ್ಯಾಸ ನೀಡಿದ ಪ್ರೋ ಸಿದ್ದಣ್ಣ ಲಂಗೋಟಿ ಮಾತನಾಡಿ, ಬಾಲ್ಯದಲ್ಲಿ ಹಲವು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿದ್ದ ಹಡರ್ೇಕರ ಮಂಜಪ್ಪನವರು. ಮುಂದೆ ಬಸವಣ್ಣನವರ ಒಂದು ವಚನ ಅವರ ಜೀನದ ದಿಕ್ಕನ್ನೆ ಬದಲಿಸಿತು. ಅಲ್ಲಿಂದ ಅವರ ಜೀವಿತಾವಧಿವರೆಗೂ ಶರಣ ಸಾಹಿತ್ಯಕ್ಕೆ ಜೀವನವನ್ನೇ ಮುಡುಪಾಗಿಟ್ಟು ದೇಶದ ಉದ್ದಗಲಕ್ಕು ಸಂಚರಿಸಿ ಹಲವು ಭಾಷೆಗಳಲ್ಲಿ ಶರಣ ಸಾಹಿತ್ಯವನ್ನು ಪಸರಿಸುವದರು. ಅಲ್ಲದೇ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧಿಜೀ ಒಡನಾಡಿಯಾಗಿದ್ದವರು ಎಂದರು.

ಗದಗ ಎಪಿಎಂಸಿ ಸದಸ್ಯ ಸಿ ಬಿ ಬಡ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಪಂ ಸದಸ್ಯ ಆರ್ ಎನ್ ದೇಶಪಾಂಡೆ, ಕಸಾಪ ತಾಲೂಕ ಅಧ್ಯಕ್ಷ ರವಿ ಶಿಶ್ವಿನಹಳ್ಳಿ ಕಸಾಪ ಕಾರ್ಯದರ್ಶಿಗಳಾದ ವಿವೇಕಾನಂ ದಗೌಡ ಪಾಟೀಲ, ಶಿವಾನಂದ ಗಿಡ್ನಂದಿ, ವಿ ಎಸ್ ಚವಡಿ, ಡಾ.ಎಸ್ ಸಿ ಚವಡಿ, ಪ್ರಾಚಾರ್ಯ ಎಸ್ ಎಫ ಮುದ್ದಿನಗೌಡ, ಶಿಕ್ಷಕ ಆರ್ ಆರ್ ಪಟ್ಟಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT