ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೀಪ್‌ ತವರಲ್ಲಿ ನೀರವ ಮೌನ

Last Updated 30 ಜನವರಿ 2017, 7:30 IST
ಅಕ್ಷರ ಗಾತ್ರ
ಹಾಸನ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಹುತಾತ್ಮ ರಾದ ಯೋಧನ ಸ್ವಗ್ರಾಮ ದೇವಿಹಳ್ಳಿಯಲ್ಲಿ ನಾಲ್ಕು ದಿನಗಳಿಂದ ನೀರವ ಮೌನ ಆವರಿಸಿದೆ. 
 
ಯೋಧನ ಪಾರ್ಥಿವ ಶರೀರಕ್ಕಾಗಿ ಗ್ರಾಮಸ್ಥರು ಮತ್ತು ಕುಟುಂಬದ ಸದ ಸ್ಯರು ಕಾಯುತ್ತಿದ್ದಾರೆ. ಅಂತಿಮ ಸಂಸ್ಕಾ ರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ದುರಂತ ಸ್ಥಳ ಸೋನಾ ಮಾರ್ಗದಲ್ಲಿ ಇನ್ನೂ ಹಿಮಪಾತವಾಗುತ್ತಿದೆ. ಹೀಗಾಗಿ, ಸೇನಾಧಿಕಾರಿಗಳು ಮಧ್ಯಾಹ್ನ 12ರಿಂದ ಮಧ್ಯಾಹ್ನ 3ರವರೆಗೆ ಮಾತ್ರ ರಕ್ಷಣಾ ಕಾರ್ಯ ಕೈಗೊಳ್ಳಲು ಸಾಧ್ಯ. ಗುರೆಜ್‌ ವಲಯದ ಹೆಲಿಪ್ಯಾಡ್‌ ಸಹ ಹಿಮದಲ್ಲಿ ಮುಚ್ಚಿ ಹೋಗಿರುವುದರಿಂದ ಹೆಲಿಕಾ ಫ್ಟರ್‌ ಹಾರಾಟ ಸಾಧ್ಯವಾಗಿಲ್ಲ. ಆದ ಕಾರಣ ಪಾರ್ಥಿವ ಶರೀರ ತವರು ತಲುಪುವುದು ತಡವಾಗುತ್ತಿದೆ.
 
ಕುಟುಂಬಸ್ಥರಲ್ಲೂ ದುಃಖ ಮಡುಗಟ್ಟಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ಸಂದೀಪ್‌ ತಾಯಿ ಗಂಗಮ್ಮ ಅವರು ಚೇತರಿಸಿಕೊಳ್ಳು ತ್ತಿದ್ದಾರೆ. ಮಗನನ್ನು ಕಳೆದುಕೊಂಡ ನೋವಿನಿಂದ ಪೋಷಕರು ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಬಂಧುಗಳು, ಸ್ನೇಹಿತರು ಮತ್ತು ಗ್ರಾಮಸ್ಥರು ಕುಟುಂಬದ ಸದಸ್ಯರಿಗೆ ಧೈರ್ಯ ಹೇಳುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆ ಯೋಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಮರ್ಪಿಸಿದ್ದಾರೆ. 
 
ಹಾಸನದ ಕೃಷ್ಣ ಕಾಲೇಜಿನಲ್ಲಿ ಸಂದೀಪ್‌ ಕುಮಾರ್‌ ಪಿಯು ವ್ಯಾಸಂಗ ಮಾಡಿದ ಬಳಿಕ ಖಾಸಗಿ ಕಂಪೆನಿಯಲ್ಲಿ ಕೆಲ ತಿಂಗಳು ಮಾರಾಟ ಪ್ರತಿನಿಧಿ ಯಾಗಿಯೂ ಕೆಲಸ ನಿರ್ವಹಿಸಿದ್ದರು. 2010ರಲ್ಲಿ ಮಂಗಳೂರಿನಲ್ಲಿ ನಡೆದ ಸೇನಾ ನೇಮಕಾತಿ ಶಿಬಿರದಲ್ಲಿ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿದ್ದರು. 
 
 ಜಿಲ್ಲಾಧಿಕಾರಿ ವಿ.ಚೈತ್ರಾ, ಉಪ ವಿಭಾಗಾಧಿಕಾರಿ ಎಚ್‌.ಎಲ್‌.ನಾಗ ರಾಜು,  ಮತ್ತು ಪೊಲೀಸ್‌ ವರಿಷ್ಠಾಧಿ ಕಾರಿ ರಾಹುಲ್‌ಕುಮಾರ್‌ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. 
 
‘ನಾನು ಜಿಲ್ಲಾಧಿಕಾರಿಯಾಗಿ ಬಂದಿಲ್ಲ. ಸಾಮಾನ್ಯ ಮಹಿಳೆಯಾಗಿ ಬಂದಿದ್ದೇನೆ. ನಿಮ್ಮ ಮಗ ವೀರಯೋಧ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ನೀವು ಆಹಾರ ಸೇವಿಸದೆ ಇರುವುದು ಸರಿಯಲ್ಲ’ ಎಂದು ತಾಯಿ ಗಂಗಮ್ಮ ಅವರಿಗೆ ಜಿಲ್ಲಾಧಿಕಾರಿ ಚೈತ್ರಾ ಅವರೇ ಕೈ ತುತ್ತು ತಿನ್ನಿಸಿದರು. 
 
‘ಪಾರ್ಥಿವ ಶರೀರ ಬರುವ   ಕುರಿತು ಅಧಿಕಾರಿಗಳಿಂದ ಖಚಿತ ಮಾಹಿತಿ ಸಿಕ್ಕಿಲ್ಲ. ಪ್ರತಿಕೂಲ ಹವಾಮಾನದಿಂದಾಗಿ ವಿಳಂಬ ವಾಗುತ್ತಿದೆ. ಅಂತಿಮ ವಿಧಿವಿಧಾನಕ್ಕೆ ಎಲ್ಲ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿ ಗಳಿಗೆ ಸೂಚನೆ ನೀಡಿದ್ದೇನೆ. ರಜೆ ಇದ್ದ ಕಾರಣ ಬರಲು ಆಗಿರಲಿಲ್ಲ’ ಎಂದು ಡಿ.ಸಿ ತಿಳಿಸಿದರು.
 
**
ಕಳೆದ ವರ್ಷ ಸಿಯಾಚಿನ್‌ನಲ್ಲಿ ವೀರ ಮರಣ ಹೊಂದಿದ ಯೋಧ ಟಿ.ಟಿ.ನಾಗೇಶ್‌ ಪಾರ್ಥಿವ ಶರೀರ ಬರಲು ಹತ್ತು ದಿನ ಬೇಕಾಯಿತು. ಅದೇ ಸ್ಥಿತಿ ಈಗ ಬಾರದಿದ್ದರೆ ಸಾಕು.
-ಗ್ರಾಮಸ್ಥರು
ದೇವಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT