ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಮೀನು ಕಬಳಿಕೆ ಯತ್ನ: ದೂರು

Last Updated 30 ಜನವರಿ 2017, 7:15 IST
ಅಕ್ಷರ ಗಾತ್ರ
ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ದಲ್ಲಿ, ಸ.ನಂ.3ರಲ್ಲಿ ಇರುವ ಸರ್ಕಾರಿ ಭೂಮಿಯನ್ನು ಕಬಳಿಸಲು ಯತ್ನ ನಡೆಯುತ್ತಿದೆ ಎಂದು ಗ್ರಾಮದ ದಲಿತ ಮುಖಂಡರು ಆರೋಪಿಸಿದರು.
 
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್‌ ಕೆ. ಕೃಷ್ಣ ಅವರನ್ನು ಶನಿ ವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
 
ಬೆಳಗೊಳದ ಗರಡಿ ಸಂಘದ ಹೆಸರಿನಲ್ಲಿ ಸ.ನಂ. 3ರಲ್ಲಿ ಎರಡು ಎಕರೆ ಜಾಗ ಇದ್ದು, ಅದರ ಪಕ್ಕದಲ್ಲಿರುವ ಸರ್ಕಾರಿ ಜಮೀನನ್ನು ಅತಿಕ್ರಮಿಸುವ ಹುನ್ನಾರ ನಡೆಯುತ್ತಿದೆ. ಈ ಜಮೀನನ್ನು ಬೌದ್ಧ ಮಂದಿರ ನಿರ್ಮಿಸಲು ಮೀಸಲಾಗಿ ಡಬೇಕು ಎಂದು ಡಾ.ಅಂಬೇಡ್ಕರ್‌ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಗಂಜಾಂ ರವಿಚಂದ್ರ ಒತ್ತಾಯಿಸಿದರು.
 
ಬೆಳಗೊಳ ಗ್ರಾಮದಲ್ಲಿ ಗರಡಿ ಮನೆಗೆ ಸೇರಿದ ಜಾಗಕ್ಕೆ ಹೊಂದಿಕೊಂಡಿ ರುವ ಸರ್ಕಾರಿ ಸ್ಥಳ ಲಕ್ಷಾಂತರ ರೂಪಾಯಿ ಬೆಲೆ ಬಾಳುವು ದರಿಂದ ಅದನ್ನು ಕಬಳಸುವ ಯತ್ನ ನಡೆ ಯುತ್ತಿದ್ದು, ಈ ಜಾಗವನ್ನು ತಾಲ್ಲೂಕು ಆಡಳಿತ ವಶಕ್ಕೆ ಪಡೆದುಕೊಳ್ಳಬೇಕು ಎಂದು ಅಪೆಕ್‌್ಸ ಬ್ಯಾಂಕ್‌ ಮಾಜಿ ನಿರ್ದೇ ಶಕ ಅರಕೆರೆ ಶಿವಯ್ಯ ಮನವಿ ಮಾಡಿದರು. 
 
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ ಕೆ.ಕೃಷ್ಣ, ‘ಲಭ್ಯ ಸರ್ಕಾರಿ ಜಾಗದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸ್ಥಳೀಯ ಕಂದಾಯ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗು ವುದು’ ಎಂದರು. 
 
ಗ್ರಾಮದ ಜವರಯ್ಯ, ರಾಮಯ್ಯ, ಬಿ.ಪಿ. ಮಂಜು, ಸೋಮಶೇಖರ್‌ ಇತರರು ಇದ್ದರು.
 
**
ಗಾಂಧೀಜಿಯ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಈ ದೇಶ  ಮುಂದಿನ 20 ವರ್ಷಗಳಲ್ಲಿ ವಿಶ್ವದಲ್ಲಿಯೇ ಅಗ್ರಗಣ್ಯ ದೇಶವಾಗುವುದರಲ್ಲಿ ಸಂಶಯವಿಲ್ಲ
-ಡಿ.ಸಿ.ತಮ್ಮಣ್ಣ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT