ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಿಕ ಮಾಧ್ಯಮಗಳೇ ಗುರಿ ಯಾಕೆ?

ಪತ್ರಕರ್ತರ ಅಂತರಂಗ–ಬಹಿರಂಗ ಗೋಷ್ಠಿಯಲ್ಲಿ ಮಾಧ್ಯಮಗಳ ಕುರಿತ ಸಮಾಲೋಚನೆ
Last Updated 30 ಜನವರಿ 2017, 7:18 IST
ಅಕ್ಷರ ಗಾತ್ರ
ಹಾಸನ: ‘ಆಧುನಿಕತೆ ಬೆಳೆದಂತೆ ಪತ್ರಿಕೋದ್ಯಮದಲ್ಲೂ ಸಾಕಷ್ಟು ಬದಲಾವಣೆ ಆಗಿವೆ. ಆದರೆ, ಸುದ್ದಿಯನ್ನು ವಿಮರ್ಶಿಸುವಾಗ ಸಾಂಪ್ರ ದಾಯಿಕವಾದ ಪತ್ರಿಕೆ ಹಾಗೂ ಟೆಲಿವಿಷನ್‌ಗಳನ್ನಷ್ಟೇ ಹೊಣೆಗಾರ ರನ್ನಾಗಿ ಮಾಡುವುದು ಯಾಕೆ?’
 
– ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಪತ್ರಕರ್ತರ ಅಂತರಂಗ–ಬಹಿರಂಗ ಗೋಷ್ಠಿಯ ‘ಮಾಧ್ಯಮ–ಪ್ರಾಮಾಣಿಕತೆ–ಅವಸರ’ ಸಂವಾದದಲ್ಲಿ ಉದ್ಭವಿಸಿದ ಪ್ರಶ್ನೆ. 
 
ಪತ್ರಿಕೆಗಳಿಗಿಂತ ಫೇಸ್‌ಬುಕ್‌, ವಾಟ್ಸ್‌ಆ್ಯಪ್, ಟ್ವಿಟರ್‌ ಹಾಗೂ ಇತರೆ ಮಾಧ್ಯಮ ಪತ್ರಕರ್ತನ ಕೆಲಸ ಮಾಡುತ್ತಿವೆ. ಆದರೆ, ವಿಮರ್ಶಾ ಜಗತ್ತು ಪತ್ರಿಕೆ, ಟಿ.ವಿ.ಗಳನ್ನು ಮಾತ್ರ ಬೈಯುತ್ತಿದೆ 
 
ಎಂದು ಸುದ್ದಿ ವಾಹಿನಿ ಸಂಪಾದಕ ಹಮೀದ್ ಪಾಳ್ಯ ತಿಳಿಸಿದರು.
 
ಪತ್ರಕರ್ತರಿಗೆ ಯಾವುದೇ ಭದ್ರತೆ ಇರುವುದಿಲ್ಲ. ಕಡಿಮೆ ಸಂಬಳ ಪಡೆಯುವ ಆತ ಲಕ್ಷಾಂತರ ಜನರ ಮತ ಪಡೆದ ಸಂಸದ, ಶಾಸಕರ ವಿರುದ್ಧ ಬರೆಯುವುದು ಸವಾಲಿನ ಕೆಲಸ. ಸಂವಿಧಾನ ಕಾಪಾಡುವ ಜವಾಬ್ದಾರಿ ಪತ್ರಕರ್ತರದ್ದಾಗಿರುತ್ತದೆ. ಒಳ್ಳೆಯ ಸಮಾಜ ನಿರ್ಮಾಣಕ್ಕೆ ಕೈಲಾದ ಮಟ್ಟಿಗೆ ಕೆಲಸ ಮಾಡಬೇಕು. ವರದಿಗಾರನ ಜವಾಬ್ದಾರಿ ಕೇವಲ ಭಾಷಣ ಬರೆಯುವುದಲ್ಲ. ಸಂಶೋಧನಾ ಬರಹಗಳತ್ತ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.
 
‘ನೆಟ್ ಜರ್ನಲಿಸಂ ಹೇಳುವ ನೂರೆಂಟು ಸುಳ್ಳುಗಳು’ ವಿಷಯವಾಗಿ ಪತ್ರಕರ್ತ ಗೌರೀಶ್ ಅಕ್ಕಿ ಮಾತನಾಡಿ, ನೆಟ್‌ ಮಾಧ್ಯಮ ಸುಳ್ಳು ಹೇಳುತ್ತದೆ ಎಂಬ ವಾದ ತಪ್ಪು ಎಂದು ಪ್ರತಿಪಾದಿಸಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಯಾವುದೇ ತಪ್ಪು ಮಾಹಿತಿ ಬಿತ್ತರವಾದರೆ ಅದನ್ನು ವಿರೋಧಿಸುವ, ತಪ್ಪು ತಿದ್ದುವುದಕ್ಕೂ ಅವಕಾಶ ಇದೆ. ಆದ್ದರಿಂದ ಇಲ್ಲಿ ತಪ್ಪು ಸಂದೇಶ ಬಿತ್ತರವಾಗುವುದು ವಿರಳ ಎಂದರು.
 
ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಜೋಗಿ ಮಾತನಾಡಿ, ಯಾವ ಪತ್ರಿಕೆಯು ಸಂಪಾದಕರ ಹಿಡಿತದಲ್ಲಿರುವುದಿಲ್ಲ. ಜಾಹೀರಾತು ವಿಭಾಗ, ಆಡಳಿತ ಮಂಡಳಿ, ಆರ್ಥಿಕ ವಿಭಾಗ ಈ ಎಲ್ಲ ಹಂತಗಳಲ್ಲಿ ಸುದ್ದಿ ಚರ್ಚೆಗೆ ಒಳಪಡುತ್ತದೆ. ಈ ಕಾರಣದಿಂದ ಕೆಲವು ಸುದ್ದಿಗಳು ಓದುಗರನ್ನು ತಲುಪುವುದಿಲ್ಲ ಎಂದರು.
 
ಟಿಆರ್‌ಪಿಗಾಗಿ ಅವಸರದ ಸುದ್ದಿ ಬಿತ್ತರಿಸುವ ಟೆಲಿವಿಷನ್ ಮಾಧ್ಯಮ ಕೆಲವು ಬಾರಿ ತಪ್ಪು ಸಂದೇಶ ಸಾರುತ್ತವೆ. ಇದನ್ನೆಲ್ಲ ಸಹಿಸಿಕೊಳ್ಳುವ ಶಕ್ತಿಯನ್ನು ಗ್ರಾಹಕರು ಬೆಳೆಸಿಕೊಳ್ಳಬೇಕು. ಪತ್ರಿಕೆ ಎಂದರೆ ಮಾರಾಟದ ಸರಕಲ್ಲ, ಬದಲಾಗಿ ಮೌಲ್ಯಗಳನ್ನು ಮಾರುವ ಉದ್ಯಮಗವಾಗಬೇಕು ಎಂದು ಆಶಿಸಿದರು.
 
ಪತ್ರಿಕೋದ್ಯಮದಲ್ಲಿ ಪ್ರಾಮಾಣಿಕತೆ ಉಳಿಸಿಕೊಳ್ಳಬೇಕೆಂದರೆ ವೈ.ಎನ್.ಕೆ, ಶಾಮರಾಯ, ಡಿ.ವಿ.ಗುಂಡಪ್ಪ ಅವರ ಜೀವನ ತತ್ವ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
 
ಪರ್ತಕರ್ತೆ ಶ್ರೀದೇವಿ ಕಳಸದ ಅವರು ‘ಟೆಲಿವಿಷನ್ ಮತ್ತು ನೈತಿಕತೆ’ ವಿಷಯವಾಗಿ ಮಾತನಾಡಿದರು.
 
ಸಮ್ಮೇಳನ ಅಧ್ಯಕ್ಷ ಮದನಗೌಡ, ಸಂಪಾದಕ ಕೆಂಚೇಗೌಡ, ಹಿರಿಯ ಪತ್ರಕರ್ತ ಬಿ.ಆರ್‌. ಉದಯ ಕುಮಾರ್‌, ಹರೀಶ್‌  ಕಾರ್ಯಕ್ರಮದಲ್ಲಿ ಇದ್ದರು.
 
**
ಭಾಷೆ ಮೇಲೆ ಹಿಡಿತ ಸಾಧಿಸದ, ಸಾಹಿತ್ಯ ಓದದ, ಎಡ–ಬಲಗಳ ಮಾಹಿತಿ ಅರಿಯದ ವಿದ್ಯಾರ್ಥಿ ಪತ್ರಿಕೋದ್ಯಮಕ್ಕೆ ಬಾರದಿರುವುದೇ ಒಳಿತು 
-ಜೋಗಿ
ಪತ್ರಕರ್ತ
 
**
ಪತ್ರಕರ್ತ ಎಂದರೆ ತತ್ವಜ್ಞಾನಿ ಅಲ್ಲ. ಆತನು ಕೂಡ ಎಲ್ಲರಂತೆ ಸಾಮಾನ್ಯ ವ್ಯಕ್ತಿ. ಆದರೆ, ಆತ ವಹಿಸಿಕೊಂಡಿರುವ ಜವಾಬ್ದಾರಿ ಮೌಲ್ಯಯುತವಾಗಿರುತ್ತದೆ 
-ಗೌರೀಶ್‌ ಅಕ್ಕಿ
ಪತ್ರಕರ್ತ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT